ಕರ್ನಾಟಕದ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು, 90ನೇ ಅಧಿವೇಶನ, ಲಕ್ಷದೀಪೋತ್ಸವ ಕಾರ್ಯಕ್ರಮಗಳು 2022ರ ನವೆಂಬರ್ 19 ರಿಂದ 23 ರವರೆಗೆ ಜರುಗಲಿವೆ.
ನ. 19ರ ಶನಿವಾರ ಹೊಸಕಟ್ಟೆ ಉತ್ಸವ ಹಾಗೂ ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ನ.20 ಆದಿತ್ಯವಾರ, ಕೆರೆ ಕಟ್ಟೆ ಉತ್ಸವವು ನಡಯಲಿದೆ.
ನ.21 ಸೋಮವಾರದಂದು ಲಲಿತೋದ್ಯಾನ ಉತ್ಸವ ಮತ್ತು ಲಲಿತಕಲಾ ಗೋಷ್ಠಿ ನಡೆಯಲಿದೆ.
ನ.22 ಮಂಗಳವಾರ ಕಂಚಿಮಾರು ಉತ್ಸವ ಹಾಗೂ ಸರ್ವಧರ್ಮ ಸಮ್ಮೇಳನ ಜರುಗಲಿದೆ.
ನ. 23 ಬುಧವಾರ, ಗೌರಿಮಾರು ಕಟ್ಟೆ ಉತ್ಸವ ಮತ್ತು ಸಾಹಿತ್ಯ ಸಮ್ಮೇಳನ ನಡೆಯಲಿದೆ.
ನ.24 ಗುರುವಾರ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯು ಸಾಕಾರಗೊಳ್ಳಲಿದೆ.
21-11-2022ನೇ ಸೋಮವಾರ 'ಅಮೃತವರ್ಷಿಣಿ' ಸಭಾಭವನದಲ್ಲಿ ಸಂಜೆ 5.30 ರಿಂದ 7.00 ಗಂಟೆಯ ತನಕ ನಾಗಸ್ವರವಾದನ ನಡೆಯಲಿದೆ. ರಾತ್ರಿ ಗಂಟೆ 7.00 ರಿಂದ 8.30 ಗಂಟೆಯ ವರೆಗೆ ಭಾರ್ಗವಿ ಆರ್ಟ್ಸ್ ಡ್ಯಾನ್ಸ್ ಅಕಾಡೆಮಿ (ರಿ.) ಉಡುಪಿ ಇವರಿಂದ 'ಭಾವ -ಯೋಗ - ಗಾನ - ನೃತ್ಯ' ಕಾರ್ಯಕ್ರಮ ಜರುಗಲಿದೆ. ರಾತ್ರಿ ಗಂಟೆ 8:30 ರಿಂದ ಹಾಸನದ ವಿದ್ವಾನ್ ಉನ್ನತ್ ಹೆಚ್. ಆರ್. ಮತ್ತು ತಂಡ ನಾಟ್ಯಕಲಾನಿವಾಸ್ ಇವರಿಂದ 'ಶ್ರೀ ಸ್ವಾತಿ ತಿರುನಾಳರ ಭಾವಯಾಮಿ ರಘುರಾಮಮ್ ರಾಮಾಯಣ ಪ್ರಸ್ತುತಿ' ನಡೆಯಲಿದೆ.
ಲಕ್ಷದೀಪೋತ್ಸವದ ಪ್ರಯುಕ್ತ ನಡೆಯಲಿರುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ನ. 22 ಮತ್ತು ನ.23ರಂದು ನಡೆಯಲಿದೆ.
ನ. 22ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5 ಗಂಟೆಯಿಂದ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಿವಮೊಗ್ಗದ ಬಹುಶ್ರುತ ವಿದ್ವಾಂಸರು ಮತ್ತು ಸುಪ್ರಸಿದ್ಧ ನ್ಯಾಯವಾದಿ ಎಂ.ಆರ್ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಬಸ್ರಿಕಟ್ಟೆ ಧರ್ಮಗುರು ವಂದನೀಯ ಫಾದರ್ ಮಾರ್ಸೆಲ್ ಪಿಂಟೋ, ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ಇ ವಾಲೀಕಾರ ಮತ್ತು ಮೂಡಬಿದ್ರೆಯ ವಿಶ್ರಾಂತ ಮುಖ್ಯೋಪಾಧ್ಯಾಯ, ಶ್ರೇಷ್ಠ ವಾಗ್ಮಿ ಮುನಿರಾಜ ರೆಂಜಾಳ ಉಪನ್ಯಾಸಕರಾಗಿ ಸಹಕಾರ ನೀಡಲಿದ್ದಾರೆ.
ಅಂದು ರಾತ್ರಿ 8:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದುಷಿ ಡಾ. ಜಯಂತಿ ಮತ್ತು ಕುಮರೇಶ್ ಅವರಿಂದ ಸಂಗೀತ ಜುಗಲ್ ಬಂದಿ ನೆರವೇರಲಿದೆ. ವಯಲಿನ್ - ಆರ್ ಕುಮರೇಶ್, ಮೃದಂಗ - ವಿದ್ವಾನ್ ಜಯಚಂದ್ರ ರಾವ್, ಮೋರ್ಚಿಂಗ್ ಮತ್ತು ತಬಲಾದಲ್ಲಿ ವಿದ್ವಾನ್ ಪ್ರಮಥ್ ಕಿರಣ್ ಸಹಕರಿಸಲಿದ್ದಾರೆ.
ನ. 23ರಂದು ಸಂಜೆ 5:00 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನವು ಜರುಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ವಾಂಸರು ಮತ್ತು ಸಂದರ್ಶಕ ಪ್ರಾಧ್ಯಾಪಕ ವಿದ್ವಾನ್ ಡಾ. ಹೆಚ್. ಎ. ನಾಗರಾಜ ರಾವ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ಸಾಹಿತ್ಯ ಪರಿಚಾರಕರು ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆಯ ಸ್ಥಾಪಕ ಸತ್ಯೇಶ್ ಎನ್. ಬೆಳ್ಳೂರ್, ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ, ತುಮಕೂರಿನ ಕನ್ನಡ ಸಹಾಯಕ ವಿದ್ಯಾಪಕರು ಮತ್ತು ಲೇಖಕಿ ಡಾ. ಗೀತಾ ವಸಂತ ಉಪನ್ಯಾಸಕರಾಗಿ ಉಪಸ್ಥಿತರಿರುವರು.
ರಾತ್ರಿ 8:30 ರಿಂದ ಬಹುಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕರು ಮತ್ತು ಅರ್ಥ್ ಡೇ ನೆಟ್‌ವರ್ಕ್‌ನ ರಾಯಭಾರಿ, ಹೆಸರಾಂತ ಕಲಾವಿದ ರಿಕಿ ಕೇಜ್ ಅವರಿಂದ 'ಸಂಗೀತ ನೃತ್ಯ ವೈವಿಧ್ಯ' ಕಾರ್ಯಕ್ರಮ ಪ್ರಸ್ತುತಿಗೊಳ್ಳಲಿದೆ.
ವಸ್ತು ಪ್ರದರ್ಶನ ಮಂಟಪದಲ್ಲಿ :
ದಿನಾಂಕ 19-11-2022ನೇ ಶನಿವಾರ ಬೆಳಿಗ್ಗೆ ಗಂಟೆ 10-30ಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ವಸ್ತುಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿ ಕೊಡಲಿದ್ದಾರೆ.
ಶನಿವಾರ, ಕುಮಾರಿ ಸುಪ್ರೀತಾ, ಧರ್ಮಸ್ಥಳ ಇವರಿಂದ ಸಂಜೆ ಗಂಟೆ 6.30 ರಿಂದ 7.30ರ ತನಕ ಸಂಗೀತ ಕಾರ್ಯಕ್ರಮ ನಡೆಯಲಿದೆ. 7:30 ರಿಂದ 8.30ರ ತನಕ ವಿದುಷಿ ಹರ್ಷಿತಾ ಸುದೇಶ್ ಮತ್ತು ತಂಡ, ಬೆಂಗಳೂರು ಇವರಿಂದ 'ನೃತ್ಯರೂಪಕ' ನಡೆಯಲಿದೆ 8.30 ರಿಂದ 10.00ರ ತನಕ ಅನ್ವಿತ್‌ಕುಮಾರ್, ಶ್ರೀ ದುರ್ಗಾ ಮ್ಯೂಸಿಕಲ್ ನೈಟ್ ರಸಮಂಜರಿ, ಗೋಣಿಕೊಪ್ಪಲು ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು.
20-11-2022, ಭಾನುವಾರ ಸಂಜೆ ಗಂಟೆ 6.30 ರಿಂದ 7.30ರ ವರೆಗೆ ವಿದುಷಿ ಅನುರಾಧಾ ಅಡ್ಕಸ್ಥಳ, ಸಂಗೀತ ಕಲಾ ಸಂಗಮ ಕಾಸರಗೋಡು ಇವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದೆ. 7.30 ರಿಂದ 8.30ರ ತನಕ ಶ್ರೀಮತಿ ಸಿರಿ ಮತ್ತು ಶ್ರೀವತ್ಸ ಶರ್ಮ, ಮೈಸೂರು ಇವರಿಂದ ಸಿರಿ ವಾನಳ್ಳಿ ಅಭಿನಯದ ಏಕವ್ಯಕ್ತಿ ನಾಟಕ "ಆನಂದ ಭಾವಿನಿ" ಪ್ರದರ್ಶನ ಗೊಳ್ಳಲಿದೆ. ರಾತ್ರಿ ಗಂಟೆ 8.30 ರಿಂದ 10.30 ತನಕ ಶ್ರೀ ಸರ್ವಶ್ ಜೈನ್ ಮತ್ತು ತಂಡ, ಶ್ರವಣಬೆಳಗೊಳ ಇವರಿಂದ ಜಿನಗಾನ ಬೀಟ್ಸ್ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ.
21-11-2022 ಸೋಮವಾರ ಸಂಜೆ ಗಂಟೆ 6.00 ರಿಂದ 7:00 - ಚೈತ್ರಾ ಎಚ್. ಜಿ. ಮಂಗಳೂರು ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, 7.00 ದಿಂದ 8:00 - ಕುಮಾರಿ ಐಶ್ವರ್ಯ ಆರ್ ಬೆಂಗಳೂರು ಇವರಿಂದ ಭರತನಾಟ್ಯ, 8:00 ರಿಂದ 9:00 - ಶ್ರೀಮತಿ ಪವನ ಬಿ. ಆಚಾರ್, ನಿರ್ದೇಶನದ "ವಿಪಂಚಿ ಬಳಗ" ಮಣಿಪಾಲ ಇವರಿಂದ ಪಂಚವೀಣಾವಾದನ, 9.00 ರಿಂದ 10.30 - ತನುಜಾ ಜೈನ್ ಮತ್ತು ತಂಡ, ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿರುವುದು.
22-11-2022 ಮಂಗಳವಾರ ಸಂಜೆ ಗಂಟೆ 5.30 ರಿಂದ 6.30 - ಶಾಸ್ತ್ರೀಯ ಸಂಗೀತ/ ಭಕ್ತಿಸಂಗೀತವು ಸರ್ವೇಶ ದೇವಸ್ಥಳಿ, ಉಜಿರೆ ಇವರಿಂದ ನಡೆಯಲಿದೆ. 6.30 ರಿಂದ 7.30 - ಶ್ರೀಮತಿ ಯಶಸ್ವಿನಿ ಉಳ್ಳಾಲ್ ಇವರಿಂದ ಸಂಗೀತ, 7.30 ರಿಂದ 8.30 - ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ವಾಣಿಶ್ರೀ ಬಿ. ಮಂಗಳೂರು ಇವರಿಂದ ಯುಗಳ ನೃತ್ಯ, 8.30 ರಿಂದ 10:00 - ಜಾದೂಗಾರ್ ಪ್ರಶಾಂತ ಎಸ್. ಹೆಗ್ಡೆ, ಶಿವಮೊಗ್ಗ ಇವರಿಂದ ಮ್ಯಾಜಿಕ್ ವಿಸ್ಮಯ ಕಾರ್ಯಕ್ರಮ ನಡೆಯಲಿದೆ.
23-11-2022 ಬುಧವಾರ, 5.30 ರಿಂದ 6.30 - ಶ್ರೀಮತಿ ಮೇಘಾ ಭಟ್ ಮಡಿಕೇರಿ ಇವರ ಸಹಯೋಗದಲ್ಲಿ ಶಾಸ್ತ್ರೀಯ ಸಂಗೀತ, 6.30 ರಿಂದ 7.30 - ಶ್ರೀಮತಿ ಅಪೂರ್ವ ಅನಿರುದ್ಧ ಬೆಂಗಳೂರು ಇವರಿಂದ ವೀಣಾ ವಾದನ, 7.30 ರಿಂದ 8.30 - ವಿ. ರಜನಿ ಎಲ್ ಕರಿಗಾರ ರಾಣೆಬೆನ್ನೂರು ಇವರಿಂದ ಹಿಂದುಸ್ಥಾನಿ ಸಂಗೀತ, 8.30 ರಿಂದ 10:00 - ವಿದುಷಿ ಶಾಲಿನಿ ಆತ್ಮಭೂಷಣ್ ಮತ್ತು ತಂಡ ನೃತ್ಯೋಪಾಸನಾ ಕಲಾಕೇಂದ್ರ (ರಿ.) ಪುತ್ತೂರು ಇವರಿಂದ ಸಮೂಹ ನೃತ್ಯ, 10:00 ರಿಂದ 11:00 - ಶಂಕರ್ ಬಾಬು ಅರ್ಪಿಸುವ ಪ್ರೀತಮ್ ಮೆಲೋಡಿ ಆರ್ಕೆಸ್ಟ್ರಾ ಭದ್ರಾವತಿ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 24-11-2022 ಗುರುವಾರ, ಸಾಯಂಕಾಲ ಗಂಟೆ 6:30ರಿಂದ ಧರ್ಮಸ್ಥಳದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ಜರುಗಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ