ಮುಳಿಯ ಜ್ಯುವೆಲ್ಸ್‌ ಬೆಂಗಳೂರು ವತಿಯಿಂದ 'ಕನ್ನಡ ಚಿತ್ತಾರ' ಚಿತ್ರ ರಚನಾ ಸ್ಪರ್ಧೆ- ನ.27ಕ್ಕೆ

Upayuktha
0

ಬೆಂಗಳೂರು: ಮುಳಿಯ ಪ್ರತಿಷ್ಠಾನದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಕ್ಕಳಲ್ಲಿ ಕನ್ನಡ ಪ್ರಜ್ಞೆಯ ಜಾಗೃತಿ ಮೂಡಿಸಲು 'ಕನ್ನಡ ಚಿತ್ತಾರ' ಎಂಬ ಶೀರ್ಷಿಕೆಯಲ್ಲಿ ಕನ್ನಡ ನಾಡು, ನುಡಿ, ಭಾವ-ಬದುಕು ಬಿಂಬಿಸುವ ಚಿತ್ರರಚನಾ  ಸ್ಪರ್ಧೆಯನ್ನು ನವೆಂಬರ್‌ 27ರಂದು ಬೆಳಗ್ಗೆ 9:30ರಿಂದ 12 ಗಂಟೆಯ ವರೆಗೆ ಆಯೋಜಿಸಲಾಗಿದೆ.


ಬೆಂಗಳೂರಿನ ಡಿಕನ್ಸನ್‌ ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್‌ ಕಟ್ಟಡದಲ್ಲಿರುವ ಮುಳಿಯ ಜ್ಯುವೆಲ್ಸ್‌ ಆವರಣದಲ್ಲಿ ಸ್ಪರ್ಧೆ ನಡೆಯಲಿದೆ.


ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ. ಮಹೇಶ್‌ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ 12:30ಕ್ಕೆ ಸಮಾರೋಪ ಮತ್ತು ಗಣ್ಯರಿಂದ ಬಹುಮಾನ ವಿತರಣೆ ನಡೆಯಲಿದೆ. ಮುಳಿಯ ಜ್ಯುವೆಲ್ಸ್‌ ಬೆಂಗಳೂರು, ಈ ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ.


ಸ್ಪರ್ಧೆಯ ವಿಭಾಗಗಳು ಹೀಗಿವೆ:


1. ಯುಕೆಜಿಯಿಂದ 2ನೇ ತರಗತಿ

2. ಕನ್ನಡ ಕಲರವ- 3ನೇ ತರಗತಿಯಿಂದ 5ನೇ ತರಗತಿ

3. ಕನ್ನಡ ಕಾಮನಬಿಲ್ಲು- 6ನೇ ತರಗತಿಯಿಂದ 7ನೇ ತರಗತಿ


ಮೂರು ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು.  ಪ್ರಥಮ ಬಹುಮಾನ 2,000 ರೂ, ದ್ವಿತೀಯ 1000 ರೂ ಮತ್ತು ತೃತೀಯ 5,00 ರೂ ನಗದು ಬಹುಮಾನ ನೀಡಲಾಗುವುದು.


ನಿಬಂಧನೆಗಳು ಹೀಗಿವೆ:

1. ಸ್ಪರ್ಧೆಗೆ ಮೊದಲು ಮಗುವಿನ ವಿವರ ನೋಂದಣಿ ಕಡ್ಡಾಯ.

2. ಮಕ್ಕಳು ಕಡ್ಡಾಯವಾಗಿ ಪೋಷಕರೊಂದಿಗೆ, ಶಾಲಾ ಗುರುತಿನ ಚೀಟಿ ಸಹಿತ ಹಾಜರಾಗಬೇಕು.

3. ಕನ್ನಡತನ, ನಾಡಿನ ಇತಿಹಾಸಕ್ಕೆ ಸಂಬಂಧಿಸಿದ ವಿಷಯ ಆಧರಿತ ಚಿತ್ರ ರಚಿಸಬೇಕು.

4. ಸ್ವಂತ ಆಲೋಚನೆ, ಸೃಜನಶೀಲತೆಯಿಂದ ಕೂಡಿರಬೇಕು. ಅನುಕರಣೆ ಇರಬಾರದು.

5. ಚಿತ್ರ ರಚನೆಗೆ ಕಾಗದಗಳನ್ನು ಸ್ಥಳದಲ್ಲೇ ಒದಗಿಸಲಾಗುವುದು. ಉಳಿದ ಅಗತ್ಯ ಪರಿಕರಗಳನ್ನು ಮಕ್ಕಳೇ ತರಬೇಕು.

6. ಪ್ರತಿ ಸ್ಪರ್ಧೆಯ ಅವಧಿ 1 ಗಂಟೆ ಆಗಿರುತ್ತದೆ.


ಮಕ್ಕಳು ಪೂರ್ವಭಾವಿಯಾಗಿ ಹೆಸರು ನೋಂದಾಯಿಸಿಕೊಂಡು ಸ್ಪರ್ಧೆಗೆ ಹಾಜರಾಗಬೇಕು. ಮಾಹಿತಿ ಮತ್ತು ನೋಂದಣಿಗೆ ಮೊಬೈಲ್‌ ಸಂಖ್ಯೆ- 9844692916; kannadachitthara@gmail.com ಗೆ ಸಂಪರ್ಕಿಸಬಹುದು ಮುಳಿಯ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top