ಪುತ್ತೂರು: ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ವತಿಯಿಂದ ನಡೆಸಲ್ವಟ್ಟ ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುದಾನ ವಸತಿ ಶಾಲೆಯ 7 ವಿದ್ಯಾರ್ಥಿಗಳು ಪದಕ ವಿಜೇತರಾಗಿ ಕಡಬದಲ್ಲಿ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ.
ವಿಘ್ನೇಶ್ ಸಿ ರೈ (8ನೇ) ಡಿಸ್ಕ್ಸ್‌ನಲ್ಲಿ (ಪ್ರ), ಶಾಟ್‌ಪುಟ್ (ತೃ), ಗಗನ್ (7ನೇ) 100ಮೀ ,200ಮೀ ನಲ್ಲಿ (ದ್ವಿ), ಅಕಿಲ್ (7ನೇ) ಶಾಟ್‌ಪುಟ್ (ದ್ವಿ), 14 ವರ್ಷದ ವಯೋಮಾನದ (8ನೇ ತರಗತಿ) ರಿಲೇಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಪಾಯಿಜ್, ಆಲ್‌ಪಾತಿ, ವಿಘ್ನೇಶ್, ನಿಕೋಲಸ್ (8ನೇ ತರಗತಿ), ಅದೇ ರೀತಿ ನಿಹಾರಿಕಾ (9ನೇ) ಶಾಟ್‌ಪುಟ್‌ನಲ್ಲಿ ಚತುರ್ಥ ಸ್ಥಾನ ಪಡೆದಿರುತ್ತಾಳೆ. ಇವರನ್ನು ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಶೋಭಾ ನಾಗರಾಜ್ ಮತ್ತು ಶಾಲಾ ದೈ.ಶಿ. ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ