ಡಾ. ಕೃಷ್ಣಮೂರ್ತಿ ಅವರ ನಿಗೂಢ ಸಾವು: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು

Upayuktha
0

ಕಾಸರಗೋಡು: ಬದಿಯಡ್ಕದ ಹೆಸರಾಂತ ದಂತವೈದ್ಯರಾದ ಡಾ. ಕೃಷ್ಣಮೂರ್ತಿ ಸರ್ಪಂಗಳ ಅವರ ಮೃತದೇಹ ಕುಂದಾಪುರದ ಸಮೀಪ ಹಟ್ಟಿಯಂಗಡಿಯ ಕಾಡು ಅಜ್ಜಿಮನೆ ಎಂಬಲ್ಲಿ ರೈಲ್ವೇ ಹಳಿಯ ಸಮೀಪ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮೊನ್ನೆ ನ.8ರಂದು ಮಧ್ಯಾಹ್ನದಿಂದ ದಿಢೀರ್‌ ನಾಪತ್ತೆಯಾಗಿದ್ದ ಅವರ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಇದೀಗ ಅವರು ನಾಪತ್ತೆಯಾಗಿ ಎರಡು ದಿನಗಳ ಬಳಿಕ ಅವರ ಮೃತದೇಹ ತೀವ್ರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.


ಮುಸ್ಲಿಂ ಗೂಂಡಾ ಮಾಫಿಯಾ ಒಂದು ವೈದ್ಯರ ನಾಪತ್ತೆ ಹಾಗೂ ನಿಗೂಢ ಸಾವಿನ ಹಿಂದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಗೂಂಡಾಗಳು ಬದಿಯಡ್ಕದ ಹಲವು ಹಿಂದೂ ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಂದ ಹಣ ವಸೂಲಿಗೆ ಇಳಿದಿದ್ದು, ತಕರಾರು ಎತ್ತಿದವರಿಗೆ, ವಿರೋಧ ವ್ಯಕ್ತಪಡಿಸಿದವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ.  ಇದಕ್ಕೆ ಅಂಜಿ ಎಷ್ಟೋ ಮಂದಿ ಸದ್ದಿಲ್ಲದೆ, ತಕರಾರು ಎತ್ತದೆ ಪ್ರಾಣವನ್ನೇ ಒತ್ತೆಯಿಟ್ಟು ಹಣ ಹೊಂದಿಸಿ ಗೂಂಡಾಗಳಿಗೆ ನೀಡಿದ್ದಾರೆ ಎಂಬುದು ಇದೀಗ ಒಂದೊಂದಾಗಿ ಹೊರ ಬರುತ್ತಿರುವ ಮಾಹಿತಿಯಾಗಿದೆ.


ವೈದ್ಯರ ವಿರುದ್ಧ ಸುಳ್ಳು ಆರೋಪ ಹೊರಿಸಿ, ಅವರಿಂದ ಹಣ ವಸೂಲಿಗೆ ಇಳಿದ ಮಾಫಿಯಾ ಗೂಂಡಾಗಳು ಅವರಿಗೆ ಬೆದರಿಕೆಯೊಡ್ಡಿ ಕ್ಲಿನಿಕ್‌ನಲ್ಲೇ ಹಲ್ಲೆ ನಡೆಸಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ಆಗ ಅಲ್ಲಿದ್ದ ಇತರರು ಮಧ್ಯೆಪ್ರವೇಶಿಸಿ ವೈದ್ಯರ ಮೇಲೆ ಹಲ್ಲೆ ನಡೆಸುವುದನ್ನು ತಡೆದಿದ್ದಾರೆ. ಆ ಬಳಿಕ ವೈದ್ಯರು ಕ್ಲಿನಿಕ್‌ನಿಂದ  ಹೊರಬರುವಂತೆ ಒತ್ತಡ ಹೇರಿದ್ದ ದುಷ್ಕರ್ಮಿಗಳು ವೈದ್ಯರನ್ನು ಅಪಹರಿಸಿ, ಕೊಲೆ ಮಾಡಿ ರೈಲ್ವೇ ಹಳಿಯ ಮೇಲೆ ಎಸೆದಿದ್ದಾರೆ ಎಂಬ ಅನುಮಾನಗಳೇ ಈಗ ಬಲವಾಗುತ್ತಿವೆ. ಅಲ್ಲದೆ ಸಾಂದರ್ಭಿಕ ಸಾಕ್ಷ್ಯಾಧಾರಗಳು ಕೂಡ ಇದನ್ನೇ ಹೇಳುತ್ತಿವೆ.


ವೈದ್ಯರು ನಾಪತ್ತೆಯಾಗಿ ಸ್ವಲ್ಪ ಹೊತ್ತಿನ ಬಳಿಕ ಅವರ ಬೈಕ್‌ ಕುಂಬಳೆಯಲ್ಲಿ ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿ ರೀತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಬೈಕ್‌ ಹ್ಯಾಂಡಲ್‌ ಲಾಕ್‌ ಆಗಿತ್ತು. ಆದರೆ ವೈದ್ಯರು ತಮ್ಮ ಕ್ಲಿನಿಕ್‌ನಿಂದ ಹೊರಬಂದ ಬಳಿಕ ಬೈಕ್‌ನಲ್ಲಿ ಪೆರ್ಲದ ಕಡೆಗೆ ಹೋಗಿದ್ದಾರೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಈಗ ಹೇಳುತ್ತಿದ್ದಾರೆ. ಪೆರ್ಲದ ಕಡೆಗೆ ಹೋಗಿದ್ದೇ ನಿಜವಾದರೆ ಬೈಕ್ ಕುಂಬಳೆಯಲ್ಲಿ ಸಿಕ್ಕಿದ್ದು ಹೇಗೆ?


ಅಲ್ಲದೆ ಅಲ್ಲಿಂದ ಮುಂದಕ್ಕೆ ವೈದ್ಯರು ಕುಂದಾಪುರ ಸಮೀಪದ ಹಳ್ಳಿಗಾಡಿನ ದುರ್ಗಮ ಪ್ರದೇಶಕ್ಕೆ ಅಷ್ಟು ಬೇಗನೆ ತಲುಪಿದ್ದು ಹೇಗೆ?  ಮನೆಯಿಂದ ಹೊರಡುವಾಗ ಅವರು ಧರಿಸಿದ್ದ ಅಂಗಿ, ಶವವಾಗಿ ದೊರೆತಾಗ ಬದಲಾಗಿದ್ದು ಹೇಗೆ? ವೈದ್ಯರ ಬೈಕ್‌ ಕೀ ಪತ್ತೆಯಾಗಿಲ್ಲ. ಮೊಬೈಲ್ ಸಹ ಅವರ ಬಳಿ ಇರಲಿಲ್ಲ. ಮೈಮೇಲೆ ಆದ ಗಾಯಗಳು ಮತ್ತು ಶವ ದೊರೆತ ಸನ್ನಿವೇಶಗಳನ್ನು ಗಮನಿಸಿದರೆ ಇದು ವ್ಯವಸ್ಥಿತವಾಗಿ ಕೊಲೆ ಮಾಡಿದ ಬಳಿಕ ಆತ್ಮಹತ್ಯೆಯಂತೆ ಬಿಂಬಿಸುವ ಪ್ರಯತ್ನ ಎಂಬ ಸಂದೇಹಗಳು ಬಲವಾಗುತ್ತಿವೆ.


ವೈದ್ಯರು ನಾಪತ್ತೆಯಾದ ಕೂಡಲೆ ಕುಟುಂಬದವರು ದೂರು ನೀಡಲು ಬಂದಾಗ ಬದಿಯಡ್ಕ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಏಕೆ?


ಈಗಾಗಲೇ ಘಟನೆಯ ಸಮಗ್ರ ತನಿಖೆ ನಡೆಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಬದಿಯಡ್ಕದಲ್ಲಿ ಪ್ರತಿಭಟನೆ ನಡೆಸಿವೆ. ವೈದ್ಯಕೀಯ ಸಂಘಟನೆಗಳು, ಹಿಂದೂ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದಾರೆ.


ವೈದ್ಯರ ನಾಪತ್ತೆ ಮತ್ತು ನಿಗೂಢ ಸಾವಿನ ಹಿನ್ನೆಲೆ ಕುರಿತಂತೆ ಮುಸ್ಲಿಂ ಲೀಗ್‌ನ ಐವರು ಮುಖಂಡರನ್ನು ಪೊಲೀಸರು ಬಂಧಿಸಿ ವಿಚಾರನೆ ನಡೆಸುತ್ತಿದ್ದಾರೆ.


ಡಾ. ಕೃಷ್ಣಮೂರ್ತಿ ಅವರ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಯಾವ ಕಾರಣದಿಂದ ಸಾವು ಸಂಭವಿಸಿದೆ ಎಂಬುದು ಸ್ಪಷ್ಟವಾಗಲಿದೆ.


ಏನೇ ಆದರೂ ಅಮಾಯಕ ವೈದ್ಯರೊಬ್ಬರ ನಿಗೂಢ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಲೇಬೇಕಿದೆ. ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡದ ಬಗ್ಗೆಯೂ ಅನುಮಾನವಿದ್ದು ಪೊಲೀಸರು ಯಾವ ಸಂದೇಹವೂ ಉಳಿಯದಂತೆ ತನಿಖೆ ನಡೆಸಿ ಸತ್ಯಾಂಶ ಹೊರತರಬೇಕಿದೆ. ಅಗತ್ಯವೆನಿಸಿದರೆ ರಾಷ್ಟ್ರೀಯ ತನಿಖಾ ದಳಕ್ಕೆ ಈ ಪ್ರಕರಣವನ್ನು ಒಪ್ಪಿಸಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top