
ಭಗವದ್ಗೀತಾ ಅಭಿಯಾನದ ಅಂಗವಾಗಿ ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ವತಿಯಿಂದ ದಾವಣಗೆರೆಯ ರಾಷ್ಟ್ರೋತ್ತ್ಥಾನ ವಿದ್ಯಾಕೇಂದ್ರ, ನಿಟ್ಟುವಳ್ಳಿ ಇಲ್ಲಿ ಇಂದು (ಶನಿವಾರ) ನಡೆದ "ಭಗವದ್ಗೀತೆ ಒಂದು ನಿರ್ವಹಣಾ ಶಾಸ್ತ್ರ" ಎನ್ನುವ ವಿಷಯದ ಕುರಿತು ನಡೆದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಂಸ್ಕೃತ ಭಾಷಾ ವಿದ್ಯಾರ್ಥಿನಿ ಧರಿತ್ರಿ ಭಿಡೆ ತೃತೀಯ ಬಹುಮಾನ ಪಡೆದಿದ್ದಾಳೆ. ಇತ್ತೀಚೆಗಷ್ಟೆ ಕಟೀಲಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು. ಈಕೆ ಕಲ್ಮಂಜದ ಪರಾರಿ ವಾಳ್ಯದ ಧನಂಜಯ ಭಿಡೆ ಹಾಗೂ ಚಿತ್ರಾ ಭಿಡೆಯವರ ಸುಪುತ್ರಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ