ಹೊಸದಿಲ್ಲಿ: ದೇಶದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಆರು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
“20 ಲಕ್ಷ ಚಂದಾದಾರರನ್ನು ಹೊಂದಿರುವ 6 ಯೂಟ್ಯೂಬ್ ಚಾನೆಲ್‌ಗಳು 51 ಕೋಟಿ ವೀಕ್ಷಕರನ್ನು ಹೊಂದಿರುವ ಯೂಟ್ಯೂಬ್ ಚಾನೆಲ್‌ಗಳ ಮೇಲೆ ನಿಷೇಧ ಹೇರಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಸ್ ಇನ್ಫೋರ್ಮೇಷನ್ ಬ್ಯೂರೋ (ಪಿಐಬಿ) ಈ ಬಗ್ಗೆ ಪ್ರಕಟಣೆ ನೀಡಿದೆ.
ಯೂಟ್ಯೂಬ್ ಚಾನೆಲ್‌ಗಳು ಚುನಾವಣಾ ವ್ಯವಸ್ಥೆಯ ಬಗ್ಗೆ, ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆ, ಕೇಂದ್ರ ಸರ್ಕಾರ ಕಾರ್ಯನಿರ್ವಹಣೆಯ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದವು. ಈ ಬಗ್ಗೆ ಪಿಐಬಿಯ ಮಾಹಿತಿ ದೃಢೀಕರಣ ವಿಭಾಗ ತನಿಖೆ ನಡೆಸಿ, ಅವುಗಳು ಸುಳ್ಳು ಪ್ರಚಾರ ನಡೆಸುತ್ತಿವೆ ಎಂದು ಬಹಿರಂಗೊಳಿಸಿತ್ತು.
6 ಯೂಟ್ಯೂಬ್ ಚಾನೆಲ್‌ಗಳು:
ನೇಷನ್ ಟಿವಿ – 5.57 ಲಕ್ಷಕ್ಕೂ ಹೆಚ್ಚು ಚಂದಾದಾರರು.
ಸಂವಾದ್ ಟಿವಿ – 10.9 ಲಕ್ಷ ಚಂದಾದಾರರು.
ಸರೋಕರ್ ಭಾರತ್ – 21,100 ಚಂದಾದಾರರು.
ನೇಷನ್ 24 – 25,400 ಚಂದಾದಾರರು.
ಸ್ವರ್ಣಿಮ್ ಭಾರತ್ – 6,070 ಚಂದಾದಾರರು.
ಸಂವಾದ್ ಸಮಾಚಾರ್ – 3.48 ಲಕ್ಷ ಚಂದಾದಾರರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ