ಉಜಿರೆ: ಕಾಲೇಜಿನಲ್ಲಿ ವಿದೇಶಿ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ ಹೇಳಿದರು.
ಎಸ್‌ಡಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ನಡೆಸಲಾದ ವಿದೇಶಿ ವಿದ್ವಾಂಸರ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಅಮೆರಿಕಾ ದೇಶದ ಸಂವಿಧಾನದಲ್ಲಿ ‘ಜ್ಯೂರಿ’ಎಂಬ ಅಂಶವಿದೆ. ಈ ವ್ಯವಸ್ಥೆಯ ಪ್ರಕಾರ ಒಬ್ಬ ಆರೋಪಿಯ ಪ್ರಕರಣವನ್ನು ನ್ಯಾಯಾಲಯದಲ್ಲಿ ಸ್ವತಃ ತನ್ನ ಸುತ್ತಮುತ್ತಲಿನ ಜನಸಾಮಾನ್ಯರು ಅಥವಾ ನೆರೆಯವರು ಪ್ರತಿನಿಧಿಗಳಾಗಿ ಚರ್ಚಿಸಬಹುದು. ಈ ರೀತಿಯ ಸಮೂಹದ ಕೊನೆಯ ನಿರ್ಣಯವನ್ನೇ ನ್ಯಾಯಾಲಯ ಸ್ವೀಕರಿಸುತ್ತದೆ. ಅರ್ಥಾತ್, ಒಂದು ವೇಳೆ ಜ್ಯೂರಿ ನಿರಪರಾಧಿ ಎಂದು ಹೇಳಿದರೆ, ಅದೇ ಕಾನೂನಿನ ಅಂತಿಮ ತೀರ್ಮಾನವಾಗಿರುತ್ತದೆ. ಇದನ್ನು ‘ಜ್ಯೂರಿ ನಲ್ಲಿಫಿಕೇಷನ್’ ಎಂದು ಕರೆಯುತ್ತಾರೆ ಎಂದು ನ್ಯೂಯಾರ್ಕ್ ಕಾರ್ಟ್ಲಂಡ್‌ನ ಎಸ್.ಯು.ಎನ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿದ್ವಾಂಸ ತಿಮೋತಿ. ಏ. ದೆಲಾನ್ ವಿವರಿಸಿದರು.
ಅಮೆರಿಕಾದ ಇತಿಹಾಸ ವಿದ್ವಾಂಸ ಕೆವಿನ್. ಬಿ. ಶೀಟ್ಸ್ ಮಾತನಾಡಿ, ಅಮೆರಿಕನ್ ಸಿವಿಲ್ ವಾರ್ ನ ಮೂಲ ಉದ್ದೇಶ ಯು.ಎಸ್ ನಲ್ಲಿ ಆಗ ಪ್ರಚಲಿತವಿದ್ದ ಗುಲಾಮಗಿರಿಯನ್ನು ರದ್ದುಪಡಿಸಲಾದರೂ ಕೂಡ, ಈ ಆಕಾಂಕ್ಷೆ ಯಶಸ್ವಿಯಾಗಲು ಇನ್ನೂ ನೂರು ವರುಷ ಬೇಕಾಯಿತು. ಇದಕ್ಕೆ ಮುಖ್ಯ ಕಾರಣವಾದ ವರ್ಣದ ಹಿನ್ನಲೆಯ ಭೇದಭಾವ ಒಂದೆಡೆಯಾದರೆ, ಅಮೇರಿಕಾದಲ್ಲಿದ್ದ ಆಗಿನ ಸಮಾಜದ ಚೌಕಟ್ಟು ಮತ್ತು ನಾಗರಿಕ ಪದ್ಧತಿಗಳ ಬಗ್ಗೆಯೂ ನಾವು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಜಯಕುಮಾರ್ ಶೆಟ್ಟಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶಾಲಿಪ್ ಎ.ಪಿ., ವಿದೇಶೀ ಉಪನ್ಯಾಸಕರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಾರ್ವತಿ ನಿರೂಪಣೆ ಮಾಡಿದರು. ಹರಿಪ್ರಿಯಾ ವಂದನಾರ್ಪಣೆ ಮಾಡಿ, ತೃಪ್ತಿ ದಿನೇಶ್ ವಂದಿಸಿದರು.
ತುಷಾರ್ ಹೆಗಡೆ
ಎಸ್‌ಡಿಎಂ ಕಾಲೇಜು ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ