ಕದ್ರಿ ಯಕ್ಷ ಬಳಗದ ವತಿಯಿಂದ ನಡೆದ ಶ್ರೀ ಪಾವಂಜೆ ಮೇಳದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಖ್ಯಾತ ವೇಷಧಾರಿ, ಅರ್ಥಧಾರಿ, ಕಲಾಗುರು ದಿನೇಶ್ ಶೆಟ್ಟಿ ಕಾವಳಕಟ್ಟೆ ಇವರಿಗೆ ಕದ್ರಿಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಕದ್ರಿ ಕೃಷ್ಣ ಅಡಿಗ, ಸುಧಾಕರ್ ರಾವ್ ಪೇಜಾವರ, ಪಿ. ಸಂಜಯ್ ಕುಮಾರ್ ರಾವ್, ಬೆಟ್ಟಂಪಾಡಿ ಸುಂದರ ಶೆಟ್ಟಿ, ರಾಮಚಂದ್ರ ಭಟ್ ಎಲ್ಲೂರು, ಮುಲ್ಕಿ ಕರುಣಾಕರ ಶೆಟ್ಟಿ, ಪ್ರದೀಪ್ ಆಳ್ವಕದ್ರಿ, ಗೋಕುಲ್ ಕದ್ರಿ, ತಾರನಾಥ ಶೆಟ್ಟಿ ಬೋಳಾರ್, ಸುಭ್ರಮಣ್ಯ ಭಟ್ ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ಯವರು ಅಭಿನಂದಿಸಿದರು. ಸಾಹೀಲ್ ರೈ ಸನ್ಮಾನ ಪತ್ರ ವಾಚಿಸಿದರು, ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಕದ್ರಿ ನವನೀತ ಶೆಟ್ಟಿ ವಿರಚಿತ "ಶ್ರೀ ದೇವಿ ಮಾರಿಯಮ್ಮ "ಯಕ್ಷಗಾನ ಬಯಲಾಟ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ