ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಸೂರ್ಯೋಪಾಸನೆ

Upayuktha
0


ಬದಿಯಡ್ಕ : ರಥಸಪ್ತಮಿ ವಿಶೇಷ ದಿನ ಶನಿವಾರದಂದು ಬೆಳಗ್ಗೆ ವಿದ್ಯಾರ್ಥಿಗಳಿಂದ ಸೂರ್ಯೋಪಾಸನೆ ನಡೆಯಿತು. ೫ನೇ ತರಗತಿಯಿಂದ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾಲಾ ಅಂಗಳದಲ್ಲಿ ಭಗವಾನ್ ಸೂರ್ಯದೇವನ ಮಂತ್ರಗಳನ್ನು ಪಠಿಸಿದರು. 


ಸರ್ವರೋಗ ನಿವಾರಕನೂ, ವಿದ್ಯಾಬುದ್ಧಿ ತೇಜಸ್ಸನ್ನು ವೃದ್ಧಿಗೊಳಿಸುವ ಭಾಸ್ಕರನಿಗೆ ಹದಿಮೂರು ಮಂತ್ರಗಳನ್ನು ಪಠಿಸುತ್ತಾ ಸೂರ್ಯನಮಸ್ಕಾರ ಕೈಗೊಂಡರು. ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ವಿಶೇಷ ಆಸಕ್ತಿಯಿಂದ ಪ್ರತ್ಯಕ್ಷದರ್ಶಿಗಳಾದರು. 


ಶಾಲಾ ಅಧ್ಯಾಪಕ ವೃಂದದ ಪೂರ್ಣ ಸಹಕಾರದೊಂದಿಗೆ ಯೋಗ ಶಿಕ್ಷಕ ವಿನಯಪಾಲ್ ಇವರ ನಿರ್ದೇಶನದಲ್ಲಿ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ಸಂಸ್ಕೃತ ಅಧ್ಯಾಪಿಕೆ ಸುಶ್ಮಾ ನೂಜಿ ಪ್ರಾರ್ಥನಾಶ್ಲೋಕ ಪಠಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯರು ದಿನವಿಶೇಷತೆಯ ಮಹತ್ವವನ್ನು ಸವಿವರವಾಗಿ ತಿಳಿಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top