ಮಂಗಳೂರು ಲಿಟ್‌ ಫೆಸ್ಟ್‌ 2023: ಎರಡು ದಿನಗಳ ರಾಷ್ಟ್ರೀಯತಾ ಸಾಹಿತ್ಯ ಉತ್ಸವ ಸಂಪನ್ನ

Upayuktha
0

ಮಂಗಳೂರು: ಪ್ರತಿಷ್ಠಿತ ಭಾರತ್‌ ಲಿಟ್ ಫೌಂಡೇಶನ್‌ ಆಯೋಜಿಸಿದ ಮಂಗಳೂರು ಲಿಟ್‌ ಫೆಸ್ಟ್‌ನ ಐದನೇ ಆವೃತ್ತಿಯು ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಎರಡು ದಿನಗಳ ಕಾಲ (ಫೆ.18-19) ನಡೆಯಿತು.


ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜ್‌ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ವಿನಯ್ ಹೆಗ್ಡೆ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ಮಂಗಳೂರು ನಗರವು ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಮಂಗಳೂರು ಪ್ರದೇಶವು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬಹಳ ಎತ್ತರಕ್ಕೆ ಏರಿದೆ. ಸ್ವಾತಂತ್ರ್‍ಯ ಪೂರ್ವದಲ್ಲಿಯೇ ಮಂಗಳೂರಿಗೆ ವಿಶೇಷ ಸ್ಥಾನವಿತ್ತು. ಭೌಗೋಳಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಈ ಪ್ರದೇಶದಲ್ಲಿ ಆಯೋಜಿಸಲಾದ ಲಿಟ್‌ ಫೆಸ್ಟ್‌ ಜಗತ್ತಿಗೇ ಮಾದರಿಯಾಗಲಿ ಎಂದು ಅವರು ಹಾರೈಸಿದರು.


ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಹಿರಿಯ ಕಿರಿಯ ಉದ್ಯಮಿಗಳು ಸಹಿತ ಸಾಮಾನ್ಯ ನಾಗರಿಕರು, ಜನಸಮುದಾಯಗಳ ಕೊಡುಗೆ ಅನನ್ಯ ಎಂದು ವಿನಯ್‌ ಹೆಗ್ಡೆ ನುಡಿದರು.


ಲಿಟ್ ಫೆಸ್ಟ್‌ 2023 ಉದ್ಘಾಟನೆ ಕಾರ್ಯಕ್ರಮದಲ್ಲಿ ಜಾನಪದ, ಇತಿಹಾಸ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ತುಕಾರಾಂ ಪೂಜಾರಿ ಅವರಿಗೆ ಲಿಟ್‌ ಫೆಸ್ಟ್ 2023- ಜೀವಮಾನದ ಶ್ರೇಷ್ಠ ಸಾಧನೆ ಪ್ರಸ್ತಿ ನೀಡಿ ಗೌರವಿಸಲಾಯಿತು. ಸ್ವರಾಜ್ಯ ಪತ್ರಿಕೆಯ ಆರ್‍‌ ಜಗನ್ನಾಥ್‌ ಅವರು ತುಕಾರಾಮ ಪೂಜಾರಿಯವರಿಗೆ ಶಾಲು ಹೊದೆಸಿ, ಪೇಟಾ ತೊಡಿಸಿ ಗೌರವಿಸಿದರು. ಈ ಸಂದರ್ಭ ಭಾರತ್‌ ಫೌಂಡೇಶನ್‌ ಟ್ರಸ್ಟಿಗಳಾದ ಕ್ಯಾ. ಬೃಜೇಶ್‌ ಚೌಟ, ಸುನಿಲ್‌ ಕುಲಕರ್ಣಿ ಉಪಸ್ಥಿತರಿದ್ದರು.


ವಿಚಾರ ಸಂಕಿರಣದಲ್ಲಿ ಒಟ್ಟು ಅಧಿವೇಶನಗಳು ನಿಗದಿಯಾಗಿದ್ದವು. 55ಕ್ಕೂ ಹೆಚ್ಚು ವಾಗ್ಮಿಗಳು ಭಾಗಿಯಾದರು. ಪ್ರತಿ ಸೆಷನ್‌ ಕೊನೆಯಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ನಡೆಸಿ ವಿಜೇತರಿಗೆ ಪುಸ್ತಕವನ್ನು ಬಹುಮಾನವಾಗಿ ನೀಡಲಾಯಿತು..


ಪುಸ್ತಕ ಮಳಿಗೆ, ತುಳು ಲಿಪಿ ಕಲಿಕಾ ಕಾರ್ಯಾಗಾರ, ಮಕ್ಕಳ ಸಾಹಿತ್ಯ ಕುರಿತು ಪಾಲಕರಿಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಲೇಖಕರೊಂದಿಗೆ ಸಂವಾದ ಈ ಬಾರಿಯ ಲಿಟ್‌ ಫಸ್ಟ್‌ನ ವಿಶೇಷತೆಯಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top