ಸುದಾನ ಶಾಲೆಯಲ್ಲಿ ಮಕ್ಕಳ ಮಾಸೋತ್ಸವ ಕಾನೂನು ಮಾಹಿತಿ ಕಾರ್ಯಕ್ರಮ

Upayuktha
0

ಪುತ್ತೂರು: ಇಲ್ಲಿನ ಸುದಾನ ಶಾಲೆಯಲ್ಲಿ ನವೆಂಬರ್ 4 ರಂದು, ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲ ಸಂಘ ಪುತ್ತೂರು, ಜಿಲ್ಲಾ ಮತ್ತು ತಾಲೂಕು ಶಿಕ್ಷಣ ಸಂಪನ್ಮೂಲಗಳ ಕೇಂದ್ರ ಪುತ್ತೂರು, ಹಾಗೂ ಸುದಾನ ವಸತಿ ಶಾಲೆ ಪುತ್ತೂರು ಇವರ ವತಿಯಿಂದ ‘ಮಕ್ಕಳ ಮಾಸೋತ್ಸವ’ ಪ್ರಯುಕ್ತ ಪೋಕ್ಸೋ ಕಾಯ್ದೆಯ ಬಗ್ಗೆ ಸುದಾನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ಕಾರ್ಯಕ್ರಮವು ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಯವರು ಆಗಿರುವ ಶ್ರೀಮತಿ. ಅರ್ಚನಾ ಕೆ ಉಣ್ಣಿತಾನ್‌ರವರು ಕಾನೂನು ಎಂದರೇನು? ಅದರ ರಕ್ಷಣೆಯನ್ನು ಹೇಗೆ ಮತ್ತುಯಾಕೆ ಮಾಡಬೇಕು ಎಂದು ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲೆ ಶ್ರೀಮತಿ. ಹೀರಾ ಉದಯ್‌ರವರು ಪೋಕ್ಸೋ ಕಾನೂನಿನ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷರಾಗಿರುವ ಶ್ರೀ. ಮನೋಹರ್‌ ಕೆ.ವಿ ರವರು ಮುಖ್ಯ ಅಭ್ಯಾಗತರಾಗಿ ಆಗಮಿಸಿ ಮಾತನಾಡುತ್ತಾ ಸ್ವಯಂರಕ್ಷಣೆಗಾಗಿ ಕಾನೂನಿನ ರಕ್ಷಣೆಯನ್ನು ಹೇಗೆ ಮಾಡಬೇಕುಎಂದು ವಿವರಿಸಿದರು.


ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದರೆ ವಿಜಯ ಹಾರ್ವಿನ್‌ರವರು ಮಕ್ಕಳ ಹಿತರಕ್ಷಣೆ ಮಾಡುತ್ತಿರುವ ಇಲಾಖೆ ಮತ್ತು ವಕೀಲರ ಸಂಘದ ಕಾರ್ಯಕ್ರಮವನ್ನು ಶ್ಲಾಘಿಸಿದರು. ಪುತ್ತೂರಿನ ಶಿಕ್ಷಣ ಸಂಪನ್ಮೂಲದ ಅಧ್ಯಕ್ಷರಾದ ವಕೀಲರು ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳಲ್ಲಿ ಮಕ್ಕಳ ಮಾಸೋತ್ಸವದ ಕಾರ್ಯ ವೈಖರಿ ಹಾಗೂ ವಿದ್ಯಾರ್ಥಿ ದೆಸೆಯಲ್ಲಿ ಜಾಗರೂಕತೆಯ ಜವಾಬ್ದಾರಿಗಳನ್ನು ವಿವರಿಸಿದರು.


ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್‌ರವರು ಸ್ವಾಗತಿಸಿದರು. ಶ್ರೀಮತಿ ನಯನಾ ರೈ (ಅಧ್ಯಕ್ಷರು, ಶಿಕ್ಷಣ ಸಂಪನ್ಮೂಲಗಳ ಒಕ್ಕೂಟ ರಿ. ದ.ಕ ಪ್ಯಾರಾ ಲೀಗಲ್ ವಾಲೆಂಟಿಯರ್, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು), ಕಾರ್ಯಕ್ರಮವನ್ನು ಆಯೋಜಿಸಿದ್ದ ಎಲ್ಲಾ ಸಂಘಗಳ ಸದಸ್ಯರೂ ಉಪಸ್ಥಿತರಿದ್ದರು. ಸುದಾನ ಶಾಲೆಯ ಮಕ್ಕಳ ಸುರಕ್ಷಾ ಸಮಿತಿ ಈ ಕಾರ್ಯಕ್ರಮವನ್ನು ಸಂಯೋಜಿಸಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top