ನಿಟ್ಟೆ: ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ನಿಟ್ಟೆ ಬಿ.ಸಿ. ಆಳ್ವ ಕ್ರೀಡಾಸಂಕೀರ್ಣದಲ್ಲಿ ಹಮ್ಮಿಕೊಂಡಿರುವ ಬಿ.ಸಿ. ಆಳ್ವ ಸ್ಮಾರಕ ಲೆಧರ್ ಬಾಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯು ಡಿ.2 ರಂದು ಆರಂಭಗೊಂಡಿತು.
ಈ ಕ್ರಿಕೆಟ್ ಪಂದ್ಯಾವಳಿಯನ್ನು ಕರ್ನಾಟಕ ಬ್ಯಾಂಕ್ ನ ನಿವೃತ್ತ ಸೀನಿಯರ್ ಮ್ಯಾನೇಜರ್ ಹಾಗೂ ಉತ್ತಮ ಕ್ರಿಕೆಟ್ ಆಟಗಾರ ಶ್ರೀ ಸದಾನಂದ ಶಿರ್ವ ಉದ್ಘಾಟಿಸಿದರು. 'ನಿಟ್ಟೆ ಬಿ.ಸಿ. ಆಳ್ವಾ ಕ್ರೀಡಾ ಸಂಕೀರ್ಣದಂತಹ ಉತ್ತಮ ಸುಸಜ್ಜಿತ ಕ್ರೀಡಾಂಗಣವು ಗ್ರಾಮೀಣ ಪ್ರದೇಶದಲ್ಲಿ ಇರುವುದು ಕ್ರೀಡೆಗೆ ಸಂಸ್ಥೆ ನೀಡುವ ಬೆಂಬಲಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ವ್ಯವಸ್ಥೆಯನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಗೊಳಿಸುವುದು ವಿದ್ಯಾರ್ಥಿಗಳ ಕರ್ತವ್ಯ' ಎಂದು ಅವರು ಹೇಳಿದರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಹಾಗೂ ಡೀನ್ ಎಕಾಡೆಮಿಕ್ಸ್ ಡಾ.ಐ ಆರ್ ಮಿತ್ತಂತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪಂದ್ಯಾವಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ನಿಟ್ಟೆಯ ಎನ್.ಆರ್.ಎ.ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರಶಾಂತ್ ಕುಮಾರ್ ಹೊಳ್ಳ, ಕ್ರೀಡಾ ನಿರ್ದೇಶಕ ಡಾ.ಗಣೇಶ್ ಪೂಜಾರಿ, ನಿಟ್ಟೆ ತಾಂತ್ರಿಕ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೃಷ್ಣರಾಜ ಜೋಯಿಸ ಉಪಸ್ಥಿತರಿದ್ದರು.
ವಿದ್ಯಾರ್ಥಿ ಓಶಾನು ಬೋರಾ ಸ್ವಾಗತಿಸಿದರು. ವಿದ್ಯಾರ್ಥಿ ಆಕಿಬ್ ವಂದಿಸಿದರು. ವಿದ್ಯಾರ್ಥಿ ಪರ್ವೀಸ್ ಕ್ರಿಕೆಟ್ ಪಂದ್ಯಾವಳಿಯನ್ನು ಸಂಯೋಜಿಸಲಿರುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ