Love mocktail ಅಂದ ತಕ್ಷಣ ನೆನಪಿಗೆ ಬರುವುದೇ ಮಿಲನ ನಾಗರಾಜ ಹಾಗೂ ಡಾರ್ಲಿಂಗ್ ಕೃಷ್ಣರ cutest ಜೋಡಿ. ಈ ಜೋಡಿ ತೆರೆಯ ಮೇಲೆ ಅಷ್ಟೇ ಅಲ್ಲದೆ ನಿಜ ಜೀವನದಲ್ಲೂ ಬೆಸ್ಟ್ ಕಪಲ್ಸ್ ಆಗಿ ಜನರ ಪ್ರೀತಿ ಪಾತ್ರರಾಗಿದ್ದಾರೆ. ಎಷ್ಟೋ ಜೋಡಿಗಳಿಗೆ ರೋಲ್ ಮಾಡೆಲ್ ಕೂಡ ಆಗಿದ್ದಾರೆ. ಈ ಜೋಡಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ... ಹೌದು ಲವ್ ಬರ್ಡ್ ಸಿನಿಮಾದ ಮೂಲಕ ಈ ಜೋಡಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು, ಮಿಲನ ನಾಗರಾಜ್ ಪಾತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ.
P C ಶೇಖರ್ ಅವರ love birds ಸಿನಿಮಾವು ಅಂತಿಮ ಹಂತದಲ್ಲಿದ್ದು, ಮಿಲನ ನಾಗರಾಜರ ಫಸ್ಟ್ ಲುಕ್ಕನ್ನು ಅಶ್ವಿನಿ ಪುನೀತ್ ರಾಜಕುಮಾರ್, ಗಣೇಶ್ ಮತ್ತು ಧ್ರುವ ಸರ್ಜಾ ಬಿಡುಗಡೆ ಮಾಡಿದರು.
ಈ ಚಿತ್ರದಲ್ಲಿ ಮದುವೆಯ ನಂತರ ಯಶಸ್ವಿ ಜೀವನವನ್ನು ನಡೆಸುತ್ತಿರುವ ದಂಪತಿ ಕುರಿತಾದ ಕಥೆಯನ್ನು ಹೊಂದಿದೆ. ಮಿಲನ ನಾಗರಾಜ್ ಈ ಕತೆಯಲ್ಲಿ ಸ್ವತಂತ್ರ , ಮಹತ್ವಾಕಾಂಕ್ಷೆ ಹಾಗೂ ಕೇಂದ್ರೀಕೃತವಾಗಿರುವ ಫ್ಯಾಶನ್ ಡಿಸೈನರ್ ಪೂಜಾ ಪಾತ್ರವನ್ನು ನಿರ್ವಹಿಸಿದ್ದಾರೆ. love mocktail ನ ನಿಧಿಮಾ ಪಾತ್ರದಿಂದ ಹೊರಬಂದು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಕಡ್ಡಿಪುಡಿ ಚಂದ್ರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಹಾಗೂ ಶಕ್ತಿ ಶೇಖರ್ರ ಛಾಯಾಗ್ರಹಣ ಅದ್ಭುತ ಮೂಡಿದೆ.
ಹೀಗೆ ಲವ್ ಬರ್ಡ್ಸ್ ಚಿತ್ರವು ಜನರ ಕುತೂಹಲಕ್ಕೆ ಕಾರಣವಾಗಿದೆ.
- ನೇಹಾ. N
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ