ಎಸ್.ಎಸ್.ಎಲ್.ಸಿ ಪರೀಕ್ಷೆ ಭಯ ಬೇಡ: ಹಾವಂಜೆ ಗ್ರಾಮ ವಿಕಾಸ ಸಮಿತಿಯಿಂದ ಪರೀಕ್ಷಾ ಸಿದ್ಧತೆ ಕಾರ್ಯಕ್ರಮ

Upayuktha
0

ಹಾವಂಜೆ : ಹಾವಂಜೆ ಗ್ರಾಮ ವಿಕಾಸ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ 'ಎಸ್.ಎಸ್.ಎಲ್.ಸಿ ಪರೀಕ್ಷೆ ಭಯ ಬೇಡ' ಕಾರ್ಯಕ್ರಮ ಭಾನುವಾರ ಹಾವಂಜೆಯ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆಯಿತು. ಉಪನ್ಯಾಸಕ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಗಣೇಶ್ ಪ್ರಸಾದ್ ಜಿ. ನಾಯಕ್‍ ಉದ್ಘಾಟನೆ ನೆರವೇರಿಸಿ ಸಂಪನ್ಮೂಲ ಉಪನ್ಯಾಸ ನೀಡಿದರು.


ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯಕ್ಕೆಅನುಗುಣವಾಗಿ ವೇಳಾಪಟ್ಟಿ ಹಾಕಿ ಅಧ್ಯಯನ ನಡೆಸಿದರೆ ಪರಿಣಾಮಕಾರಿ ಫಲಿತಾಂಶವನ್ನು ನಿರೀಕ್ಷಿಸಬಹುದು. ಕೇವಲ ಬುದ್ಧಿವಂತಿಕೆಯಿಂದ ದೊಡ್ಡ ಮಟ್ಟಿನ ಬದಲಾವಣೆ ಅಸಾಧ್ಯ, ಬುದ್ಧಿವಂತಿಕೆ ಅಭಿವೃದ್ಧಿಪಡಿಸುವ ಜತೆಗೆ ಕಠಿಣ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದರೆ ಯಶಸ್ಸಿನ್ನತ್ತ ಮುನ್ನುಗ್ಗಬಹುದು ಎಂದರು.


ಹಾವಂಜೆಗ್ರಾಮ ವಿಕಾಸ ಸಮಿತಿಯ ಸಂಚಾಲಕ ಸತ್ಯನಾರಾಯಣ ಆಚಾರ್ಯ ಗೋಳಿಕಟ್ಟೆ, ಗ್ರಾಮ ಪಂಚಾಯತ್ ಸದಸ್ಯ ಗುರುರಾಜ್‍ ಕಾರ್ತಿಬೈಲು, ಪ್ರಮೋದ್ ಹಾವಂಜೆ, ಹಿಂ.ಜಾ.ವೇ ಹಾವಂಜೆ ಘಟಕ ಸಂಚಾಲಕ ಅಶೋಕ್ ಶೇಡಿಗುಳಿ, ಹಾವಂಜೆ ಗ್ರಾಮ ವಿಕಾಸ ಸಮಿತಿ ವಿದ್ಯಾರ್ಥಿ ಪ್ರಮುಖರಾದ ಆದರ್ಶ್, ಅಶ್ವಿನಿ, ಸ್ವಚ್ಛತಾ ಸಮಿತಿ ಪ್ರಮುಖ್‍ ಅಜಿತ್‍ ಆಚಾರ್ಯ ಕಾರ್ತಿಬೈಲು, ಮಂಜುನಾಥ್, ಶ್ವೇತಾ ಉಪಸ್ಥಿತರಿದ್ದರು. ಹಾವಂಜೆ ಗ್ರಾಮ ಪಂಚಾಯತ್‍ ಅಧ್ಯಕ್ಷರು ಮತ್ತು ಗ್ರಾಮ ವಿಕಾಸ ಸಮಿತಿಯ ಸದಸ್ಯರಾದ ಅಜಿತ್ ಗೋಳಿಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Advt Slider:
To Top