ತೆಂಕನಿಡಿಯೂರು ಮಕರ ಸಂಕ್ರಾಂತಿ ಜಿಲ್ಲಾ ಮಟ್ಟದ ಸ್ಪರ್ಧೆ ಸಂಪನ್ನ

Upayuktha
0

ಉಡುಪಿ : ಇಲ್ಲಿನ ಶ್ರೀ ಕಾಳಿಕಾಂಬಾ ಭಜನಾ ಸಂಘದ ವತಿಯಿಂದ ಮಕರ ಸಂಕ್ರಾಂತಿ ವಿಶೇಷ ಸಂದರ್ಭದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ದೇವಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷರಾದ ಶ್ರೀಮತಿ ಅಪ್ಪಿ ಶಿವಯ್ಯ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. 


ರಂಗಕಲಾವಿದರಾದ ಶ್ರೀ ಯೋಗೀಶ್ ಕೊಳಲಗಿರಿ ಮುಖ್ಯ ಅತಿಥಿಯಾಗಿ ಭಾಗಗವಹಿಸಿದ್ದರು. ಅದೇ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಮಲ್ಪೆ ಪೋಲೀಸ್ ಠಾಣೆಯ ಪಿ.ಎಸ್.ಐ ಸುಷ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ನೀಡುವ ಇಂತಹ ಕಾರ್ಯಕ್ರಮಗಳು ಪ್ರಶಂಸಾರ್ಹವಾಗಿದೆ. ವಿದ್ಯಾರ್ಥಿಗಳೆಲ್ಲಾ ಇಂತಹ ಅವಕಾಶಗಳ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಸಂಘದ ಅಧ್ಯಕ್ಷ ಶ್ರೀ ಟಿ.ಕೃಷ್ಣ ಆಚಾರ್ಯ ವಹಿಸಿದ್ದು, ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಶೀಲಾ ವಾದಿರಾಜ ಆಚಾರ್ಯ, ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಶ್ರೀ ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಮಾಧವ ಕೆ. ಆಚಾರ್ಯ ಸ್ವಾಗತಿಸಿ, ಶ್ರೀಮತಿ ಸುಚಿತ್ರಾ ಟಿ. ಧನ್ಯವಾದ ಅರ್ಪಿಸಿದರು. ಊದಯ ಜೆ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ್ ಆಚಾರ್ಯ ಸ್ವಾಗತಿಸಿ, ಶ್ರೀ ಉಮೇಶ್ ಜೆ ಆಚಾರ್ಯ ಧನ್ಯವಾದ ಅರ್ಪಿಸಿದರು. ಶ್ರೀ ರೋಹಿತ್ ಆಚಾರ್ಯ ಬಹುಮಾನ ವಿತರಣೆ ಕಾರ್ಯಕ್ರಮ ನಿರ್ವಹಿಸಿ ಕು. ಪ್ರಫುಲ್ಲ ಕಾರ್ಯಕ್ರಮ ನಿರ್ವಹಿಸಿದರು.


ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ಹೀಗಿದೆ

ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಭಕ್ತಿಗೀತೆ ಸ್ಪರ್ಧೆ (ತಲಪಾಡಿ ಸರಳಾದೇವಿ ದತ್ತಿನಿಧಿ ಪ್ರಾಯೋಜಿತ) 

ಪ್ರಥಮ : ಶಿವಾನಿ, ಆದಿವುಡುಪಿ ಹಿ.ಪ್ರಾ ಶಾಲೆ, ಆದಿವುಡುಪಿ

ದ್ವಿತೀಯ : ವಿನಯ್, ಸರಕಾರಿ ಹಿ.ಪ್ರಾ ಶಾಲೆ, ಗರಡಿಮಜಲು

ತೃತೀಯ : ದಿಯಾ ಎಸ್ ಸುವರ್ಣ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ


ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಚಿತ್ರಕಲಾ ಸ್ಪರ್ಧೆ (ಹೊಯಿಗೆತೋಟ ಲಕ್ಷ್ಮಣ ಆಚಾರ್ಯ ದತ್ತಿನಿಧಿ ಪ್ರಾಯೋಜಿತ)

ಪ್ರಥಮ : ಧೃತಿ, ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ

ದ್ವಿತೀಯ : ಅದಿತಿ, ವಾಸುದೇವ ಕೃಪಾ ವಿದ್ಯಾ ಮಂದಿರ, ಉಡುಪಿ

ತೃತೀಯ : ವಿಭನ್ ಕುಂದರ್, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ 

ಸಮಾಧಾನಕರ: ತ್ರಿಶಾಲ್, ಎಲ್.ವಿ.ಪಿ. ಅನುದಾನಿತ ಹಿ.ಪ್ರಾ ಶಾಲೆ ಪುತ್ತೂರು, 

ಸಮಾಧಾನಕರ: ದ್ರಿಶಿತ್, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ


ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ (ಬೈಕಾಡಿ ಶಿವಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ)

ಪ್ರಥಮ : ರಾಜ್‍ರಚನ್, ಉಜ್ವಲ್ ಸುವರ್ಣ, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ

ದ್ವಿತೀಯ : ಆದಿತ್ಯ ಟಿ.ಎಸ್, ಚಿರಾಗ್ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ

ತೃತೀಯ : ದಿಯಾಎಸ್ ಸುವರ್ಣ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ

ಶಗುನ್ ಎಸ್ ಶೆಟ್ಟಿ ಸೈಂಟ್ ಸಿಸಿಲಿಸ್ ಪ್ರೌಢಶಾಲೆ ಉಡುಪಿ


ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾವಗಾನ ಸ್ಪರ್ಧೆ (ಕುಂಜಿಬೆಟ್ಟು ಜಲಜ ಸೋಮಯ್ಯಾಚಾರ್ಯ ದತ್ತಿನಿಧಿ ಪ್ರಾಯೋಜಿತ)

ಪ್ರಥಮ : ಚಿಂತನ, ಡಾ.ಟಿ.ಎಂ.ಎ ಪೈ ಪ್ರೌಢಶಾಲೆ ಕಲ್ಯಾಣಪುರ

ದ್ವಿತೀಯ : ವಿಶ್ವಜಿತ್, ಪ್ರೌಢಶಾಲಾ ವಿಭಾಗ, ಸರಕಾರಿ ಪ.ಪೂ. ಕಾಲೇಜು ತೆಂಕನಿಡಿಯೂರು

ತೃತೀಯ : ಶಗುನ್ ಎಸ್ ಶೆಟ್ಟಿ ಸೈಂಟ್ ಸಿಸಿಲಿಸ್ ಪ್ರೌಢಶಾಲೆ ಉಡುಪಿ


ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ (ಕೆ. ಬಂಟುಞ ಆಚಾರ್ಯ ದತ್ತಿನಿಧಿ ಪ್ರಾಯೋಜಿತ)

ಪ್ರಥಮ : ಪೃಥ್ವಿ ಎಚ್.ಪಿ, ಆಶ್ಲಿ ಥಾಮಸ್, ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ

ದ್ವಿತೀಯ : ಯಲ್ಲಪ್ಪ, ಇಸ್ಮಾಯಿಲ್ ಇಟಗಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು

ತೃತೀಯ : ರಕ್ಷಿತ್, ಸುಮಂತ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ


ಕಾಲೇಜು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ (ಟಿ.ಕೃಷ್ಣಯ್ಯ ಆಚಾರ್ಯ ದತ್ತಿನಿಧಿ ಪ್ರಾಯೋಜಿತ) 

ಪ್ರಥಮ : ತೇಜಸ್ವಿನಿ, ಸರಕಾರಿ ಪ.ಪೂ. ಕಾಲೇಜು ತೆಂಕನಿಡಿಯೂರು

ದ್ವಿತೀಯ : ಸುಷ್ಮಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು

ತೃತೀಯ : ರಾಜೇಶ್, ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top