ಬದುಕು ಬಣ್ಣವಾಗದಿದ್ದರೂ ದೇಶಕ್ಕೆ ಹೊರೆಯಾಗಬಾರದು: ಕೆ. ವಿನಾಯಕ್‌ ರಾವ್‌

Upayuktha
0

ಉಜಿರೆ: "ಸುತ್ತಮುತ್ತಲಿನ ಪ್ರೇರಣೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿ ನಮ್ಮನ್ನು ಅದ್ಭುತ ವ್ಯಕ್ತಿಯಾಗಿ ರೂಪುಗೊಳಿಸಲು ಸಹಕಾರಿಯಾಗಿದೆ."ಎಂದು ಕನ್ಯಾಡಿಯ ಸೇವಾಭಾರತಿ ಸಂಸ್ಥೆಯ ಸ್ಥಾಪಕರು ಹಾಗೂ ಅಧ್ಯಕ್ಷರಾದ ಕೆ. ವಿನಾಯಕ ರಾವ್‌ ಅವರು ಹೇಳಿದರು. 


12 ಜನವರಿ 2023 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆಯಲ್ಲಿ ರಾಷ್ಟ್ರೀಯ ಸೇವಾಯೋಜನೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ರಾಷ್ಟ್ರೀಯ ಯುವದಿನದ ಪ್ರಯುಕ್ತ ಯುವ ಸಪ್ತಾಹದ ಉದ್ಘಾಟನೆ ಹಾಗೂ ಸ್ವಯಂಸೇವಕರಿಗೆ -"ವಿಶ್ವಾಸವೇ ಜೀವನಕ್ಕೆ ರಹದಾರಿ, ಯುವ ಯಶಸ್ಸಿಗೆ ಸೂತ್ರ"ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಚಾರ್ಯರಾದ ಡಾ. ಎ. ಜಯಕುಮಾರ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ,"ಯುವಕರು ಹಿಂಜರಿದರೆ ದೇಶ ಮುಂದುವರಿಯುವುದು ಅಸಾಧ್ಯ. ಯುವಜನತೆ ಮುಂದೆ ಬಂದರೆ ದೇಶದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲಸ ಮಾಡುವ ಮನಸ್ಸಿದ್ದರೆ ಯಾವುದೇ ಕಷ್ಟ ಕೆಲಸವನ್ನೂ ಮುಗಿಸಬಹುದು. ಯುವಜನತೆ ಮೊದಲು ಜನ್ಮಭೂಮಿಗೆ ದುಡಿದರೆ , ವಿದೇಶಕ್ಕೆ ಕೊಡುವ ಮರ್ಯಾದೆಗಿಂತ ಹೆಚ್ಚಿನ ಅಭಿಮಾನ ದೇಶದ ಮೇಲೆ ಬರುತ್ತದೆ. ಮೊದಲು ನಮ್ಮನ್ನು ನಾವು ನಂಬಬೇಕು,ಆಗ ಜಗತ್ತನ್ನೇ ನಂಬಬಹುದು." ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಘಾಟಕರು ಹಾಗೂ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಕೆ. ವಿನಾಯಕ್‌ ರಾವ್‌ ಅವರು-"ಪ್ರೇರಣೆ ಎಲ್ಲರಿಂದ ಎಲ್ಲರಿಗೂ ಸಿಗಬೇಕಾದದ್ದು. ಬೆನ್ನುಹುರಿ ಅಪಘಾತಕ್ಕೊಳಗಾದವರಲ್ಲಿ 90%ಗಿಂತಲೂ ಹೆಚ್ಚು ರೋಗಿಗಳು ಆತ್ಮಹತ್ಯೆಯ ಯೋಚನೆ ಮಾಡಿರುವುದು ಸಮಾಜದ ಕೊರತೆಯಿಂದ. ಸೇವಾಭಾರತಿ ಎಂಬ ಸಂಸ್ಥೆ ಇಂಥ ಅಶಕ್ತರಿಗೆ ಭರವಸೆಯ ಆಶಾಕಿರಣ ಮೂಡಿಸುವ ಬೆಳಕಾಗಿ ಹುಟ್ಟಿದೆ. ಅಪಘಾತದಿಂದಾಗಿ ಖಿನ್ನತೆಗೊಳಗಾದವರನ್ನು ಪುನಃ ಮೇಲೇಳುವಂತೆ ಕೈ ಹಿಡಿಯುವ ಸಂಸ್ಥೆಯಾಗಿ ಬೆಳೆದಿದೆ. ನಿಮ್ಮಂಥ ಯುವಕರಿಗೆ ಪ್ರೇರಣೆಯಾಗಲು ನಮ್ಮ ಸಂಸ್ಥೆಯಲ್ಲಿ ತಯಾರಾಗುತ್ತಿದ್ದಾರೆ. ಏಳಲು,ಮಲಗಲು ಆಗದಂಥ, ದೈನಂದಿನ ಚಟುವಟಿಕೆಗಾಗಿ ಇನ್ನೊಬ್ಬರನ್ನು ಆಶ್ರಯಿಸುವ ಅವರೇ, ಬದುಕಲು, ಮೇಲೇಳಲು ಹೋರಾಡುತ್ತಿದ್ದರೆ, ಎಲ್ಲಾ ರೀತಿಯಾಗಿ ಸಶಕ್ತರಾಗಿರುವ ನೀವು ಈ ದೇಶದ ಸಂಪತ್ತಾಗುವುದರಲ್ಲಿ ಸಂದೇಹವಿಲ್ಲ. ತಂದೆ ತಾಯಿ ದುಡಿದ ಹಣದಲ್ಲಿ ಬದುಕುವುದಲ್ಲ ಜೀವನ. ಸ್ವಾವಲಂಬಿಯಾಗಿ ಯಾರ ಆಶ್ರಯವಿಲ್ಲದೆ ಬದುಕುವುದು ನಿಜವಾದ ಜೀವನ” ಎಂದರು.


ರಾಷ್ಟ್ರೀಯ ಯುವಸಪ್ತಾಹದ ಅಂಗವಾಗಿ ಸ್ವಯಂಸೇವಕರು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ.ಲಕ್ಷ್ಮೀನಾರಾಯಣ ಕೆ. ಎಸ್ ಮತ್ತು ಪ್ರೊ.ದೀಪಾ ಆರ್. ಪಿ ಹಾಗೂ ಹಿರಿಯ ಯೋಜನಾಧಿಕಾರಿಗಳಾದ ಡಾ. ಗಣೇಶ್‌ ಶೇಂಡ್ಯೆ ಹಾಗೂ ಶ್ರೀಮತಿ ಆಶಾಕಿರಣರವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸ್ವಯಂಸೇವಕರಾದ ಅಭಿಷೇಕ್‌, ವಿಘ್ನೇಶ್‌, ಮೇಘಾ, ವಿನುತಾ ಹಾಗೂ ರಚನಾ ಪ್ರಾರ್ಥಿಸಿದರು. ಸುದೇಶ್‌ ಸ್ವಾಗತಿಸಿ, ಶ್ರೇಯಸ್‌ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಸ್ವಯಂಸೇವಕಿ ವಿನುತಾ ವಂದಿಸಿದರು. ಅಂಜನಾ ಕೆ. ರಾವ್‌ ಕಾರ್ಯಕ್ರಮವನ್ನು ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top