ಪತ್ರಿಕೋದ್ಯಮ ಎಂದಾಕ್ಷಣ ನೆನಪಿಗೆ ಬರುವ ಮೊದಲ ವಿಷಯ ಪತ್ರಿಕೆ ಹಾಗೂ ಪತ್ರಕರ್ತ ಇದರ ಹೊರತಾಗಿ ಬೇರೇನು ಅಲ್ಲ. ಪತ್ರಿಕೋದ್ಯಮ ಎಂಬುದು ದೇಶದಲ್ಲಿ ನಡೆಯುವ ಘಟನೆಗಳ ಕುರಿತು ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಒಳಗೊಂಡಂತೆ ಜನರಿಗೆ ನಡೆದ ವಿಷಯದ ಬಗ್ಗೆ ತಿಳಿಸುವ ಮಾಧ್ಯಮವಾಗಿದ್ದು, ನಿತ್ಯ ನಿರಂತರ ಆಗುಹೋಗುಗಳನ್ನು ಜನರಿಗೆ ತಂದು ತಲುಪಿಸುವ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ದುಡಿಯುವವರ ಪಡೆ ಎಂದರೆ ತಪ್ಪಾಗುವುದಿಲ್ಲ.
ಪತ್ರಿಕೋದ್ಯಮ ಎನ್ನುವ ಪದವನ್ನು ಮೊದಲು ಕೇವಲ ನಾವು ಪತ್ರಕರ್ತರ ಬಾಯಿಂದ ಮಾತ್ರ ಕೇಳುತ್ತಿದ್ದೆವು. ಆದರೆ ಇಂದು ಅದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮಾಧ್ಯಮ ಇಲ್ಲದೆ ಸಮಾಜ ಇಲ್ಲವೇನು ಎನ್ನುವ ಮಟ್ಟಕ್ಕೆ ಬಂದು ತಲುಪಿದೆ. ಕಾರಣ ಸಮಾಜ ಹಾಗೂ ರಾಜ್ಯದ ಆಗುಹೋಗುಗಳನ್ನು ಯಥಾವತ್ತಾಗಿ ತಂದು ಜನರೆದುರು ಇಡುವುದರಿಂದಾಗಿ ಪತ್ರಿಕೋದ್ಯಮ ತನ್ನ ತನವನ್ನು ಉಳಿಸಿಕೊಂಡು ಸಾಗುತ್ತಿದೆ. ಜೊತೆಯಲ್ಲಿ ಈ ಪತ್ರಿಕೋದ್ಯಮ ವಿಷಯವನ್ನು ಬಿಎ ಪದವಿಗೆ ಹಾಗೂ ಸ್ನಾತಕೋತ್ತರ ಪದವಿಗೆ ಅಳವಡಿಸಿದ್ದು, ಇದು ಪತ್ರಿಕೆ, ಪತ್ರಿಕೋದ್ಯಮ, ಪತ್ರಕರ್ತರು, ಪತ್ರಿಕೆಯ ಸಂಬಂಧ ಪ್ರಜಾಪ್ರಭುತ್ವದ ಜೊತೆಗೆ, ಹೀಗೆ ಇನ್ನಿತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುತ್ತದೆ.
ಪದವಿಯಲ್ಲಿ ವಿದ್ಯಾರ್ಥಿಗಳು ಕಲಿಯುವ ಎಲ್ಲ ವಿಷಯಗಳನ್ನು ನಾವು (ಪಿಯುಸಿ) ಪದವಿಪೂರ್ವ ಶಿಕ್ಷಣದಲ್ಲಿ ಕಲಿತಿರುತ್ತೇವೆ. ಹೀಗಾಗಿ ಆ ವಿಷಯ ಅರಿತುಕೊಳ್ಳುವುದು ಅಷ್ಟು ಕಷ್ಟ ಎಂದು ಎನಿಸುವುದಿಲ್ಲ. ಬೇಗನೆ ಕಲಿಯುವುದಕ್ಕೆ ಸಹಾಯಕವಾಗುತ್ತದೆ. ಆದರೆ ಪದವಿಯಲ್ಲಿ ಪತ್ರಿಕೋದ್ಯಮ ಎಂಬ ವಿಷಯ ಇದೆ ಎಂಬುದು ಎಷ್ಟು ವಿದ್ಯಾರ್ಥಿಗಳಿಗೆ ತಿಳಿದೇ ಇಲ್ಲ. ಇದರಿಂದಾಗಿ ಒಂದು ಒಳ್ಳೆಯ ವಿಷಯ ಕಲಿಯುವುದರಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಮತ್ತೆ ಕೆಲವರಿಗೆ ಪತ್ರಿಕೋದ್ಯಮಕಲಿಯಬೇಕೆಂದು ಬಯಸಿದರು ಕಾಲೇಜು ದೊರೆಯುವುದಿಲ್ಲ. ಅದರಲ್ಲೂ ಒಂದು ಕಾಲೇಜಿನಲ್ಲಿ ಒಂದು ವಿಷಯ ಸಿಗಬೇಕೆಂದರೆ ಕನಿಷ್ಠ ಆ ವಿಷಯಕ್ಕೆ ವಿದ್ಯಾರ್ಥಿಗಳು ದಾಖಲಾಗಬೇಕಾಗುತ್ತದೆ. ಮೊದಲೇ ಈ ವಿಷಯದ ಕುರಿತು ಮಾಹಿತಿ ಇರದ ಕಾರಣ ವಿದ್ಯಾರ್ಥಿಗಳ ದಾಖಲಾತಿ ನಿರೀಕ್ಷಿತ ಮಟ್ಟದಲ್ಲಿ ದೊರೆಯುವುದಿಲ್ಲ. ಇದರಿಂದಾಗಿ ಎಲ್ಲ ಕಾಲೇಜುಗಳು ಈ ವಿಷಯವನ್ನು ಅಳವಡಿಸಿಕೊಳ್ಳುವುದಿಲ್ಲ.
ಹೀಗಾಗಿ ಪತ್ರಿಕೋದ್ಯಮ ವಿಷಯ ಹೊಂದಿರುವ ಕಾಲೇಜುಗಳ ಸಂಖ್ಯೆಯೂ ಕಡಿಮೆಯಾಗಿದೆ. ಪತ್ರಿಕೋದ್ಯಮ ವಿಷಯವನ್ನು ಪದವಿ ಪೂರ್ವದಲ್ಲಿ ಅಳವಡಿಸುವ ಅವಶ್ಯಕತೆ ತುಂಬಾ ಇದೆ. ಏಕೆಂದರೆ ಒಂದು ವೇಳೆ ಪತ್ರಿಕೋದ್ಯಮ ವಿಷಯ ಪದವಿ ಪೂರ್ವ ದಲ್ಲಿ ಅಳವಡಿಕೆಯಾದಾಗ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳದೇ ಹೋದರೂ ಅಂತಹ ಒಂದು ವಿಷಯವಿದೆ ಅದರಲ್ಲಿರುವದಾದರೂ ಏನು ಎಂಬ ಕುತೂಹಲ ಉಂಟಾಗಿ ವಿಷಯ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಷಯವಿದೆ ಎಂದು ತಿಳಿದ ನಂತರ ವಿದ್ಯಾ ರ್ಥಿಗಳಿಗೆ ಪತ್ರಿಕೆ ಓದಲು ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಸಹಾಯಕವಾಗುತ್ತದೆ.
ಲೇಖನಗಳನ್ನು ಬರೆಯುವ ಸುದ್ದಿಗಳನ್ನು ತಿಳಿಸುವ ಮುಂತಾದ ವಿಷಯಗಳ ಕುರಿತು ಜನರಿಗೆ ವಿವಿಧ ಕಲಾಶೈಲಿಗಳ ರೀತಿಯಲ್ಲಿ ತಿಳಿಸುತ್ತದೆ. ಇದರಿಂದ ಮೊರೆ ಹನುಮಂತ ರಾಯ ಪಾಟೀಲ ಪುಟ್ಟಪ್ಪ ಮುಂತಾದ ಪತ್ರಕರ್ತರ ಹಾಗೆ ಪತ್ರಿಕೋದ್ಯಮ ತನ್ನ ಸೇವೆಯಲ್ಲಿ ನೂತನ ಪತ್ರಕರ್ತರನ್ನು ಪಡೆಯುತ್ತ ಸಾಧನೆಗೈಯಲಿ ಹಾಗೂ ಸಾಧಿಸುವ ಅವಶ್ಯಕತೆ ಇದೆ. ಹೀಗಾಗಿ ಪದವಿಪೂರ್ವ ಶಿಕ್ಷಣವು ಪತ್ರಿಕೋದ್ಯಮವನ್ನು ಅಳವಡಿಸಲಿ.
ಪತ್ರಿಕೋದ್ಯಮ ತನ್ನ ಸೇವೆ ಮಾಡುವಲ್ಲಿ ಪತ್ರಕರ್ತರು ಆ ಸೇವೆಗೆ ದಾರಿದೀಪವಾಗಲಿ.
ಪ್ರಿಯದರ್ಶಿನಿ
ಆಳ್ವಾಸ್ ಕಾಲೇಜು ಮೂಡಬಿದಿರೆ