ನಿಟ್ಟೆಯಲ್ಲಿ ಕೋಟಿ ಕಂಠ ಗಾಯನ

Upayuktha
0

                                                       

ಮಣಿಪಾಲ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ೬೭ ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 'ಕೋಟಿ ಕಂಠ ಗಾಯನ - ನನ್ನ ನಾಡು ನನ್ನ ಹಾಡು' ಅಭಿಯಾನದ ಅಂಗವಾಗಿ  ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಅಕ್ಟೋಬರ್ 28 ರಂದು ಬೆಳಗ್ಗೆ 11 ಗಂಟೆಯಿಂದ 11:30 ರವರೆಗೆ ಸರ್ಕಾರದ ಆದೇಶಾನುಸಾರ ೬ ಕನ್ನಡ ಹಾಡುಗಳನ್ನು ಹಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಸಂಸ್ಥೆಯ ಸ್ಟೀರಿಯೋ ಕ್ಲಬ್ ನ ನೇತೃತ್ವದಲ್ಲಿ ನಾಡಗೀತೆಯಾದ ಜಯ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಆರು ಹಾಡುಗಳನ್ನ ಅಧ್ಯಾಪಕರು, ಭೋದಕೆತರ ವರ್ಗ ಹಾಗೂ ವಿದ್ಯಾರ್ಥಿಗಳು ಒಡಗೂಡಿ ಸುಮಾರು ೫೦೦೦ ಸಂಖ್ಯೆಯಷ್ಟು ಮಂದಿ ಹಾಡಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top