ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ರೂಪುಗೊಳಿಸಿದ ಚುನಾವಣಾ ಆಯೋಗ

Upayuktha
0

ನವದೆಹಲಿ: ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಆಯೋಗವು ದೇಶೀಯ ವಲಸೆ ಮತದಾರರಿಗೆಂದು ವಿನೂತನ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ತಯಾರಿಸಿದೆ. ಈ ಯಂತ್ರದ ಪ್ರದರ್ಶನಕ್ಕೆ ಜ. 16ರಂದು ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದೆ.


ಪ್ರಕಟಣೆಯಲ್ಲಿ ತಿಳಿಸಿರುವಂತೆ, ತಾಂತ್ರಿಕವಾಗಿ ಅಗಾಧ ಪ್ರಗತಿ ಕಾಣುತ್ತಿರುವ ಈ ಯುಗದಲ್ಲಿ, ಯಾವುದೇ ವ್ಯಕ್ತಿಗೆ ಮತದಾನದ ಹಕ್ಕು ಚಲಾಯಿಸದಂತೆ ಹಡೆಯುವುದಕ್ಕೆ ವಲಸೆ ಕಾರಣವಾಗಬಾರದು. 2019ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಶೇ 67.4% ರಷ್ಟು ಮಾತ್ರ ಮತದಾನವಾಗಿದ್ದು, ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 30 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸದಿರುದಕ್ಕೆ ಭಾರತದ ಚುನಾವಣಾ ಆಯೋಗವು ಕಳವಳ ವ್ಯಕ್ತಪಡಿಸಿದೆ. ಮತದಾರರು ಹೊಸ ವಾಸಸ್ಥಳದಲ್ಲಿ ನೋಂದಾಯಿಸಲು ಅವಕಾಶವಿಲ್ಲದ ಹಲವು ಕಾರಣಗಳಿರುವುದಾಗಿ ಆಯೋಗದ ಗಮನಕ್ಕೆ ಬಂದಿದೆ. ಹೀಗಾಗಿ ಹಲವು ನಾಗರಿಕರಿಗೆ ಮತದಾನದ ಹಕ್ಕನ್ನು ಚಲಾಯಿಸುವ ಅವಕಾಶವೂ ಇಲ್ಲವಾಗಿದೆ. ಮತದಾನದ ಪ್ರಮಾಣವನ್ನು ಸುಧಾರಿಸಲು ಮತ್ತು ಚುನಾವಣೆಯ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಆಂತರಿಕ ವಲಸೆಯ ಕಾರಣದಿಂದ ಮತದಾನ ಮಾಡಲಾಗದೆ ಇರುವುದೂ ಒಂದು ಕಾರಣವಾಗಿದೆ. ದೇಶದೊಳಗಿನ ವಲಸೆಗೆ ಸಂಬಂಧಿಸಿದಂತೆ ಯಾವುದೇ ಕೇಂದ್ರೀಯ ಡೇಟಾಬೇಸ್ ಲಭ್ಯವಿಲ್ಲ. ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಮಾಹಿತಿಯ ವಿಶ್ಲೇಷಣೆಯ ಪ್ರಕಾರ, ಕೆಲಸ, ಮದುವೆ ಮತ್ತು ಶಿಕ್ಷಣದ ಕಾರಣಗಳಿಗೆ ಆಂತರಿಕ ವಲಸೆಯಾಗುವುದನ್ನು ಪ್ರಮುಖವಾಗಿ ಗುರುತಿಸುತ್ತದೆ. ಒಟ್ಟಾರೆ ಆಂತರಿಕವಾಗಿ ನಡೆಯುವ ವಲಸೆಯಲ್ಲಿ ಗ್ರಾಮಗಳಿಂದ ನಗರಗಳೆಡೆಗೆ ಆಗುವ ವಲಸ ಪ್ರಧಾನವಾಗಿದೆ. ಸರಿಸುಮಾರು 85% ರಷ್ಟು ಆಂತರಿಕ ವಲಸೆ ರಾಜ್ಯಗಳಲ್ಲಿದೆ.


ಶ್ರೀ ರಾಜೀವ್ ಕುಮಾರ್ ಅವರು, ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ, ಚಮೋಲಿ ಜಿಲ್ಲೆಯ ಡುಮಾಕ್ ಗ್ರಾಮಕ್ಕೆ ಚಾರಣ ಮಾಡಿ ಅಂತರಿಕ ವಲಸೆಯ ಸಮಸ್ಯೆಗಳನ್ನು ಸ್ವತಃ ಅರ್ಥ ಮಾಡಿಕೊಂಡಿದ್ದಾರೆ. ವಲಸಿಗ ಮತದಾರರು ತಮ್ಮ ವಾಸಸ್ಥಳದಿಂದ ತಮ್ಮ ಮತದಾನದ ಹಕ್ಕು ಚಲಾಯಿಸಲು ಸಾಧ್ಯವಾಗುವಂತೆ ಮಾಡುವತ್ತ ಕುಮಾರ್ ಅವರ ಗಮನವಿತ್ತು. ಈ ನಿಟ್ಟಿನಲ್ಲಿ ಮತದಾರರನ್ನು ಸಬಲೀಕರಿಸುವ ಪ್ರಕ್ರಿಯೆಯಲ್ಲಿ ಕಾನೂನು, ಶಾಸನಬದ್ಧ, ಆಡಳಿತಾತ್ಮಕ ಮತ್ತು ತಾಂತ್ರಿಕ ಮಧ್ಯಸ್ಥಿಕೆಗಳನ್ನು ಒಳಗೊಂಡಿರುತ್ತದೆ ಎಂಬುದು ಅರಿತ ಆಯೋಗದ ತಂಡವು ಎಲ್ಲಾ ಸಾಮಾಜಿಕ-ಆರ್ಥಿಕ ಸ್ತರಗಳಲ್ಲಿ ವಲಸಿಗರ ಚುನಾವಣಾ ಭಾಗವಹಿಸುವಿಕೆಯನ್ನು ಸುಲಭಗೊಳಿಸಲು ಮತ್ತು ಸೂಕ್ತ ಪರಿಹಾರಗಳನ್ನು ಕಂಡುಹಿಡಿಯಲು ಸುದೀರ್ಘವಾಗಿ ಚರ್ಚಿಸಿದೆ. ಅಂಚೆ ಮತಪತ್ರಗಳು, ಪ್ರಾಕ್ಸಿ ಮತದಾನ, ವಿಶೇಷ ಆರಂಭಿಕ ಮತದಾನ ಕೇಂದ್ರಗಳಲ್ಲಿ ಆರಂಭಿಕ ಮತದಾನ, ಅಂಚೆ ಮತಪತ್ರಗಳ ಏಕಮುಖ ಅಥವಾ ದ್ವಿಮುಖ ವಿದ್ಯುನ್ಮಾನ ಪ್ರಸರಣ (ETPBS), ಇಂಟರ್ನೆಟ್ ಆಧಾರಿತ ಮತದಾನ ವ್ಯವಸ್ಥೆ ಇತ್ಯಾದಿ ಮತದಾನ ವಿಧಾನಗಳನ್ನು ಅನ್ವೇಷಿಸಿದೆ.


ಈ ಪ್ರಕ್ರಿಯೆಯ ಭಾಗವಾದ ಎಲ್ಲರಿಗೂ ಒಪ್ಪಿತವಾಗಬಹುದಾದ, ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಸ್ವೀಕಾರಾರ್ಹವಾದ ತಾಂತ್ರಿಕ ಪರಿಹಾರವನ್ನು ಕಂಡುಹಿಡಿಯುವ ನಿಟ್ಟಿನಲ್ಲಿ, ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ನೇತೃತ್ವದ ಆಯೋಗವು ಚುನಾವಣಾ ಆಯುಕ್ತರಾದ ಶ್ರೀ ಅನುಪ್ ಚಂದ್ರ ಪಾಂಡೆ ಮತ್ತು ಶ್ರೀ ಅರುಣ್ ಗೋಯೆಲ್ ಅವರೊಂದಿಗೆ ಹೊಸ ಪ್ರಯೋಗಕ್ಕೆ ಸಿದ್ಧವಾಗಿದೆ. ದೀರ್ಘಕಾಲದಿಂದ ಸಮರ್ಥವಾಗಿ ಬಳಕೆಯಲ್ಲಿರುವ ಎಂ3 ಮಾದರಿಯ ಇವಿಎಂಗಳಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿ, ತಮ್ಮ ತವರು ಮತದಾನ ಕ್ಷೇತ್ರದಿಂದ ದೂರ ಇರುವ ಮತದಾರರು, ತಾವು ಇದ್ದಲ್ಲಿಂದಲೇ ರಿಮೋಟ್ ಪೋಲಿಂಗ್ ಸ್ಟೇಷನ್‌ಗಳ ಮುಖಾಂತರ ಮತದಾನ ಪ್ರಯೋಗ ಮಾಡಲು ತಯಾರಿ ನಡೆಸಿದೆ. ಈ ಹೊಸ ವಿಧಾನದ ಮೂಲಕ ವಲಸಿಗ ಮತದಾರರು ತಮ್ಮ ಮತವನ್ನು ಚಲಾಯಿಸುವುದಕ್ಕೆ ತವರು ಕ್ಷೇತ್ರಕ್ಕೆ ತೆರಳಬೇಕಾದ ಅಗತ್ಯವಿರುವುದಿಲ್ಲ.


ಈ ವಿನೂತನ ಪ್ರಯೋಗಕ್ಕೆ ಸಂಬಂಧಿಸಿದ ಪರಿಕಲ್ಪನೆಯ ಟಿಪ್ಪಣಿಯನ್ನು ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ (https://eci.gov.in/files/file/14714-letter-to-political-parties-on-discussion-on-improving-voterparticipation-of-domestic-migrant-using-remote-voting/) ಈ ಟಿಪ್ಪಣಿಯಲ್ಲಿ ಆಂತರಿಕ ವಲಸಿಗರನ್ನು ವ್ಯಾಖ್ಯಾನಿಸುವ, ಮಾದರಿ ನೀತಿ ಸಂಹಿತೆಯ ಅನುಷ್ಠಾನ, ಮತದಾನದ ಗೌಪ್ಯತೆಯನ್ನು ಖಾತ್ರಿಪಡಿಸುವುದು, ಮತದಾರರನ್ನು ಗುರುತಿಸಲು ಪೋಲಿಂಗ್ ಏಜೆಂಟ್‌ಗಳ ಸೌಲಭ್ಯ, ರಿಮೋಟ್ ಮತದಾನದ ಪ್ರಕ್ರಿಯೆ ಮತ್ತು ಮತಗಳ ಎಣಿಕೆಯ ವಿಧಾನ ಸಮಸ್ಯೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎತ್ತಿ ಹಿಡಿಯುತ್ತದೆ.


ಕಾನೂನಾತ್ಮಕ ಸವಾಲುಗಳು


ಈ ಕಾನೂನುಗಳಲ್ಲಿ ತಿದ್ದುಪಡಿಯಾಗಬೇಕು

• ಆರ್‌ಪಿ ಕಾಯ್ದೆ 1950 1951

ಚುನಾವಣಾ ನಡೆಸುವ ನಿಯಮಗಳು 1961

• ಮತದಾರರ ನೋಂದಣಿ ನಿಯಮಗಳು, 1960;

ವಲಸಿಗ ಮತದಾರರ ವ್ಯಾಖ್ಯಾನ

• ಮತದಾನ ದಿನದ ಗೈರಿನಿಂದ ಹಿಡಿದು ಶಾಶ್ವತ ಸ್ಥಳಾಂತರ

• 'ಸಾಮಾನ್ಯ ನಿವಾಸ' ಮತ್ತು 'ತಾತ್ಕಾಲಿಕ ಅನುಪಸ್ಥಿತಿ'ಯ ಹಿನ್ನೆಲೆಯಲ್ಲಿ, ಕಾನೂನು ರಚನೆಯ ಮೂಲ ಸಂದರ್ಭದಲ್ಲಿ ಸ್ಥಳದಲ್ಲಿ ನೋಂದಣಿಯನ್ನು ಉಳಿಸಿಕೊಂಡು ದೂರದಿಂದಲೇ ಮತದಾನ

• ಪ್ರಾದೇಶಿಕ ಪರಿಕಲ್ಪನೆಯೊಂದಿಗೆ ವ್ಯವಹರಿಸುವುದು

• ದೂರವನ್ನು ಕ್ಷೇತ್ರದ ವ್ಯಾಖ್ಯಾನಿಸುವುದು: ಕ್ಷೇತ್ರದ ಹೊರಗೆ, ಜಿಲ್ಲೆಯ ಹೊರಗೆ ಅಥವಾ ರಾಜ್ಯದಿಂದ ಹೊರಗೆ.


ಆಡಳಿತಾತ್ಮಕ ಸವಾಲುಗಳು


• ದೂರದ ಮತದಾರರ ಎಣಿಕೆ ಸ್ವಯಂ ಘೋಷಣೆ?

• ನಿಯಂತ್ರಿತ ಪರಿಸರವನ್ನು ಒದಗಿಸುವುದು. ದೂರದ ಮತದಾನದ ಸ್ಥಳಗಳಲ್ಲಿ ಗೌಪ್ಯತಯನ್ನು ಖಾತ್ರಿಪಡಿಸುವುದು.

• ರಿಮೋಟ್ ಪೋಟಿಂಗ ಬೂತ್‌ಗಳಲ್ಲಿ ಪೋಲಿಂಗ್ ಏಜೆಂಟ್‌ಗಳನ್ನು ಒದಗಿಸುವುದು ಮತ್ತು ಸೋಗು ಹಾಕುವುದನ್ನು ಮತದಾರರ ಖಚಿತಪಡಿಸಿಕೊಳ್ಳುವುದು.

• ಸ್ಥಾಪಿಸಬೇಕಾದ ಬೂತ್‌ಗಳ ಸಂಖ್ಯೆ ಮತ್ತು ಸ್ಥಳಗಳು

• ದೂರದ ಮತಗಟ್ಟೆಗಳಿಗೆ ಮತಗಟ್ಟೆ ಸಿಬ್ಬಂದಿಯ ನೇಮಕ ಮತ್ತು ಅದರ ಮೇಲ್ವಿಚಾರಣೆ.

• ದೂರದ ಸ್ಥಳದಲ್ಲಿ (ಇತರ ರಾಜ್ಯ) ನೀತಿ ಅನುಷ್ಠಾನ


ತಾಂತ್ರಿಕ ಸವಾಲುಗಳು


• ರಿಮೋಟ್ ಮತದಾನದ ವಿಧಾನ

• ವಿಧಾನಗಳು/ ಬಹು-ವಿಭಾಗದ ರಿಮೋಟ್ ಇವಿಎಂ ಅಥವಾ ಯಾವುದೇ ಇತರ ತಂತ್ರಜ್ಞಾನದೊಂದಿಗೆ ಮತದಾರರ ಪರಿಚಿತತ.

• ರಿಮೋಟ್ ಬೂತ್‌ಗಳಲ್ಲಿ ಇತರ ಮತ್ತು ರಾಜ್ಯದಲ್ಲಿರುವ ಚುನಾವಣಾ ಚಲಾವಣೆಯಾದ ಮತಗಳ ಅಧಿಕಾರಿಗೆ ರವಾನಿಸಲಾಗುತ್ತದೆ.


ಆಯೋಗವು ಹೆಸರಾಂತ ಸಾರ್ವಜನಿಕ ವಲಯದ ಉದ್ಯಮದ ಸಹಯೋಗದೊಂದಿಗೆ ಈಗ ವಿವಿಧ ಮತಕ್ಷೇತ್ರಗಳಿಗೆ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ (VM)ನ ಮೂಲಕ ಪ್ರಾಯೋಗಿಕ ಪರೀಕ್ಷೆ ನಡೆಸಲು ಸಿದ್ಧವಾಗಿದೆ. ಶಿಕ್ಷಣ, ಉದ್ಯೋಗ ಇತ್ಯಾದಿ ಕಾರಣಗಳಿಗೆ ವಲಸೆ ಹೋಗಿರುವವರು ಹಾವಿರುವ ಪ್ರಸ್ತುತ ಸ್ಥಳದಿಂದಲೇ ಮಹದಾನ ಮಾಡುವುದಕ್ಕೆ ನೆರವಾಗಲಿದ್ದು, ಈ ಮೂಲಕ ಅಂತರಿಕ ವಲಸಿಗರೂ ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲಿದೆ.


ಮಾರ್ಪಾಟುಗಳೊಂದಿಗೆ ಸಿದ್ಧವಾಗಿರುವ ಈ ಇವಿಎಂ ಒಂದೇ ಮತಗಟ್ಟೆಯಿಂದ 72 ವಿವಿಧ ಮತ ಕ್ಷೇತ್ರಗಳನ್ನು ನಿರ್ವಹಿಸಬಲ್ಲದು, ಈ ಉಪಕ್ರಮವು ಕಾರ್ಯಗತಗೊಂಡರೆ, ಆಗಾಗ್ಗೆ ನಿವಾಸಗಳನ್ನು ಬದಲಾಯಿಸುವ, ಸಾಮಾಜಿಕ ಮತ್ತು ಭಾವನಾತ್ಮಕ ಸಂಪರ್ಕದಂತಹ ವಿವಿಧ ಕಾರಣಗಳಿಗಾಗಿ ತಮ್ಮ ಕೆಲಸದ ಸ್ಥಳದಲ್ಲಿ ತಮ್ಮನ್ನು ತಾವು ಮತದಾರರೆಂದು ನೋಂದಾಯಿಸಿಕೊಳ್ಳಲು ಹಿಂಜರಿಯುವ, ನಮ್ಮ ಮನೆ ಸ್ಥಳೀಯ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಳಿಸಲು ಇಚ್ಛಿಸದಿರುವುದು ಶಾಶ್ವತ ನಿವಾಸ ಆಸ್ತಿ ಇತ್ಯಾದಿ ಇರುವ ಅಂತರಿಕ ವಲಸಿಗರಿಗೆ ಈ ಹೊಸ ಪ್ರಯೋಗದ ಮೂಲಕ ಮತ್ತೆ ತಮ್ಮ ಊರಿನೊಂದಿಗೆ ಸಂಪರ್ಕ ಹೊಂದಲು ಅವಕಾಶ ಮಾಡಿಕೊಡುವ ಜೊತೆಗೆ, ಸಾಮಾಜಿಕ ಪರಿವರ್ತನೆಗೆ ಕಾರಣವಾಗಬಹುದು.


ಈ ಹಿನ್ನೆಲೆಯಲ್ಲಿ ಆಯೋಗವು ಎಲ್ಲಾ ಮಾನ್ಯತೆ ಪಡೆದ 08 ರಾಷ್ಟ್ರೀಯ ಮತ್ತು 57 ರಾಜ್ಯ ರಾಜಕೀಯ ಪಕ್ಷಗಳನ್ನು ಜ.1 ರಂದು ಆಹ್ವಾನಿಸಿದ್ದು, ಬಹು ಕ್ಷೇತ್ರ ಮೂಲಮಾದರಿಯ ರಿಮೋಟ್ EVM ನ ಕಾರ್ಯನಿರ್ವಹಣೆಯನ್ನು ಪ್ರದರ್ಶಿಸಲಿದೆ. ತಾಂತ್ರಿಕ ತಜ್ಞರ ಸಮಿತಿಯ ಸದಸ್ಯರೂ ಭಾಗವಹಿಸಲಿದ್ದಾರೆ. ಅಯೋಗವು ಜ. 31 ರೊಳಗೆ ಮಾನ್ಯತ ಪಡೆದ ರಾಜಕೀಯ ಪಕ್ಷಗಳಿಂದ, ಅಂತರಿಕ ವಲಸಿಗರನ್ನು ಒಳಗೊಳ್ಳುವ ನಿಟ್ಟಿನಲ್ಲಿ ಶಾಸನದಲ್ಲಿ ಅಗತ್ಯವಿರುವ ಬದಲಾವಣೆಗಳು, ಆಡಳಿತಾತ್ಮಕ ಕಾರ್ಯವಿಧಾನಗಳಲ್ಲಿ ಬದಲಾವಣೆಗಳು ಮತ್ತು ಮತದಾನ ವಿಧಾನ ಆರ್. ವಿಎಂ/ತಂತ್ರಜ್ಞಾನದ ಬದಲಾವಣೆಗಳು ಸೇರಿದಂತೆ ವಿವಿಧ ಸಂಬಂಧಿತ ವಿಷಯಗಳ ಕುರಿತು ಲಿಖಿತ ಅಭಿಪ್ರಾಯಗಳನ್ನು ಕೋರಿದೆ.


ಚುನಾವಣಾ ಪ್ರಕ್ರಿಯೆಯಲ್ಲಿ ಪಾಲುದಾರರೆನಿಸಿಕೊಂಡ ಎಲ್ಲರ ಪ್ರತಿಕ್ರಿಯೆ ಮತ್ತು ಮಾದರಿಯ ಪ್ರದರ್ಶನದ ಆಧಾರದ ಮೇಲೆ, ಆಯೋಗವು ದೂರದ ಮತದಾನ ವಿಧಾನವನ್ನು ಅಳವಡಿಸುವ ಪ್ರಕ್ರಿಯೆಯನ್ನು ಸೂಕ್ತವಾಗಿ ಮುಂದುವರಿಸುತ್ತದೆ. ಎಂದು ಜಂಟಿ ಕಾರ್ಯದರ್ಶಿ (ಮಾಧ್ಯಮ) ಅನುಶ್ ಚಂದ‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top