ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಹಾಗೂ ಮಹಾಮಹೋಪಾಧ್ಯಾಯ ಪ್ರಶಸ್ತಿ

Upayuktha
0



ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತರೂ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಗೆ ಆಫ್ರಿಕಾ ದೇಶದ ಬೆನಿನ್ ರಾಜ್ಯದ ಮೈಲ್ಸ್ ಲೀಡರ್ ಶಿಪ್ಸ್ ವಿಶ್ವವಿದ್ಯಾಲಯವು 'ಗೌರವ ಡಾಕ್ಟರೇಟ್' ಹಾಗೂ 'ಮಹಾಮಹೋಪಾಧ್ಯಾಯ' ಪ್ರಶಸ್ತಿ ಘೋಷಿಸಿದೆ.

ಗಿರಿನಗರದಲ್ಲಿರುವ ಶ್ರೀ ಭಾಗವತಾಶ್ರಮದಲ್ಲಿ ಜನವರಿ 15, ಭಾನುವಾರ ಸಂಜೆ 6 ಗಂಟೆಗೆ ಉಪಕುಲಪತಿಗಳಾದ ಪ್ರೊ. ಡಾ. ಕೆ. ರವಿ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಶ್ರೀ ಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ಹಾಗೂ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ರವಿ ಸುಬ್ರಮಣ್ಯ (ಶಾಸಕರು, ಬಸವನಗುಡಿ ಕ್ಷೇತ್ರ), ಪಿ.ಎಸ್. ದಿನೇಶ್ ಕುಮಾರ್ (ನ್ಯಾಯಾಧೀಶರು, ಉಚ್ಛನ್ಯಾಯಾಲಯ ಕರ್ನಾಟಕ ಸರ್ಕಾರ), ಕೆ.ಟಿ. ರಾಜೇಂದ್ರ ಕುಮಾರ್ (ಡೀನ್, ಮೈಲ್ಸ್ ಲೀಡರ್ಶಿಪ್ ಯೂನಿವರ್ಸಿಟಿ) ಮತ್ತು  ಡಾ. ವಿಠ್ಠಲ್ ಜೋಶಿ (ಸಂಯೋಜಕರು, ಮೈಲ್ಸ್ ಲೀಡರ್ಶಿಪ್ ಯೂನಿವರ್ಸಿಟಿ) ಇವರು ಆಗಮಿಸಲಿದ್ದಾರೆ.



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top