ಪುತ್ತೂರು : ಕ್ಯಾಂಪ್ಕೋ ನಿಯಮಿತ, ಮಂಗಳೂರು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎ ಆರ್ ಡಿ ಎಫ್) ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪುತ್ತೂರು, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ 5ನೇ ಬೃಹತ್ ಕೃಷಿ ಯಂತ್ರ ಮೇಳ -2023 ಮತ್ತು ಕನಸಿನ ಮನೆ ಕಾರ್ಯಕ್ರಮದ 3ನೇಯ ದಿನದಂದು ಅಡಿಕೆ ಮತ್ತು ಇನ್ನಿತರ ತೋಟಗಾರಿಕಾ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಔಷಧೀಯ ಸಸ್ಯಗಳು ಎಂಬ ವಿಚಾರಕುರಿತು ವಿಚಾರ ಗೋಷ್ಟಿ ನಡೆಯಿತು.
ಕಾರ್ಕಳ ಕರ್ನಾಟಕ ರಾಜ್ಯ ಔಷಧೀಯ ಗಿಡಮೂಲಿಕ ಪ್ರಾಧಿಕಾರ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸಂಚಾಲಕ ಡಾ.ಸತ್ಯನಾರಾಯಣ ಭಟ್ ಕಾರ್ಕಳ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ, ಪ್ರತಿಯೊಬ್ಬ ಕೃಷಿಕನ ಅಡಿಕೆ ತೋಟದಲ್ಲಿ ಔಷಧೀಯ ಗಿಡ ಮರಗಳನ್ನು ಬೆಳೆಸಬೇಕು. ಹೀಗೆ ಬೆಳೆಸಿದ್ದಲ್ಲಿ ನಮಗೆ ಬರುವ ಅನೇಕ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ನಮ್ಮ ಮನೆಯಂಗಳದಲ್ಲಿ ನಾವೇ ಔಷಧೀಯನ್ನು ತಯಾರಿಸಿದ ತೃಪ್ತಿ ನಮಗಿರುತ್ತದೆ. ಎರ್ಪೆಮರದ ಎಲೆ,ಪಾಳೆಯ ಮರದ ಕೆತ್ತೆ, ತುಳಸಿ,ಮಾಫಲ,ಕದಂಬ ಮರ, ಇಪ್ಪೆಮರ, ಓಟೆಹುಳಿ,ಲಾವಂಚ ಇವೆಲ್ಲದರ ಔಷಧೀಯ ಮಹಿಮೆಯನ್ನು ತಿಳಿಸಿದರು.
ಪೂರ್ವಿಕರು ಕೊಟ್ಟ ಔಷಧೀಯ ಜ್ಞಾನವನ್ನು ಇಂದು ಯುವ ಜನಾಂಗ ಅರಿಯಬೇಕಿದೆ. ಆಟಿ ಅಮಾವಾಸ್ಯೆಯಿಂದ ಆರಂಭಿಸಿ ಬಲೀಂದ್ರ ಪೂಜೆಯವರೆಗೆ ಬಳಸಬೇಕಾದ ಪಾಲೆಯ ಮರವನ್ನು ನಾವಿಂದು ಮರೆತು ಇನ್ಯಾವುದೋ ಇಂಗ್ಲೀಷ್ ಮದ್ದಿನತ್ತ ನಮ್ಮ ಗಮನ ಹೋಗುತ್ತಿರುವುದು ಬೇಸರದ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ನಿರೂಪಿಸಿದ ಕೃಷಿಯಂತ್ರ ಮೇಳದ ವಿಶೇಷ ಸಂಚಿಕೆ ವಿಕಸನವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್‍ರಾವ್ ಪಿ, ಕಾರ್ಯದರ್ಶಿಗಳಾದ ಕೆ.ಎಂ ಕೃಷ್ಣ ಭಟ್, ಕ್ಯಾಂಪ್ಕೋ ನಿಯಮಿತ ಶಂಕರನಾರಾಯಣ ಭಟ್ ಖಂಡಿಗೆ, ಕೃಷ್ಣಕುಮಾರ್, ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೊ.ತೇಜಸ್ವಿನಿ ಹೆಚ್. ಪಿ ನಿರೂಪಿಸಿ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಶ್ವೇತಾಂಬಿಕಾ ಪಿ ವಂದಿಸಿ, ಸುಮನಾ ಹಾಗೂ ಅನಘಾ ಪ್ರಾರ್ಥಿಸಿದರು.
ಕಾರ್ಯಕ್ರಮದ ನಂತರ ಕೃಷಿ ಸಂಬಂಧಿತ ವಿದ್ಯಾರ್ಥಿಗಳಿಗಾಗಿ ಹಾಗೂ ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ಫಲಿತಾಂಶ:
ಪ್ರಥಮ : ಪ್ರಜ್ವಲ್ ಮತ್ತು ಮನ್ವಿತ್, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು.
ದ್ವಿತೀಯ : ಶರಣ್ಯ ಮತ್ತು ಸುಶ್ಮಿತಾ, ಎಂಕಾಂ ವಿಭಾಗವಿವೇಕಾನಂದ ಕಾಲೇಜು ಪುತ್ತೂರು.
ತೃತೀಯ : ಗೌತಮಿ ಕಾಯರ್ಗ. ಜಸ್ಮಿತಾ ಕಾಯರ್ಗ. ಕೃಷಿ ವಿಶ್ವವಿದ್ಯಾನಿಲಯ ಶಿವಮೊಗ್ಗ.
ಸಾರ್ವಜನಿಕ ವಿಭಾಗ:
ಪ್ರಥಮ : ಸಂತೋಷ ಕುಮಾರ್ ಕೆದಂಬಾಡಿ
ದ್ವಿತೀಯ : ಸತ್ಯಶಂಕರ್ ಚೂಂತಾರು
ತೃತೀಯ : ವಸಂತ ಎನ್.
ರಸಪ್ರಶ್ನೆ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಂದ ಹಾಗೂ ಪೂರ್ಣಿಮಾ ರೈ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜನಜಂಗುಳಿಯಿಂದ ತುಂಬಿ ತುಳುಕಿದ ಕೃಷಿ ಯಂತ್ರ ಮೇಳ:
ಮೂರು ದಿನಗಳ ಕಾಲ ನಡೆದರಾಜ್ಯ ಮಟ್ಟದ ಕೃಷಿ ಯಂತ್ರ ಮೇಳದಲ್ಲಿ ಜನತುಂಬಿ ತುಳುಕಿದ್ದು ಸಾವಿರಾರು ಜನ ಇದರ ಫಲಾನುಭವಿಗಳಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ