ಉಜಿರೆ: "ನನಗೆ ಕನ್ನಡ ವಿಭಾಗವನ್ನು ಅಷ್ಟು ಸಶಕ್ತವಾಗಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿದೆ ಎಂದರೆ ಅದರಲ್ಲಿ ವಿಭಾಗದ ಸಹೋದ್ಯೋಗಿಗಳ , ಹಾಗೂ ವಿದ್ಯಾರ್ಥಿಗಳ ಕೊಡುಗೆ ಮಹತ್ತರವಾದದ್ದು" ಎಂದು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಬಿ ಪಿ ಸಂಪತ್ ಕುಮಾರ್ ಹೇಳಿದರು.
ಉಜಿರೆ ಶ್ರೀ ಧ ಮಂ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ್ದ 'ಡಾ. ಬಿಪಿ ಸಂಪತ್ ಕುಮಾರ್ ರವರ ಬೀಳ್ಕೊಡುಗೆ ಸಮಾರಂಭ'ದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ನಮ್ಮ ಕನ್ನಡ ವಿಭಾಗವು ಪುಸ್ತಕಗಳನ್ನು ಪ್ರಕಟಿಸುವಷ್ಟು ಶಕ್ತವಾಗಿರುವ ನಿಧಿಯನ್ನು ಸ್ಥಾಪನೆ ಮಾಡಿದೆ. ಅಷ್ಟೇ ಅಲ್ಲದೆ ಚಂದ್ರಶೇಖರ ಕಂಬಾರ, ಹಂ ಪ ನಾಗರಾಜ ರಂತಹ ಉತ್ತಮ ಸಂಪನ್ಮೂಲ ವ್ಯಕ್ತಿಗಳ ಜೊತೆಗೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಕೀರ್ತಿ ನಮ್ಮ ಕನ್ನಡ ವಿಭಾಗಕ್ಕೆ ಇದೆ ಎಂದು ನುಡಿದರು.
ಕರ್ನಾಟಕದ ಎಲ್ಲಾ ಪ್ರತಿಷ್ಠಾನ ಹಾಗೂ ಅಕಾಡೆಮಿಯೊಂದಿಗೆ ವಿಚಾರ ಸಂಕಿರಣವನ್ನು ಆಯೋಜಿಸಿದ್ದ ತೃಪ್ತಿ, ಸಾರ್ಥಕ ಭಾವ ನನಗಿದೆ. ವಿಭಾಗದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಕಾರ್ಯಕ್ರಮದ ಪ್ರಯೋಜನಗಳನ್ನು ಪಡೆದುಕೊಳ್ಳಲಿ ಹಾಗೂ ಒಳ್ಳೆ ಭವಿಷ್ಯ ರೂಪಿಸಿಕೊಳ್ಳುವಂತಾಗಲಿ ಎಂದು ವಿದ್ಯಾರ್ಥಿಗಳನ್ನು ಕುರಿತು ಶುಭ ಕೋರಿದರು.
ನನ್ನ ವೃತ್ತಿ ಜೀವನದ ಹಲವಾರು ನೆನಪುಗಳನ್ನು ನೆನಪಿಸಿ ಈ ಕಾರ್ಯಕ್ರಮವನ್ನು ತುಂಬಾ ಅದ್ಭುತವಾಗಿ ನಡೆಸಿದ್ದೀರಿ ಈ ಕಾರ್ಯಕ್ರಮ ನನ್ನ ಮನದಲ್ಲಿ ಸದಾ ಹಸಿರಾಗಿರುವಂತೆ ಮಾಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅವರ ಗುರುಗಳಾಗಿರುವ ಎನ್ ಜಿ ಪಟವರ್ಧನ್ ಹಾಗೂ ಎಸ್ ಜೆ ಶೆಟ್ಟಿ ತಮ್ಮ ಹಳೆ ನೆನಪುಗಳನ್ನು,ಅನುಭವಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಬಿಪಿ ಸಂಪತ್ ಕುಮಾರ್ ಹಾಗೂ ಅವರ ಧರ್ಮಪತ್ನಿ ವೀರಶ್ರೀ ಯವರನ್ನು ಸನ್ಮಾನಿಸಲಾಯಿತು. ಸಂಪತ್ ಕುಮಾರ್ ರವರ ಕುರಿತಾದ ಬಿತ್ತಿ ಚಿತ್ರ ಹಾಗೂ ದೃಶ್ಯಕಾವ್ಯವನ್ನು ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನ್‌ಜಿ ಪಟವರ್ಧನ್ , ಎಸ್ ಜೆ ಶೆಟ್ಟಿ , ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬೋಜಮ್ಮ ಕೆ ಎನ್ , ಕನ್ನಡ ಪ್ರಾಧ್ಯಾಪಕ ಡಾ ರಾಜಶೇಖರ್, ರಾಧಾಕೃಷ್ಣ ಕೆದಿಲ್ಲಾಯ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ದಿವಾಕರ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ