ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಳದ ಆವರಣದಲ್ಲಿ ಆಚರಣೆ
ಮಂಗಳೂರು: ಶತಾಯುಷಿ ಪಣಂಬೂರು ಶ್ರೀಮತಿ ಗಂಗಮ್ಮ ಸೀತಾರಾಮ ಉಪಾಧ್ಯಾಯರ ಶತಮಾನೋತ್ಸವ ಸಂಭ್ರಮವನ್ನು ಫೆಬ್ರವರಿ 26 ಭಾನುವಾರದಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಳದ ಆವರಣದಲ್ಲಿ ಆಚರಿಸಲಾಗುತ್ತದೆ. ಮುಂಜಾನೆ 10 ಗಂಟೆಗೆ ವೈಭವದ ಮೆರವಣಿಗೆಯೊಂದಿಗೆ ಶ್ರೀ ದೇವಳಕ್ಕೆ ಆಗಮಿಸಿ ತದನಂತರ ಪಾದಪೂಜೆ ಸಹಿತ ಅಷ್ಟಾವಧಾನ ಕಾರ್ಯಕ್ರಮಗಳು ವೇದಮೂರ್ತಿ ಸುಬ್ರಮಣ್ಯ ಕಾರಂತರ ನೇತೃತ್ವದಲ್ಲಿ ಜರಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತಾಂಜಲಿ ಕೊಟ್ಟಾರ ಇವರಿಂದ ನಾಟ್ಯ ರಾಣಿ ಪುರಸ್ಕೃತೆ ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್ ನಿರ್ದೇಶನದಲ್ಲಿ ಪುಣ್ಯಕೋಟಿ ನೃತ್ಯರೂಪಕ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ತುಳಸಿ ಉಪಾಧ್ಯಾಯ, ಜಯಲಕ್ಷ್ಮಿ ಸುರೇಶ ಮಯ್ಯ ಇವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ