ಪುತ್ತೂರು : ಆದಾಯದಲ್ಲಿ ಉಳಿತಾಯ ಮಹತ್ವಪೂರ್ಣವಾದದ್ದು; ಉಳಿತಾಯವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದಾಗ ಭವಿಷ್ಯದಲ್ಲಿ ಉತ್ತಮ ಪ್ರತಿಫಲ ಪಡೆಯಬಹುದು. ಇದಕ್ಕಾಗಿ ನಾವು ಮ್ಯೂಚುವಲ್ ಫಂಡ್, ಕಂಪೆನಿ ಷೇರುಗಳು, ಸರಕಾರಿ ಬೋಂಡ್ ಗಳು, ರಿಯಲ್ ಎಸ್ಟೇಟ್, ಚಿಟ್ ಫಂಡ್ ಮುಂತಾದ ಆಯ್ಕೆಗಳಿದ್ದರೂ ಇವುಗಳನ್ನು ಯೋಚನೆ ಮಾಡಿ ಹೆಚ್ಚಿನ ಲಾಭ ತರುವ ಹಾನಿ ಇಲ್ಲದ ಹೂಡಿಕೆಯನ್ನು ಮಾಡುವುದು ಉತ್ತಮ ಎಂದು ’ನೆಟ್ಟಾರ್ ಫಿನ್ ಸರ್ವ” ನ ಆಡಳಿತಾಧಿಕಾರಿ ವಿನೋದ್ ನೆಟ್ಟಾರ್ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪ.ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಹಾಗೂ ಅಂಬಿಕಾ ಪ.ಪೂ. ವಿದ್ಯಾಲಯ ಬಪ್ಪಳಿಗೆಯ ಉಪನ್ಯಾಸಕರಿಗಾಗಿ ಹಮ್ಮಿಕೊಂಡ ಆರ್ಥಿಕ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಹಾಗೂ ’ನೆಟ್ಟಾರ್ ಫಿನ್ ಸರ್ವ್’ ನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಂಬಿಕಾ ವಸತಿಯುತ ಪ.ಪೂರ್ವ ವಿದ್ಯಾಲಯ, ಬಪ್ಪಳಿಗೆಯ ಪ್ರಾಚಾರ್ಯರಾದ ಸುಚಿತ್ರಾ ಪ್ರಭು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕಿ ಶೈನಿ .ಕೆ.ಜೆ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಗಣಕ ಶಾಸ್ತ್ರ ಉಪನ್ಯಾಸಕ ಪ್ರದೀಪ್.ಕೆ.ವೈ ಸ್ವಾಗತಿಸಿದರು. ಉಪನ್ಯಾಸಕಿ ವಿನುತಾ .ಎಂ.ಸಾಲೆ ವಂದನಾರ್ಪಣೆಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ