ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದ ತುಳುನಾಡಿನ ಬಾಲೆ -ಚುಕ್ಕಿ ವಿಟ್ಲ

Upayuktha
0

ಸಾಧನೆಯೆನ್ನುವಂತದ್ದು ಸುಮ್ಮನೆ ಆಗುವಂಥದ್ದಲ್ಲ. ಸಾಧಿಸಿಯೇ ಸಾಧಿಸುತ್ತೇನೆ ಎಂಬ ಆತ್ಮಸ್ಥೈರ್ಯವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಹೀಗೆ ಹಲವಾರು ಕ್ಷೇತ್ರದಲ್ಲಿ ಮಿಂಚುತ್ತಿರುವ ಇವಳು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದವರು, ದಿವಾಕರ್‌ ಡಿ., ಮತ್ತು ವಿದ್ಯಾದಿವಾಕರ್ ದಂಪತಿಗಳ ಸುಪುತ್ರಿಯಾಗಿದ್ದು ವಿಟ್ಲದ ಸೈಂಟ್ ರೀಟಾ ಇಂಗ್ಲಿಷ್ ಮಾಧ್ಯಮದಲ್ಲಿ 5ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಓದಿನ ಜೊತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾಳೆ.


ಬಾಲ್ಯದಿಂದಲೇ ತೆರೆಯಲ್ಲಿ ಮಿಂಚುತ್ತಿರುವ ಈ ಪುಟ್ಟ ಬೆಡಗಿಯು ತನ್ನ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡುಗೇರಿಸಿಕೊಂಡಿದ್ದಾರೆ.


ಈ ಪುಟ್ಟ ಹುಡುಗಿ ತಾನು ಅಮ್ಮ ಎನ್ನುವ ತೊದಲು ನುಡಿಯಿಂದ ಅಂಬೆಗಾಲ ನಡಿಗೆಯಿಂದ ನಡೆಯುವುದನ್ನು ಕಲಿಯುವುದರ ಜೊತೆ ಜೊತೆಗೆ ಮೂರನೇ ವಯಸ್ಸಿನಲ್ಲಿ "ಬಾಲ ಪಿಲಿ" ಪ್ರಶಸ್ತಿಯನ್ನು ಗಳಿಸಿರುತ್ತಾರೆ, ನಾಲ್ಕನೇ ವಯಸ್ಸಿನಲ್ಲಿ ಕರಾವಳಿಯ ಗಂಡು ಕಲೆಯಾದ ಯಕ್ಷಗಾನದಲ್ಲಿ ಹಲವು ಕಡೆಗಳಲ್ಲಿ ಭಾಗವಹಿಸಿ ಮೆಚ್ಚುಗೆಯನ್ನು ಪಡೆದಿರುತ್ತಾರೆ.

* 2018ರಲ್ಲಿ ಸಕಲ ಕಲಾವಲ್ಲಬೆ ಪ್ರಶಸ್ತಿ ಹಾಗೂ ಚಿಗುರು ಚಿತ್ರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

* ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಚುಕ್ಕಿಯಾಗಿ ಮಿನುಗುತ್ತಿರುವ ಇವರು ವಿಶ್ವ ದಾಖಲೆಯ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

* 2018ರಲ್ಲಿ ಸಿರಿಗನ್ನಡ ಬಾಲ ನಾಟ್ಯ ಶಿರೋಮಣಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

* 2019ರಲ್ಲಿ ರಾಷ್ಟ್ರೀಯ ಕಲಾ ರತ್ನ ರಾಷ್ಟ್ರಪ್ರಶಸ್ತಿ ಪ್ರಧಾನಿಸಿ ಸನ್ಮಾನಿಸಲಾಗಿದೆ.

* 2019ರಲ್ಲಿ ಸಿರಿಗನ್ನಡ ರಾಷ್ಟ್ರೀಯ ನಾಟ್ಯ ಶಾಣ ತಲೆ ಪ್ರಶಸ್ತಿ.

* ಬೆಂಗಳೂರಿನ ನಯನ ಸಭಾಂಗಣದಲ್ಲಿ ಮಹಿಳಾ ಸಾಧಕ ರತ್ನ ಪ್ರಶಸ್ತಿ.

* ಕೇರಳದಲ್ಲಿ ನಡೆದ ಸ್ಟೇಟ್ ಲೆವೆಲ್ ಚೆಸ್ ನಲ್ಲಿ ಸ್ಟೇಟ್ ಚಾಂಪಿಯನ್ ಶಿಪ್ ಗಳಿಸಿರುತ್ತಾರೆ.

* ವರ್ಷ ಪ್ರತಿ ನಡೆಯುವ ಕೃಷ್ಣವೇಷ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿರುತ್ತಾರೆ.


* ಫ್ಯಾಶನ್ ಶೋ ನಲ್ಲಿ ಕ್ಯೂಟೆಸ್ಟ್ ಬೇಬಿ ಪ್ರಶಸ್ತಿ, ಪಿಜೆಂಟ್ ಗ್ರೂಪ್ ವತಿಯಿಂದ ಪ್ರತಿ ವರ್ಷ ಆಯೋಜಿಸಲ್ಪಡುವ ಮಿಸ್ ಫ್ಯೂಚರ್ ಮೋಡೆಲ್ ಆಫ್ ಕರ್ನಾಟಕ ಸ್ಪರ್ಧೆಯ2019 ರ ಆವೃತ್ತಿಯ ವಿಜೇತರಾದ ಇವರು ಬೆಸ್ಟ್ ಪರ್ಫಾಮರ್ ಹಾಗೂ ಬೆಸ್ಟ್ ಆಟಿಟ್ಯೂಡ್ ಎಂಬ ಪ್ರಶಸ್ತಿ ಗಳಿಸಿರುತ್ತಾರೆ.

* ಕರ್ನಾಟಕ ಸೂಪರ್ ಕಿಡ್ ಪ್ರಶಸ್ತಿ, ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಶ್ರೀ ಮುರ ಸಿದ್ದೇಶ್ವರ ಕಲಾ ಘೋಷಿತ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಮಕ್ಕಳ ಕಲಾ ಪ್ರತಿಬೋತ್ಸವ 2019ರಲ್ಲಿ ಭಾಗವಹಿಸಿರುತ್ತಾರೆ.

* ಸಿರಿಗನ್ನಡ ರಾಷ್ಟ್ರೀಯ ಬಾಲ ಕಲಾರತ್ನ ಪ್ರಶಸ್ತಿ, ಬಳ್ಳಾರಿಯಲ್ಲಿ ನಡೆದ 11ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಬಹುಮುಖ ಪ್ರತಿಭೆ ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಯಾದ "ಕರ್ನಾಟಕ ಪ್ರತಿಭಾರತ್ನ" ಎಂಬ ಬಿರುದು ನೀಡಿ ಗೌರವಿಸಿದ್ದಾರೆ.


* zee ಕನ್ನಡ, colors ಕನ್ನಡ ದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್, ಸರಿಗಮಪ, ಕನ್ನಡ ಕೋಗಿಲೆ ನಟನೆ ಮುಂತಾದ ಶೋ ಗಳಲ್ಲಿ ಆಯ್ಕೆಯಾಗಿ ಸಂಗೀತ ಕ್ಷೇತ್ರದಲ್ಲಿ ಪ್ರತಿಭೆಯನ್ನು ಮೆರೆದು "ಸ್ವರ ಚುಕ್ಕಿ" ಎಂಬ ಪ್ರಶಸ್ತಿಯನ್ನು ಪಡೆದಿರುತ್ತಾರೆ.

* ಚೈಲ್ಡ್ ಆರ್ಟಿಸ್ಟ್ ಪ್ರಶಸ್ತಿ ಕೂಡ ಪಡೆದಿರುತ್ತಾರೆ.

* ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ "ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ" 2021ರಲ್ಲಿ ಪಡೆದಿರುತ್ತಾರೆ.

* ನಟನೆಯಲ್ಲಿ "ಸೈ"ನಿಸಿಕೊಂಡಿರುವ ಇವರು ಮಳೆ ನೀರು ಕೊಯ್ಲು ಸಾಕ್ಷ್ಯತ್ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿರುತ್ತಾರೆ, ಅಲ್ಲದೆ ಚೆಸ್ ನಲ್ಲಿ ಹಲವಾರು ಕಡೆ ಜಯಗಳಿಸಿದ್ದಾರೆ.

* ಕ್ರೀಡಾ ಕ್ಷೇತ್ರದಲ್ಲಿ "ಕ್ರೀಡಾ ಚುಕ್ಕಿಯಾಗಿ "ಪ್ರಶಸ್ತಿ ಗಳಿಸಿರುತ್ತಾರೆ.

* ಕವಿ, ಕಾವ್ಯ ದಂಧುಂಬಿಯಲ್ಲಿ ನಾಟ್ಯ ಕಿಶೋರಿ ಪ್ರಶಸ್ತಿ ಲಭಿಸಿದೆ.

* ಜಿಲ್ಲಾ ಮಟ್ಟದ ಶಾರದಾದೇವಿ ಫೋಟೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

* ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಶಾರದಾ ವಿದ್ಯಾಲಯದಲ್ಲಿ ಪಡೆದಿರುತ್ತಾರೆ.

* ಹಲವಾರು ಜಾಹೀರಾತಿನಲ್ಲಿ ಅಭಿನಯಿಸಿದ್ದು ಹಳ್ಳಿ ಮನೆ, ಹೊರನಾಡು ಪ್ರೊಡಕ್ಟ್ ನ ರಾಯಭಾರಿ ಗಮನ ಸೆಳೆದಿರುತ್ತಾರೆ.

*Universal Acchiewer Book Of Record 2020 ರ ಪಟ್ಟಿಗೆ ಸೇರಿರುತ್ತಾರೆ.

*2021 ಮಕ್ಕಳ ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿ ಅಜೆಕಾರು ಇಲ್ಲಿ ಪಡೆದಿರುತ್ತಾರೆ.

* ಚೈತನ್ಯಾ ಶ್ರೀ ರಾಜ್ಯ ಪ್ರಶಸ್ತಿ ಮಂಗಳೂರಿನಲ್ಲಿ ಪಡೆದಿರುತ್ತಾರೆ.

* ಶ್ರೀ ಪುಟ್ಟರಾಜ್  ಗವಾಯಿ ಕಲಾಚೇತನ ರತ್ನ ರಾಜ್ಯ ಪ್ರಶಸ್ತಿ, ಕನ್ನಡ ಸಾಂಸ್ಕೃತಿಕ ರತ್ನ ಪ್ರಶಸ್ತಿ ಗದಗದಲ್ಲಿ ಪಡೆದಿರುತ್ತಾರೆ.

* ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಬೆಂಗಳೂರು ಇವರ ಜನಸ್ಪಂದನ ಕಲಾ ಸಿರಿರತ್ನ ರಾಜ್ಯ ಪ್ರಶಸ್ತಿ, ಪ್ರಿನ್ಸೆಸ್ ಆಫ್ ಕರ್ನಾಟಕ ಪಡೆದಿರುತ್ತಾರೆ.


ಹಲವಾರು ರಾಜ್ಯಗಳಲ್ಲಿ ಡ್ಯಾನ್ಸ್ ಹಾಗೂ ಸಂಗೀತ ಪ್ರದರ್ಶನ ನೀಡುವ ಮೂಲಕ ಪ್ರಥಮ, ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ. ಅಲ್ಲದೆ 300ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನ ಮೆಚ್ಚಿದ ಪ್ರತಿಭೆಯಾಗಿ ಮಿಂಚುತ್ತಿರುವ ಬಾನ ಚುಕ್ಕಿಯಾಗಿದ್ದಾರೆ. ಇತ್ತೀಚಿಗಷ್ಟೇ ಮಜ್ಜಾರಡ್ಕ ಪುತ್ತೂರು, ಕೆಸರುಡೊಂಜಿ ದಿನ 5 ವರ್ಷ ಅದ್ದೂರಿ ಕಾರ್ಯಕ್ರಮದಲ್ಲಿ, ಚುಕ್ಕಿ ವಿಟ್ಲ ವಿಶೇಷ ವೇಷದೊಂದಿಗೆ ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದ ವರ್ಷಿಣಿ ವಿಟ್ಲ ಅವರ ಚಿಕಿತ್ಸೆಯ ನೆರವಿಗಾಗಿ ವೇಷ ಧರಿಸಿ ಧನ ಸಂಗ್ರಹ ಮಾಡಲು ಮುಂದಾಗಿದ್ದಾರೆ. ಈ ಚಿಕ್ಕ ಹುಡುಗಿಯು ಮಾಡುತ್ತಿರುವ ಈ ಕೆಲಸಕ್ಕೆ ದಯವಿಟ್ಟು ಈ ಪುಟ್ಟ ಬಾಲಕಿಯೊಂದಿಗೆ ಕೈಜೋಡಿಸಿ.

ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದು ಹಲವಾರು ಪ್ರಶಸ್ತಿಗಳನ್ನು ತನ್ನ ಮುಡುಗೇರಿಸಿಕೊಂಡಿರುವ ಇವರ ಇನ್ನಷ್ಟು ಕನಸುಗಳೆಲ್ಲವೂ ಆದಷ್ಟು ಬೇಗನೆ ನನಸಾಗಲಿ.


- ದೀಕ್ಷಿತ ಗಿರೀಶ್

ಪತ್ರಿಕೋದ್ಯಮ ವಿದ್ಯಾರ್ಥಿನಿ, ಪುತ್ತೂರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top