ಅಂಬಿಕಾದಲ್ಲಿ ಶಿಕ್ಷಕ-ರಕ್ಷಕ ಸಭೆ

Upayuktha
0

ಪುತ್ತೂರು: ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ದ್ವಿತೀಯ ಪಿ.ಯು.ಸಿ.ಯ ವಾರ್ಷಿಕ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಇನ್ನು ಕೆಲವೇ ಸಮಯದಲ್ಲಿ ನಡೆಯಲಿವೆ. ಮೊಬೈಲ್ ಅವಾಂತರಗಳೂ ಹೆಚ್ಚಾಗಿ ಕೇಳಿ ಬರುತ್ತಿವೆ. ದಯವಿಟ್ಟು ಹೆತ್ತವರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡಬೇಡಿ ಎಂದು ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಿದ್ಯಾರ್ಥಿಗಳ ಹೆತ್ತವರಲ್ಲಿ ಮನವಿ ಮಾಡಿಕೊಂಡರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿ ನಡೆದ ದ್ವಿತೀಯ ಪಿ.ಯು.ಸಿ.ಯ ವಿದ್ಯಾರ್ಥಿಗಳ ರಕ್ಷಕ-ಶಿಕ್ಷಕ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಲ್ಲಿ ಹಾಗೂ ಹೆತ್ತವರಲ್ಲಿ ಮುಂಬರುವ ಪರೀಕ್ಷೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕೆಂಬ ವಿಚಾರವಾಗಿಯೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಮಾಹಿತಿ ನೀಡಿದರು.


ಸಭೆಯ ಅಧ್ಯಕ್ಷ ಪೀಠವನ್ನಲಂಕರಿಸಿದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಮಾತನಾಡುತ್ತಾ ಗುಣಮಟ್ಟದಲ್ಲಿ ಅಂಬಿಕಾದಲ್ಲಿ ಯಾವ ರೀತಿಯ ಒಪ್ಪಂದ ಇಲ್ಲ. ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು. ಹೆತ್ತವರು ಎಚ್ಚೆತ್ತುಕೊಂಡರೆ ಉಪನ್ಯಾಸಕರು ಜಾಗರೂಕರಾಗಿದ್ದರೆ ತಮ್ಮ ಮಕ್ಕಳನ್ನು, ವಿದ್ಯಾರ್ಥಿಗಳನ್ನು ದಾರಿತಪ್ಪದಂತೆ ನೋಡಿಕೊಳ್ಳಬಹುದು. ತಪುö್ಪ ಮಾಡಿದ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು. ಪೋಷಕ ಬಂಧುಗಳು ತಮ್ಮ ಮಕ್ಕಳನ್ನು ಅಡಿಗಡಿಗೆ ಗಮನಿಸಿ ವಿಚಾರಿಸಿ, ಸರಿಯಾದ ಮಾರ್ಗದಲ್ಲಿ ನಡೆಯುವಂತೆ ನೋಡಬೇಕು. ಮತ್ತೆ ಪಶ್ಚಾತ್ತಾಪ ಪಟ್ಟು ಪ್ರಯೋಜನವಿಲ್ಲ. ಮಕ್ಕಳು ಗುರಿ ಮುಟ್ಟಬೇಕು. ಮಕ್ಕಳ ಅಧಃಪತನಕ್ಕೆ ಶಿಕ್ಷಕರು, ವಿದ್ಯಾಲಯಗಳು ಕಾರಣ ಆಗಬಾರದು. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಆಡಳಿತ ಮಂಡಳಿ, ಶಿಕ್ಷಕರು, ಹೆತ್ತವರು ಕಾರಣಕರ್ತರಾಗಬೇಕು. ಮಕ್ಕಳ ಜೊತೆಗಿದ್ದು ಪೋಷಕರು ಶಿಕ್ಷಕರು ಶ್ರಮಿಸೋಣ. ನಮ್ಮ ವಿದ್ಯಾರ್ಥಿಗಳು ಭಾರತದ ರಾಯಭಾರಿಗಳಾಗಿ ವಿದ್ಯಾಲಯಕ್ಕೆ ಅಪ್ಪ-ಅಮ್ಮನಿಗೆ ಕೀರ್ತಿ ತರಲಿ. ವಿದ್ಯಾರ್ಥಿಗಳಲ್ಲಿ ಅಪ್ರತಿಮ ಸಾಮರ್ಥ್ಯ ಇದೆ ಎಂದು ಅಧ್ಯಕ್ಷೀಯ ಮಾತುಗಳಿಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮತ್ತು ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪೋಷಕರು ಮತ್ತು ಆಡಳಿತ ಮಂಡಳಿ, ಉಪನ್ಯಾಸಕರಲ್ಲಿ ಮುಕ್ತ ಮಾತುಕತೆ ನಡೆಯಿತು. ಫಲಿತಾಂಶದ ಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಮೊಬೈಲ್ ಬಳಕೆ ತಮ್ಮ ಮಕ್ಕಳು ಮಾಡದಂತೆ ನೋಡಿಕೊಳ್ಳುವ ಸಂಕಲ್ಪವನ್ನು ಪೋಷಕರು ಮಾಡಿದರು.


ಸಭೆಯಲ್ಲಿ ಪೋಷಕರ ಹಾಗೂ ಉಪನ್ಯಾಸಕರ ಜೊತೆಗೆ ವಿದ್ಯಾರ್ಥಿಗಳೂ ಉಅಪಸ್ಥಿತರಿದ್ದರು.

ಉಪನ್ಯಾಸಕಿ ಸಂಧ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top