ಹೋಗಿ ಬನ್ನಿ ಅಪ್ಪಯ್ಯ... ಮಗದೊಮ್ಮೆ ಹುಟ್ಟಿ ಬನ್ನಿ

Upayuktha
0

ಬದುಕು ಎನ್ನುವುದು ನಿನ್ನೆ ಇಂದು ನಾಳೆಗಳ ಮೂರು ದಿನಗಳ ಪಯಣ. ಇಲ್ಲಿ ಯಾವುದೂ ಶಾಶ್ವತವಲ್ಲ... ಎಲ್ಲವೂ ನಶ್ವರವೇ. ಕೊನೆಗೆ ಉಳಿಯುವುದು ನಾವು ನಮ್ಮವರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಮತ್ತು ಸಮಾಜಕ್ಕೆ ಮಾಡಿದ ಒಳ್ಳೆಯ ಕೆಲಸಗಳು ಮಾತ್ರ. ಈ ಭೂಮಿಗೆ ನಾವೆಲ್ಲರೂ ಬರಿಗೈಯಲ್ಲೇ ಬಂದು ಬರಿಗೈಯಲ್ಲೇ ಹಿಂತಿರುಗಲೇಬೇಕು.ಒಂದಲ್ಲ  ಒಂದು ದಿನ ಈ ದೇಹ ಮಣ್ಣಲ್ಲಿ ಮಣ್ಣಾಗಿ ಹೋಗಲೇಬೇಕು. ಇದುವೇ ಕಟು ವಾಸ್ತವ. ಬದುಕಿನ ಕೊನೆಯ ಪಯಣದಲ್ಲಿ ಧರಿಸುವ  ಬಿಳಿ ದಿರಿಸಿನಲ್ಲಿ ಸಂಪತ್ತು ತುಂಬಿಸಲು ಜೇಬೂ ಇಲ್ಲ!!! ಜಗತ್ತನ್ನೇ ಗೆದ್ದು ಬೀಗಿದ ಅಂತಹಾ ಅಲೆಗ್ಸಾಂಡರ್ ಕೂಡಾ ತನ್ನ ಕೊನೆಯ ಪಯಣದಲ್ಲಿ ಬರಿಗೈಯಲ್ಲೇ ಹೋದದ್ದು!!!    


ಎಲ್ಲರಂಥವರಲ್ಲ ನಮ್ಮಪ್ಪ

ಅಪ್ಪ ಯಾವತ್ತೂ ನಿಷ್ಠುರವಾದಿ. ಎಲ್ಲ ನಿರ್ಣಯಗಳನ್ನು ಅಮ್ಮ ಅಪ್ಪನ ತಲೆಗೆ ಹಾಕಿ ಕೈ ತೊಳೆದುಕೊಳ್ಳುತ್ತಾಳೆ. ಎಲ್ಲವನ್ನು ಅಳೆದು ತೂಗಿ ಸರಿಯಾದ ಸ್ಪಷ್ಟವಾದ ನಿರ್ಧಾರ ಅಪ್ಪನೇ ತೆಗೆದುಕೊಳ್ಳಬೇಕು. ಅಮ್ಮನಾದರೂ ಭಾವನಾತ್ಮಕವಾಗಿ ಮಕ್ಕಳ ಪ್ರೀತಿಗೆ ಜೋತು ಬಿದ್ದು ಹೋಗಲಿ ಬಿಡಿ ಎಂದು ತಕ್ಷಣವೇ ಒಪ್ಪಿಕೊಂಡು ಮಕ್ಕಳ ಪಾಲಿಗೆ ದೇವತೆಯಾಗಿ ಬಿಡುತ್ತಾಳೆ. ಅಪ್ಪ ಎಲ್ಲ ಪ್ರಶ್ನೆಗಳಿಗೂ  ಇಲ್ಲ ಅಥವಾ ಮುಂದೆ ನೋಡೋಣ ಎಂದಾಗ ಕುಟುಂಬದ ಎಲ್ಲರಿಗೂ ಸಾಮಾನ್ಯ ಶತ್ರು. (ಕಾಮನ್ ಎನಿಮಿ) ಆಗಿ ಬಿಡುತ್ತಾನೆ. ಅಪ್ಪನಾದರೂ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮೊದಲು ಬೇಡ ಎಂದ ಅಪ್ಪ ಕೊನೆಗೆ ಅಮ್ಮನ ಮಧ್ಯಸ್ಥಿಕೆಯಿಂದ ಓಕೆ ಅನ್ನುವಲ್ಲಿಯ ವರೆಗೆ ಅಪ್ಪ ಅಮ್ಮನ ನಡುವೆ ಶೀತಲ ಸಮರ ಮುಂದುವರೆಯುತ್ತಲೇ ಇರುತ್ತದೆ. ಇದು ಸಾಮಾನ್ಯ ಮಧ್ಯಮ ವರ್ಗ ಮತ್ತು ಬಡ ವರ್ಗದ ಜನರ ಮನೆಗಳಲ್ಲಿನ  ನಿತ್ಯದ ಸನ್ನಿವೇಶ. ನಮ್ಮ ಮನೆಯಲ್ಲಿಯೂ ಇದೇ ರಾಮಾಯಣ. ಅಮ್ಮ ಓಕೆ ಎಂದರೂ ಅಪ್ಪ ಬೇಡ ಎಂದು ‘ವಿಲನ್’ ಆಗಿ ಬಿಟ್ಟ ಸನ್ನಿವೇಶಗಳೇ ನೂರಾರು. ಹಲವಾರು ಬಾರಿ  ಸುಖಾಂತ್ಯವಾಗಿ ಅಮ್ಮನೇ ಗೆದ್ದರೂ ಮಕ್ಕಳ ಮನಸ್ಸಿನಲ್ಲಿ ಅಪ್ಪ ಎಲ್ಲದಕ್ಕೂ ಬೇಡ ಅನ್ನುತ್ತಾರೆ ಎಂಬ ಭಾವನೆ  ಶಾಶ್ವತವಾಗಿ  ನೆಲೆಯೂರುತ್ತದೆ. ಅಮ್ಮ ಬಹಳ ಸುಲಭವಾಗಿ ಅಪ್ಪನನ್ನು ಕೇಳಿ ಎಂದು ಹೇಳಿ ಜಾರಿಕೊಂಡಾಗ ಅಪ್ಪ ಅನಿವಾರ್ಯವಾಗಿ ವಿಲನ್ ಅಥವಾ ಖಳನಾಯಕನಾಗಿ ಬಿಡುತ್ತಾನೆ. ನಾನು ಚಿಕ್ಕವನಾಗಿದ್ದಾಗ ನನಗೂ ಹಲವಾರು ಬಾರಿ ಈ ರೀತಿ ಅನಿಸಿದ್ದುಂಟು, ಅಪ್ಪನೇ ಸರ್ವಾಧಿಕಾರಿ ಎಲ್ಲವೂ ಅಪ್ಪನ ಮೂಗಿನ ನೇರಕ್ಕೆ ನಡೆಯಬೇಕು. ಅಪ್ಪ ಹೇಳಿದಂತೆ ಆಗಬೇಕು. ಎಷ್ಟೋ ಬಾರಿ ನಾನು ಮನದಲ್ಲಿಯೇ  ಅಪ್ಪನಿಗೆ ಹಿಡಿಶಾಪ ಹಾಕಿದ್ದುಂಟು. ಆದರೆ ನಿಜವಾಗಿಯೂ ಅಪ್ಪನ ಸ್ಥಾನ ಎನ್ನುವುದು ಒಂದು ಥ್ಯಾಂಕ್‍ಲೆಸ್ ಕೆಲಸ. ಮಕ್ಕಳಿಗೆ ಮಾತ್ರವಲ್ಲ ಇದೇ ಕುಟುಂಬಕ್ಕೆ ಕೂಳು ಕೊಟ್ಟರೂ ಕೊನೆಗೆ ಅಪರಾಧ ಸ್ಥಾನದಲ್ಲಿ ನಿಲುವುದು ಅಪ್ಪನೇ. ನನ್ನ ಅಪ್ಪನೂ ಇದಕ್ಕೆ ಹೊರತಲ್ಲ. ಒಳ್ಳೆದಾದಲ್ಲಿ ಅಮ್ಮನಿಗೆ ಸಿಂಹಪಾಲು. ಮಕ್ಕಳು ಹಾಳಾದರೆ, ಮಗ ಕೆಟ್ಟು ಹೋದದ್ದು ನಿಮ್ಮಿಂದಲೇ ಎಂಬ ಧೋರಣೆಯ ಮಾತು ಅಪ್ಪ ಅನಿವಾರ್ಯವಾಗಿ ಕೇಳಿಸಿಕೊಳ್ಳಲೇ ಬೇಕು. ಇದನ್ನೇ ಖ್ಯಾತ  ಅಂಕಣಕಾರ ಚಾಲ್ರ್ಸ್‍ನ ವ್ಯಾಡ್‍ವರ್ತ್ ಹೀಗೆ ಹೇಳುತ್ತಾರೆ. “By the  time a man realizes that  may be his  father was right, he usually has a son who thinks  he is wrong”  ಎಷ್ಟು ಅರ್ಥಗರ್ಭಿತವಾದ ವಿಚಾರ ಈ ವಾಕ್ಯದಲ್ಲಿ ಇದೆಯಲ್ಲವೇ?


ಮುಂದೆ ಓದಿ...


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top