ಮಂಗಳೂರು: ಮಕ್ಕಳಲ್ಲಿ ಪ್ರಾಚೀನ ಸನಾತನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪುರಾಣ ಕಥಾ ಕಥನ ಸ್ಪರ್ಧೆಯನ್ನು 7 ಮಂದಿ ಉತ್ಸಾಹಿಗಳ ತಂಡ ನಡೆಸುತ್ತಿದೆ. ಕಳೆದ ವರ್ಷ ಈ ತಂಡ ಆಯೋಜಿಸಿದ್ದ ಪುರಾಣ ಕಥನ ಸರಣಿಯಲ್ಲಿ 64 ಮಕ್ಕಳು ಭಾಗವಹಿಸಿ ವಿವಿಧ ಪೌರಾಣಿಕ ಕಥಾ ಭಾಗಗಳನ್ನು ಸುಂದರವಾಗಿ ಪ್ರಸ್ತುತಪಡಿಸಿದ್ದರು.
ಸುಧಾಕರ ಜೈನ ಹೊಸಬೆಟ್ಟು ಗುತ್ತು, ಸನತ್ ಓಂಕಾರ್, ದಿವ್ಯಾ ಶ್ರೀಧರ್ ರಾವ್, ಆದರ್ಶ ಕಟ್ಟಿನಮಕ್ಕಿ, ಸ್ಮಿತಾ ಜೋಶಿ, ರಂಜನ್ ಹೊಳ್ಳ ಸುರತ್ಕಲ್, ಮನೀಶ್ ಶೆಟ್ಟಿ ನೂಜಿ ಅವರು ಈ ತಂಡದ ಸದಸ್ಯರು.
ಈ ವರ್ಷ ಈ ತಂಡ ಪುರಾಣ ಕಥಾ ಕಥನ ಸ್ಪರ್ಧೆಗೆ ಆಯ್ದುಕೊಂಡಿರುವ ವಿಷಯ- ವ್ಯಾಸಮಹರ್ಷಿ ವಿರಚಿತ ಮಹಾಭಾರತದ ಕಥಾ ಭಾಗಗಳು.
ಮುಂದಕ್ಕೆ ಓದಿ:
***
🪔 ಕಥಾನಕ ಸರಣಿ
📚 ಫುರಾಣ ಕಥಾ ಕಥನದ ಪಯಣದ ಮುಂದಿನ ನಿಲ್ದಾಣ-ಭಾರತ ಕಥಾ ಕಥನ.
ವ್ಯಾಸವಿರಚಿತ ಮಹಾಭಾರತದ ಕಥೆಗಳ ಅನಾವರಣ-ಭಾರತ ಕಥಾ ಕಥನ.
ಮಹಾಭಾರತವು ಆಖ್ಯಾನ-ಕಥಾನಕಗಳ ಆಗರ. ಇಲ್ಲಿಂದ ಯಾವುದಾದರೊಂದು ಕಥೆಯನ್ನು ಆರಿಸಿ-ಅಭ್ಯಸಿಸಿ- ಪ್ರದರ್ಶಿಸಿ.
ಮಕ್ಕಳು ಕಥೆ ಹೇಳಿದರೆ ದೊಡ್ಡವರು ಬಹುಮಾನ ಕೊಡುತ್ತಾರೆ
🚩 ಬಹುಮಾನ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ಖಚಿತ. ಉತ್ತಮ ಪ್ರಸ್ತುತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪೋಷಕ ಬಹುಮಾನಗಳು. ಆಯ್ದ ವೀಡಿಯೋಗಳನ್ನು ಯೂಟ್ಯೂಬ್ ನಲ್ಲಿ ಪ್ರಸಾರಮಾಡಲಾಗುವುದು.
🟠 ಹೇಗೆ ಭಾಗವಹಿಸುವುದು?
📝 ನೋಂದಣಿ; ಆನ್ ಲೈನ್ ಮೂಲಕ.
(ಅನಾನುಕೂಲವಿದ್ದವರು ನಮ್ಮನ್ನು ಸಂಪರ್ಕಿಸಿ)
💰 ನೊಂದಣಿ ಶುಲ್ಕ- ಒಬ್ಬರಿಗೆ ₹18.
(ಈ ಮೊತ್ತವನ್ನು ಸ್ಪರ್ಧೆ ಮುಗಿದ ಬಳಿಕ ಸಮಾಧಾನಕರ ಬಹುಮಾನದ ಜೊತೆಗೆ ಸಂಪೂರ್ಣವಾಗಿ ಹಿಂದಿರುಗಿಸಲಾಗುವುದು)
🟣 ನೋಂದಣಿ ಹೇಗೆ.?
ಮೊದಲಿಗೆ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಿಕೊಂಡು, ಶುಲ್ಕ ಪಾವತಿಸಿ. ತಾವು ಆಯ್ಕೆ ಮಾಡಿದ ಕಥೆಯನ್ನು ತಿಳಿಸಿ, ಅದರ ಅನುಕ್ರಮ ಸಂಖ್ಯೆಯನ್ನು ಪಡೆಯಿರಿ.
ಎಲ್ಲಿ..❓
ಆನ್ ಲೈನ್ ವೇದಿಕೆ;
ಕಥೆಯನ್ನು ಓದಿ-ಅಭ್ಯಸಿಸಿ-ಸುಂದರವಾಗಿ ಪ್ರಸ್ತುತ ಪಡಿಸಿದ ವೀಡಿಯೋವನ್ನು ನಮಗೆ ಟೆಲಿಗ್ರಾಮ್ ನಲ್ಲಿ ಕಳುಹಿಸಿ. ಕಥೆಯ ಕೊನೆಗೆ ನೀತಿ ಇದ್ದರೆ ಉತ್ತಮ.👌🏼
🎥 ವೀಡಿಯೋಗೆ ಸಂಬಂಧಿಸಿ..- ಹಿಂಭಾಗದಲ್ಲಿ ಕಡು ಬಣ್ಣದ ಬಟ್ಟೆ ಹಾಕಿ. ಬೆಳಕು ನಿಮ್ಮ ಮುಂದಿನಿಂದ ಇದ್ದು, ಮುಖದ ಮೇಲೆ ಇದ್ದರೆ ಚೆಂದ. ನೀವು ಸ್ಕ್ರೀನ್ ನ ಬಲ ಅಥವ ಎಡ ಭಾಗದಲ್ಲಿ ಕಾಣುವಂತೆ ಇದ್ದರೆ ಉತ್ತಮ. ಸಾಂಪ್ರದಾಯಿಕ ಉಡುಪು ಧರಿಸಿರಬೇಕು.
🏮 ಯಾರು ಭಾಗವಹಿಸಬಹುದು? ಮಾತು ಆಡಬಲ್ಲ ಚಿಕ್ಕ ಮಕ್ಕಳಿಂದ ಹದಿನೇಳು ವರ್ಷದ ಮಕ್ಕಳವರೆಗಿನವರಿಗೆ ಅವಕಾಶವಿದೆ. ಜಾತಿ-ಮತ-ಲಿಂಗ-ದೇಶ-ಭಾಷೆಯ ಭೇದವಿಲ್ಲದೆ ಎಲ್ಲರೂ ಭಾಗವಹಿಸಬಹುದು.
🪞 ಯಾವ ಭಾಷೆ.?
ಮಾತೃ ಭಾಷೆ- ಕನ್ನಡ-ತುಳು-ಕೊಂಕಣಿ-ಹಿಂದಿ-ಆಂಗ್ಲ- ನಿಮ್ಮ ಇಷ್ಟದ ಯಾವುದೇ ಭಾಷೆಯಲ್ಲಿ ಪ್ರಸ್ತುತಪಡಿಸಬಹುದು.
⌚ ಸಮಯ;
ಕನಿಷ್ಟ ಎರಡು ನಿಮಿಷದಿಂದ ಗರಿಷ್ಟ ಆರು ನಿಮಿಷಗಳನ್ನು ಬಳಸಿಕೊಳ್ಳಬಹುದು.
‼️ ವಿಧಿ-ನಿಷೇಧ
☯️ ಒಂದು ಕಥೆಯನ್ನು ಒಬ್ಬರು ಮಾತ್ರ ಹೇಳಬಹುದು. ಕಥೆಯನ್ನು ಆರಿಸಿ, ನೋಂದಣಿ ಮಾಡಿದ ಮೇಲೆ ಕಥೆ-ಕಥನಕಾರರನ್ನು ಬದಲಾಯಿಸುವಂತಿಲ್ಲ. ಬೇರೆಯವರು ಈ ಕಥೆಯನ್ನು ಹೇಳುವಂತಿಲ್ಲ.
☯️ ನೋಂದಣಿ ಮಾಡಿ, ಕಥೆಯನ್ನು ಹೇಳದವರಿಗೆ/ ಭಾಗವಹಿಸದವರಿಗೆ ನೋಂದಣಿ ಶುಲ್ಕ ಹಿಂದಿರುಗಿಸುವುದಿಲ್ಲ.
☯️ ಒಂದೇ ಮೊಬೈಲ್ ಸಂಖ್ಯೆಯಿಂದ ಅನೇಕ ಜನರು ನೋಂದಣಿ ಮಾಡಿಕೊಳ್ಳಬಹುದು.
☯️ ಕಥೆಯು ವೇದವ್ಯಾಸ ವಿರಚಿತ ಮಹಾಭಾರತದ ಭಾಗವಾಗಿರಬೇಕು. ನೀವು ಆರಿಸಿದ ಕಥೆ ಮೂಲದಲ್ಲಿದೆಯೇ ಎಂದು ಸಂದೇಹವಿದ್ದರೆ, ಸಂದೇಹ ಪರಿಹರಿಸುವಲ್ಲಿ ನಾವು ಸಹಾಯ ಮಾಡಲು ಪ್ರಯತ್ನಿಸುತ್ತೇವೆ.
☯️ ಮೊದಲು ಬಂದವರಿಗೆ ಮೊದಲ ಆದ್ಯತೆ;
ಮೊದಲು ಬಂದವರ ಆಯ್ಕೆಯ ಕಥೆಯನ್ನು ಅವರ ಹೆಸರಿನಲ್ಲಿ ನೋಂದಣಿ ಮಾಡಲಾಗುವುದು. ಮತ್ತೆ ಬಂದವರು ಈಗಾಗಲೇ ನೋಂದಣಿ ಆಗಿರುವ ಕಥೆಯನ್ನು ಬಳಸಲು ಅವಕಾಶವಿಲ್ಲ.
☯️ ಕಥೆಯು ಮಹಾಭಾರತದ ಯಾವ ಭಾಗದಲ್ಲಿ ಬಂದಿದೆ ಮತ್ತು ಎಲ್ಲಿಂದ ಎಲ್ಲಿಯವರೆಗೆ ಹೇಳಲಿದ್ದೇವೆ ಎಂದು ನೋಂದಣಿಯಾಗುವಾಗಲೇ ತಿಳಿಸಬೇಕು. ಈ ಮಾಹಿತಿಯ ಮೇಲೆಯೇ ಆ ಕಥೆಯನ್ನು ಸಂಬಂಧಿಸಿದವರಿಗೆ ಮೀಸಲಾಗಿಡಲಾಗುವುದು.
☯️ ನೀವು ಕಳುಹಿಸಿದ ವೀಡಿಯೋ-ಆಡಿಯೋ ಗುಣಮಟ್ಟ ತೃಪ್ತಿಕರವಾಗಿರದಿದ್ಸರೆ ಮತ್ತೊಮ್ಮೆ ರೀ-ಶೂಟ್ ಮಾಡುವ ಅವಕಾಶವಿದೆ/ ಇದಕ್ಕೆ ಕಥನಕಾರರು ಬದ್ಧರಾಗಿರಬೇಕು.
☯️ ಕಥೆ ಕೇಳುವವರು ಓಟಿಂಗ್ ಮೂಲಕ ತಮ್ಮ ಅಭಿಪ್ರಾಯ ಸಲ್ಲಿಸವುದಕ್ಕೂ ಅವಕಾಶವಿದೆ. ಓಟಿಂಗ್ ಮಾಡುವವರು ಕಡ್ಡಾಯವಾಗಿ ತಮ್ಮ ಮೊಬೈಲ್ ಸಂಖ್ಯೆಯಿಂದಲೇ-ಹೆಸರು-ಊರು ತಿಳಿಸಿ ಓಟ್ ಮಾಡಬೇಕು. ಒಂದು ಮೊಬೈಲ್ ಸಂಖ್ಯೆಯಿಂದ ಒಬ್ಬರು ಮಾತ್ರ ಓಟ್ ಮಾಡಬಹುದು.
📟 ವೀಡಿಯೋದ ಕೊನೆಗೆ ಮೂಡುವ ಕ್ಯೂ ಆರ್ ಕೋಡನ್ನು ಸ್ಕಾನ್/ಶೇರ್ ಮಾಡುವ ಮೂಲಕ ನೀವು ಓಟಿಂಗ್ ಮಾಡಬಹುದು. ಓಟಿಂಗ್ ಮಾಡುವಂತೆ ಇತರರನ್ನು ಪ್ರಚೋದಿಸಬಹುದು.
🌈 ಕಥೆ ಹೇಳಿದ ಮಕ್ಕಳಿಗೆ ದೊಡ್ಡವರಾದ ನೀವು ಬಹುಮಾನ ಕೊಡಬೇಕು ಅಂತ ನಿಮಗೆ ಅನಿಸಿದರೆ ನೀವೂ ಪ್ರಾಯೋಜಕರಾಗಬಹುದು. ಅಥವ ಯಾವುದೇ ನಿರ್ದಿಷ್ಟ ಮಗುವಿಗೂ ನೀವೇ ಬಹುಮಾನ ಕೊಡಬಹುದು.
ಪ್ರಾಯೋಜಕರ ಹೆಸರು ಹೇಳಿ ಕೊಡುವ ಅಥವ ಹೆಸರು ತಿಳಿಸದೇ ಬಹುಮಾನ ನೀಡುವ ಸೌಲಭ್ಯವೂ ಇದೆ.
ಈ ಮೇಲಿನ ಯಾವುದೇ ವಿಚಾರದಲ್ಲಿ ಸಂದೇಹ/ಪ್ರಶ್ನೆಗಳಿದ್ದರೆ ಸಂಪರ್ಕಿಸಬೇಕಾದ ಸಂಖ್ಯೆಗಳು-
9900500832 - ಸುಧಾಕರ ಜೈನ್ ಹೊಸಬೆಟ್ಟು ಗುತ್ತು
9379684708- ಸನತ್ ಓಂಕಾರ
ನೊಂದಣಿ ಮಾಡಲು ಸಂಪರ್ಕಿಸಬೇಕಾದ ಸಂಖ್ಯೆ
WhatsApp/
📲 6360980096
ಯಶಸ್ವಿಯಾಗಿ ನೊಂದಣಿಯಾದವರನ್ನು ಟೆಲಿಗ್ರಾಮ್ ನ ಗ್ರೂಪ್ ಗೆ ಸೇರಿಸಲಾಗುವುದು. ಹೆಚ್ಚಿನ ಮಾಹಿತಿಯನ್ನು ಗ್ರೂಪ್ ನಲ್ಲಿ ನಿರೀಕ್ಷಿಸಿ.
ಹೆಸರು ನೋಂದಣಿಗೆ ಕೊನೆಯ ದಿನಾಂಕ; 30-11-2022
ಕೊನೆಯದಾಗಿ ಕಿವಿ ಮಾತು; ಸುಹೃತ್ ಸಂವಾದಕ್ಕಷ್ಟೇ ಅವಕಾಶವಿದೆ-ವಾದಕ್ಕಿಲ್ಲ.!!
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ