ಮೊದಲ ಪ್ರಯೋಗದಲ್ಲಿಯೇ ಜನಮನ ಗೆದ್ದ ಇವನಾರವ ನಾಟಕ - ಗೊರೂರು ಅನಂತರಾಜು, ಹಾಸನ.

Upayuktha
0

 




ತ್ಮೀಯ ಮಿತ್ರರು ಕಥೆಗಾರರು ಹಾಗೂ ಕಲಾವಿದರು ಆಗಿರುವ ದಿಬ್ಬೂರು ರಮೇಶ್‍ರವರು ಪೋನ್ ಕರೆ ಮಾಡಿ   ಸಾರ್, ಜಿಲ್ಲಾ ಕ್ರೀಡಾಕೂಟದಲ್ಲಿ ನಾನು ಬರೆದು ನಿರ್ದೇಶಿಸಿರುವ ಇವನಾರವ ಎಂಬ ನಾಟಕವನ್ನು ಪ್ರದರ್ಶನ ನೀಡುತ್ತಿದ್ದೇನೆ.  ನೀವು ದಯವಿಟ್ಟು ಬನ್ನಿ ಎಂದರು. ನನಗೆ ನಾಟಕ ಎಂದರೆ ಎಲ್ಲೆಯಿಲ್ಲದ ಪ್ರೀತಿ ಹಾಗೂ ಸೆಳೆತ. ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಹಾಸನ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಯೂತ್ ಹಾಸ್ಟೆಲ್‍ನತ್ತ  ಹೋದೆ. ವೇದಿಕೆ ಸಿದ್ಧವಾಗಿತ್ತು. ನನಗೆ ವಿಪರೀತ ಕುತೂಹಲ. 


ದಿಬ್ಬೂರು ರಮೇಶ್‍ರವರ ನಾಟಕದ ವಸ್ತು ಏನಿರಬಹುದು !? ಹೇಗೆ ನಟಿಸಬಹುದು!? ಹಗಲಿನ ಸಮಯ ಬೇರೆ. ನಾಟಕಗಳಿಗೆ ಬೆಳಕಿನ ಸಂಯೋಜನೆ ಮುಖ್ಯವಾದದ್ದು.  ಆದರೆ ಈ ವೇದಿಕೆ ಅಷ್ಟು ಅನುಕೂಲಕರವಾಗಿಲ್ಲವಲ್ಲ? ಹೀಗೆ ಮನಸ್ಸಿನಲ್ಲಿ ವಿವಿಧ ಯೋಚನೆಗಳು. ದಿಬ್ಬೂರು ರಮೇಶ್ ವೇದಿಕೆಯ ಕೆಳಗೆ ಅತ್ತಿಂದಿತ್ತ ಓಡಾಡುತ್ತ ಸಂಗೀತ ವಾದ್ಯ, ವಾದಕರೊಂದಿಗೆ, ನಟ ನಟಿಯರೊಂದಿಗೆ ಸಲಹೆ ಸೂಚನೆಗಳನ್ನು ವಿನಿಮಯ ಮಾಡಕೊಳ್ಳುತಿದ್ದರು. ಎಲ್ಲರ ಉಡುಗೆ ತೊಡಿಗೆಗಳು  ಸಾಧರಣವಾಗಿದ್ದವು. ಮೊದಲನೆ ದೃಶ್ಯ ಪ್ರಾರಂಭವಾಯಿತು. ಶಿವಾಲಯದ ಮುಂದೆ ಚಪ್ಪಲಿ ಹೊಲೆಯುವ, ಕಸ ಗುಡಿಸುವ, ಭಿಕ್ಷೆ ಬೇಡುವ ಪಾತ್ರಗಳು ಅನಾವರಣಗೊಂಡವು. ದೇವಸ್ಥಾನದ ಪೂಜಾರಿಯ ಮಡಿವಂತಿಕೆ ಮನಸ್ಥಿತಿಗೆ ಕೆಳಸ್ತರದ ಕಸುಬು ಮಾಡುವ ವ್ಯಕ್ತಿಗಳ ವ್ಯಕ್ತಿತ್ವದ ಪ್ರತಿಫಲನವನ್ನು ತೀಕ್ಷ್ಣವಾದ ಸಂಭಾಷಣೆಯ ಮೂಲಕ ಪ್ರತಿಧ್ವನಿಸಿರುವ ರೀತಿಗೆ ನಾನು ಬೆರಗಾದೆ. ಶರೀರ ಭಾವದ ಸೀಮಿತ ವ್ಯಾಪ್ತಿಗೆ ಅನ್ವಯಿಸಿ ಮಡಿ ಮೈಲಿಗೆಯನ್ನು ಪರಿಭಾವಿಸಿರುವ ಮನಸ್ಸುಗಳಿಗೆ ವಚನಕಾರರ ಹಾಗೂ ಕನಕದಾಸರ ಆಶಯಗಳಂತೆ ಮನಸ್ಸು ಹಾಗೂ ಆತ್ಮ ಕೇಂದ್ರಿತವಾದ ಭಾವದಲ್ಲಿ ನಾಟಕವು ಅನಾವರಣಗೊಂಡಿತು. 


ಎಡೆ ಸ್ನಾನ ಮಡೆ ಸ್ನಾನದಂತಹ ಪದ್ಧತಿಗಳನ್ನು ನಿರಾಕರಿಸುತ್ತ ಮನುಷ್ಯ ಮನುಷ್ಯನ ನಡುವಿನ ಭೇದ ಭಾವದ ಕಂದರವನ್ನು ಮುಚ್ಚಿ “ ಶ್ರೀ ಸಾಮಾನ್ಯನೇ ಭಗವನ್ ಮಾನ್ಯಂ” ಎಂಬ ನಿಲುವನ್ನು ಬಿತ್ತಿರಿಸುತ್ತ ಕುವೆಂಪು ಚಿಂತನೆಗಳನ್ನು ಜನಮಾನಸದಲ್ಲಿ ಸ್ಥಿರಗೊಳಿಸಲು ಪ್ರಯತ್ನಿಸಿತು. ಕಾಯಕಗಳ ನಡುವಿನ ತಾರತಮ್ಯವನ್ನು ಈ ನಾಟಕವು ವಾಸ್ತವ ಪ್ರಜ್ಞೆಯ ನೆಲಸ್ಫರ್ಶಿ ಸೆಲೆಯಲ್ಲಿ ತೆರೆದಿಟ್ಟಿದ್ದಂತು ನೋಡುಗನ ಹೃದಯವು ಕರಗುವಂತೆ ಮಾಡಿತು.  


ಹೊನ್ನಯ್ಯ ಹಾಗೂ ಸತ್ಯಕ್ಕನಂತಹ ಕರ್ಮಚಾರಿಗಳು ಸಮಾಜದಲ್ಲಿ ಅನುಭವಿಸುತ್ತಿರುವ ಆರ್ಥಿಕ ಅಭದ್ರತೆ ಅನಾರೋಗ್ಯ, ಸಾಮಾಜಿಕ ಮಾನ್ಯತೆಯ ಕೊರತೆ ಹೀಗೆ ಹಲವಾರು ಆಯಾಮಗಳನ್ನು ದಿಬ್ಬೂರು ರಮೇಶ್‍ರವರು ಕಡಿಮೆ ಪದಗಳಲ್ಲಿಯೇ ಹರಿತವಾದ ನುಡಿಗಳಲ್ಲಿ ನಿರೂಪಿಸಿದ್ದಾರೆ. ಸತ್ಯಕ್ಕನ ಪಾತ್ರವನ್ನು ನೋಡುತ್ತಿದ್ದಂತೆ ನನಗೆ ಅಕ್ಕಮಹಾದೇವಿಯೊಂದಿಗೆ ಉಳುವಿಯಿಂದ ಬಂದ ವಚನಗಾರ್ತಿ ಸತ್ಯಕ್ಕನ ನೆನಪಾಯಿತು. ಆಕೆಯು ಜಾಡವಲಿ ಕಾಯಕದವಳು ಹಾಗೂ ಅಮೂಲ್ಯವಾದ ವಚನಗಳನ್ನು ರಚಿಸಿದವಳು. ಈ ನಾಟಕದಲ್ಲಿ ಬರುವ ಸತ್ಯಕ್ಕನ ಪಾತ್ರವು ವಚನಗಾರ್ತಿ ಸತ್ಯಕ್ಕನ ಪ್ರತಿಬಿಂಬದಂತೆ ಕಂಡಿತು. ಈ ನಾಟಕದಲ್ಲಿ ಸತ್ಯಕ್ಕನ ಒಂದು ವಚನವನ್ನು ಅದ್ಭುತವಾಗಿ ಹಾಡಲಾಯಿತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top