ಭರತನಾಟ್ಯವು ದಕ್ಷಿಣ ಭಾರತದ ಜನಪ್ರಿಯ ನೃತ್ಯ ಪ್ರಕಾರವಾಗಿದೆ. ಈ ನಾಟ್ಯ ಕಲೆಗೆ ತನ್ನದೇ ಆದಂತಹ ವಿಶಿಷ್ಠ ಗೌರವ ಇದೆ. ಈ ನಾಟ್ಯ ಪ್ರದರ್ಶನವು ಕಣ್ಣಿನ ಚಲನೆಗಳು, ಅಭಿವ್ಯಕ್ತಿಗಳು, ಕೈ ಸನ್ನೆಗಳು, ಹೆಜ್ಜೆಗಳು, ಸಂಗೀತ ಮತ್ತು ನೃತ್ಯ ಸಮಾಗಮದಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಂತೆ ಮಾಡಿ ನೋಡುಗ ರಿಗ ವಿಭಿನ್ನ ಅನುಭವ ನೀಡುತ್ತದೆ. ಇಂತಹ ನೃತ್ಯಕಲೆಯಲ್ಲಿ ತನ್ನ ಅದ್ಭುತ ನೃತ್ಯ ಛಾಪು ಮೂಡಿಸಿರುವವರು ಪುತ್ತೂರಿನ ಸಾಮೆತ್ತಡ್ಕದ ನಿವಾಸಿಗ ಳಾದ ತಿಮ್ಮಪ್ಪ ನಾಯ್ಕ್ ಹಾಗೂ ಪ್ರೇಮ ದಂಪತಿಗಳ ಪುತ್ರಿ ಅನುಶ್ರೀ.
ಬಾಲ್ಯದಲ್ಲೇ ನಾಲ್ಕನೇ ವಯಸ್ಸಿನಲ್ಲಿರುವಾಗ ಭರತನಾಟ್ಯ ನೃತ್ಯ ಕ್ಷೇತ್ರಕ್ಕೆ ಕಾಲಿಡುವುದರ ಮೂಲಕ ಅದೇ ಸಮಯದಲ್ಲಿ ವೇದಿಕೆಯಲ್ಲಿ ತನ್ನ ನೃತ್ಯವನ್ನು ಪ್ರದರ್ಶಿಸಲು ಅವಕಾಶ ಒದಗಿ ಬಂತು. ಶಾರದಾ ಕಲಾ ಕೇಂದ್ರ ಟ್ರಸ್ಟ್ ದರ್ಬೆ, ಪುತ್ತೂರು ಇಲ್ಲಿನ ನೃತ್ಯ ಗುರುಗಳಾದ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಅವರ ಬಳಿ ನೃತ್ಯ ಅಭ್ಯಾಸವನ್ನು ಮಾಡುವುದರ ಮೂಲಕ ಚಿದಾನಂದ ಕಾಮತ್ ಕಾಸರಗೋಡು ಆಯೋಜನೆಯ "ಬಾರಿಸು ಕನ್ನಡ ಡಿಂಡಿಮವ" ಕಾರ್ಯಕ್ರಮದ ಮೂಲಕ ಇಲ್ಲಿಯವರೆಗೆ ವೇದಿಕೆಯಲ್ಲಿ ಸುಮಾರು 750 ಕ್ಕಿಂತಲ್ಲೂ ಹೆಚ್ಚು ಹಾಡು ಹಾಗೂ ನೃತ್ಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುವರು.
ಕರ್ನಾಟಕ ಸಂಗೀತ ಜೂನಿ ಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷ ನ್ ಅಲ್ಲಿ ತೇರ್ಗಡೆಗೊಂಡು, ಚಿತ್ರಕಲಾ ಕ್ಷೇತ್ರದಲ್ಲಿ ಜೂನಿ ಯರ್ ಹಾಗೂ ಸೀನಿಯರ್ ಬೋರ್ಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಲ್ಲಿ ತೇರ್ಗಡೆ ಗೊಂಡಿರುವರು. 2014 ರಲ್ಲಿ ಜನನ ಮಾದರ ರಾಜ್ಯಪ್ರಶ ಸ್ತಿಗೆ ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ಗುರುತಿಸಿಕೊಳ್ಳುವು ದರ ಮೂಲಕ ಮತ್ತೆ 2016 ರಲ್ಲಿ ಅರಳು ಮಲ್ಲಿಗೆ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. 2018 ರಲ್ಲಿ ಜಲ ಮಾಲಿನ್ಯ ವಿಷಯದ ಕುರಿತು ಕೇಂದ್ರ ಸರ್ಕಾರವು ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವರು. ಹಾಸನ, ಪುತ್ತೂರು, ಕೇರಳ, ಮಡಿಕೇರಿ, ಶೃಂಗೇರಿ, ಶಿವಮೊಗ್ಗ ಮುಂತಾದ ಹಲವು ಕಡೆಗಳ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿರುವ ಹೆಮ್ಮೆ ಇವರದು.
ಸತತ 17 ವರುಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಪಳಗಿಸಿಕೊಂಡಿರುವ ಇವರು ಇದೀಗ 2 ವರುಷಗಳಿಂದ ಉಪ್ಪಿನಂಗಡಿಯಲ್ಲಿ ನೃತ್ಯ ಸಂಸ್ಥೆಯಲ್ಲಿ ನೃತ್ಯ ತರಬೇತಿಯನ್ನು ನೀಡುವುದರೊಂದಿಗೆ ವಿದ್ವತ್ ಭರತನಾಟ್ಯಂ ಪಡೆದುಕೊಳ್ಳಲು ತಯಾರಿಯನ್ನು ನಡೆಸುತ್ತಿದ್ದಾರೆ.ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪುತ್ತೂರಿನ ಬೆಥನಿ ವಿದ್ಯಾಸಂಸ್ಥೆ ದರ್ಬೆಯಲ್ಲಿ ಪಡೆದು, ಪದವಿಪೂರ್ವ ವ್ಯಾಸಂಗವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ನಲ್ಲಿ ಪೂರೈಸಿ ಪ್ರಸ್ತುತ ಸಂತ ಫಿಲೋಮಿನಾ ಕಾಲೇಜುನಲ್ಲಿ ಅಂತಿಮ ವರುಷದ ಪದವಿ ವ್ಯಾಸಂಗವನ್ನು ಪಡೆಯುತ್ತಿದ್ದಾರೆ.
-ಶಿಲ್ಪಾ ಜಯಾನಂದ್
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ (ಸ್ವಾಯತ್ತ) ಕಾಲೇಜು, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ