ಮಂಗಳೂರು ವಿವಿ ಸಂಧ್ಯಾ ಕಾಲೇಜು: ಸಂಸ್ಥಾಪನಾ ದಿನದಂಗವಾಗಿ ಉಪನ್ಯಾಸ

Upayuktha
0

                                                               

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ   ಸಂಸ್ಥಾಪನಾ ದಿನದಾಚರಣೆಯ ಪ್ರಯುಕ್ತ  ಶನಿವಾರ “ನಡತೆ ಬೆಳೆಸಿಕೊಳ್ಳುವಿಕೆ ಮತ್ತು ಸಾಮಾಜಿಕ ಜವಾಬ್ದಾರಿ” ಕುರಿತು ಉಪನ್ಯಾಸ ಜರಗಿತು. 

ಸಂಪನ್ಮೂಲ ವ್ಯಕ್ತಿ,ಯಾಗಿ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಂಜುನಾಥ ಕಾಮತ್ ಎಂ, ಭಾಗವಹಿಸಿ, ವಿದ್ಯಾರ್ಥಿಗಳು ತಮ್ಮನ್ನು ತಾವು ಅರಿತುಕೊಂಡು, ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು. ಸೃಜನಶೀಲರಾಗಿರುವುದಲ್ಲದೆ, ಬದುಕಿನ ನಾಗಾಲೋಟದಲ್ಲಿ ತಾವು ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು ಎಂದು ಹೇಳಿದರು.  ನೆಲ್ಯಾಡಿಯ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಜಯರಾಜ್ ಮಾತನಾಡಿ, ನಾವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕೈಜೋಡಿಸುವುದರ ಜೊತೆಗೆ ವಿಶ್ವವನ್ನು ಎದುರಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದರು.

ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ತಮ್ಮ ಅಧ್ಯಕ್ಷತೆ ವಹಿಸಿ ,  ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜೆಂಬ ಕನಸು ನನಸಾದ ಬಗೆಯನ್ನು ಮತ್ತು ಬಹುನಿರೀಕ್ಷಿತ ಉದ್ದೇಶಗಳ ಈಡೇರಿಕೆಗೆ ಕೆಲಸ ಮಾಡಿದ ಕೈಗಳನ್ನು ನೆನಪಿಸಿಕೊಂಡರು.

ತೃತೀಯ ಬಿ.ಕಾಂನ ಲಾವಣ್ಯ ಪ್ರಾರ್ಥಿಸಿದರು. ಪತ್ರಿಕೋದ್ಯಮ ಉಪನ್ಯಾಸಕ ಸಚೇಂದ್ರ  ಸ್ವಾಗತಿಸಿ,ಇಂಗ್ಲಿಷ್ ಉಪನ್ಯಾಸಕಿ ಜಾಯ್ಸ್ ವೆರೆಂದ್ರಿತಾ  ವಂದಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.  ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
To Top