'ಮಿಸ್ಟರ್ ಕರ್ನಾಟಕ 2022' ಮುಡಿಗೇರಿಸಿಕೊಂಡ ಉಜಿರೆಯ ಗುರುಪ್ರಸಾದ್ ಶೆಟ್ಟಿ

Upayuktha
0

ಪ್ರತಿಯೊಬ್ಬ ವ್ಯಕ್ತಿಯು ಸಹ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸುತ್ತಾನೆ ಸಮಾಜದಲ್ಲಿ ಹೆಸರು ಗಳಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದೆಷ್ಟೋ ಬಾರಿ ಕಠಿಣ ಪರಿಶ್ರಮವಿದ್ದರೂ ಸಹ ಸೋಲು ಹಾಗೂ ಗೆಲುವೆಂಬುವುದನ್ನು ಎದುರಿಸಿಕೊಂಡು, ಹಠ ಹಾಗೂ ಛಲವೆಂಬ ಎರಡು ಶಕ್ತಿಗಳು ನಮ್ಮಲ್ಲಿ ಇದ್ದಾಗ ಮಾತ್ರ ನಾವು ಯಸ್ಸಿನ ಗುರಿ ತಲುಪಲು ಸಾಧ್ಯ ಎಂಬ ಮಾತಿಗೆ ಉತ್ತಮ ನಿದರ್ಶನ ಉಜಿರೆಯ ಗುರುಪ್ರಸಾದ್ ಶೆಟ್ಟಿ.


ಮೂಲತಃ ಗುರುಪ್ರಸಾದ್ ಶೆಟ್ಟಿ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಕನ್ಯಾಡಿ, ನಾಡ ಗ್ರಾಮದ ನಿವಾಸಿಗಳಾದ ಸುಂದರ ಶೆಟ್ಟಿ ಹಾಗೂ ನಳಿನಿ ಶೆಟ್ಟಿ ದಂಪತಿಗಳ ಪುತ್ರ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ನಾಡ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ನಡದಲ್ಲಿ ಪಡೆದು ಬೆಳ್ತಂಗಡಿಯ ಪ್ರಸನ್ನ ಕಾಲೇಜಿನಲ್ಲಿ ಡಿಪ್ಲೋಮ ಪದವಿ ವ್ಯಾಸಂಗವನ್ನು ಪೂರೈಸಿರುವರು.


ಹೌದು,ಇವರು ತಮ್ಮ ಬಾಲ್ಯದಿಂದಲೇ ಮಾಡೆಲ್ ಆಗಬೇಕು ಎಂಬ ಆಸೆ, ಗುರಿಯನ್ನು ಇಟ್ಟುಕೊಂಡು ಹಠ ಹಾಗೂ ಛಲವನ್ನು ಬಿಡದೆ ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ 2018 ರಲ್ಲಿ ನಡೆದ ಮಿಸ್ಟರ್ ಬೆಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಾಡೆಲಿಂಗ್ ಎನ್ನುವುದು ಕೇವಲ ಪದಗಳಲ್ಲಿ ಹೇಳುವಷ್ಟು ಸುಲಭವಲ್ಲ. ಅದೆಷ್ಟೋ ಜನರ ಮಧ್ಯೆ ಸೋಲು ಹಾಗೂ ಗೆಲುವುಗಳನ್ನು ಎದುರಿಸಬೇಕಾಗುತ್ತದೆ.


ಒಮ್ಮೆ ಸೋತೆನೆಂದು ಕುಗ್ಗಿದಾಗ ಮತ್ತೆ ಮೇಲೆದ್ದು ನಿಲ್ಲಲು ಕಷ್ಟ ಹಾಗೂ ಅಸಾಧ್ಯ. ಆದರೆ ಇವರು ಅದು ಯಾವುದನ್ನೂ ಲೆಕ್ಕಿಸದೆ ತನ್ನ ತಂದೆ, ತಾಯಿಯ ಪ್ರೋತ್ಸಾಹದ ಮೇರೆಗೆ ತನಗೆ ತಾನೇ ಭರವಸೆಯನ್ನು ಇಟ್ಟುಕೊಂಡು ತನ್ನ ಕೆಲಸದ ಅವಧಿಯ ರಜಾದಿನಗಳಲ್ಲಿ ಬಿಡುವಿನ ಸಮಯಗಳಲ್ಲಿ ತುಂಬಾ ಶ್ರಮಿಸಿದ್ದಾರೆ.


ಪರಿಶ್ರಮದಿಂದ ತಯಾರಿ ನಡೆಸಿ ಮುಂದೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಆಡಿಸ್ಸನ್ ಅಲ್ಲಿ ಭಾಗವಹಿಸಿ ಆಯ್ಕೆಗೊಂಡು ನಂತರ ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ಕರ್ನಾಟಕ 2022 ಸ್ಫರ್ಧೆಯಲ್ಲಿ ಭಾಗವಹಿಸುವುದರ ಮೂಲಕ 30 ಸ್ಫರ್ಧಿಗಳಲ್ಲಿ ಒಬ್ಬರಾಗಿದ್ದ ಗುರುಪ್ರಸಾದ್ ಶೆಟ್ಟಿ ಮಿಸ್ಟರ್ ಕರ್ನಾಟಕ 2022 ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡರು. ನಂತರ ತಮಿಳು ಚಲನಚಿತ್ರಕ್ಕೆ ಅವಕಾಶ ಒದಗಿ ಬಂದಾಗ ಅದನ್ನು ನಿರಾಕರಿಸಿ ತಾನೂ ಮೊದಲು ಕನ್ನಡ ಚಲನಚಿತ್ರ ರಂಗದಲ್ಲಿ ನಟಿಸುವ ಮೂಲಕ ಗುರುತಿಸಬೇಕೆಂಬ ಆಸೆ, ಆಕಾಂಕ್ಷೆಯನ್ನು ಇಟ್ಟುಕೊಂಡಿರುವರು.


ಇವರ ಈ ಸಾಧನೆಯು ಇನ್ನಷ್ಟು ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಸದಾ ಪ್ರೋತ್ಸಾಹಿಸೋಣ. ಇದಲ್ಲದೇ ಕಬ್ಬಡಿ ಕ್ಷೇತ್ರದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಟಗಾರನಾಗಿ ಗುರುತಿಸಿಕೊಂಡಿರುವರು. ಇದೀಗ ಪ್ರಸ್ತುತ ಮೈಸೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.


- ಶಿಲ್ಪಾ ಜಯಾನಂದ್

  ಪತ್ರಿಕೋದ್ಯಮ ವಿಭಾಗ

  ವಿವೇಕಾನಂದ ಕಾಲೇಜು, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top