ಬೆಂಗಳೂರು : ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶಕ್ಕೆ ಕರ್ನಾಟಕ ಸರಕಾರದಿಂದ ಉತ್ತಮ ಅನುದಾನ ಸಿಗುವ ಸಲುವಾಗಿ ಸಮಿತಿಯ ವತಿಯಿಂದ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತ್ರತ್ವದಲ್ಲಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಕರ್ನಾಟಕ ಸರಕಾರದ ಇಂದನ ಇಲಾಖೆ,ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ ಇವರನ್ನು ಬೆಂಗಳೂರು ವಿಧಾನಸೌಧದಲ್ಲಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಿ.ರಘುನಾಥ ಪೈ, ಸಮಿತಿಯ , ಉಪಾಧ್ಯಕ್ಷರಾದ ದಾಮೋದರ ಡೆಲoಪಾಡಿ, , ಕೆ ಸಿ ಮೋಹನ್, ಕೆ. ಸುಧಾಕರ್ ಕಾಮತ್, ಕಾರ್ಯದರ್ಶಿ ಬಿ ವಿಕ್ರಂ ಪೈ, ಸಲಹಾ ಸಮಿತಿ ಸದಸ್ಯರಾದ ವಿ ರವೀಂದ್ರನ ಹಾಗೂ ಅರುಣಾ ಭಟ್ ಉಪಸ್ಥಿತರಿದ್ದರು.