ಕಾಂಗ್ರೆಸ್‌ ಅಧ್ಯಕ್ಷತೆ: ಗಾಂಧಿ ಕುಟುಂಬಕ್ಕೆ ಖರ್ಗೆಯವರೇ ಏಕೆ ಮೊದಲ ಆಯ್ಕೆ? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ

Upayuktha
0

ಕಾಂಗ್ರೆಸ್‌ ಪಕ್ಷಕ್ಕೆ ಗಾಂಧಿ ಕುಟುಂಬ ಹೊರತಾಗಿ ಬೇರೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ಅದರೆ ಹೀಗೆ ಆಯ್ಕೆಯಾಗುವವರು ಗಾಂಧಿ ಕುಟುಂಬದವ ಆಯ್ಕೆಯೇ ಆಗಿರುತ್ತಾರೆ ಎನ್ನುವುದು ವಾಸ್ತವ. ಹೀಗಿರುವಾಗ ಗಾಂಧಿ ಕುಟುಂಬದವರು ಮಲ್ಲಿಕಾರ್ಜುನ ಖರ್ಗೆಯವರನ್ನೆ ಯಾಕೆ ಆಯ್ಕೆ ಮಾಡಿಕೊಂಡರು ಅನ್ನುವುದು ಪ್ರಶ್ನೆ? ಇಂದು ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷಗಿರಿಗೆ ಚುನಾವಣೆ ನಡೆದಿದೆ ಅಂದರೆ ಕಾಂಗ್ರೆಸ್ ಆಂತರ್ಯವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಗೌರವ ಕೊಡಲು ಮುಂದಾಗಿದೆ ಅನ್ನುವುದರ ಅರ್ಥವಲ್ಲ. ಬದಲಾಗಿ ಕಾಲದ ಅನಿವಾರ್ಯತೆ ಹೊರತು ಆದರ್ಶತನ ಅಲ್ಲ ಅನ್ನುವುದು ಎಲ್ಲಿರಿಗೂ ತಿಳಿದ ಸತ್ಯ.


ಇಂದು ದೆಹಲಿಯಲ್ಲಿ ಮತದಾನ ಮಾಡಿದ ಅನಂತರದಲ್ಲಿ ಪಕ್ಷದ ಅಧ್ಯಕ್ಷೆ ಸೇೂನಿಯಾ ಗಾಂಧಿ ಹೇಳಿದ ಮಾತು ತುಂಬಾ intresting ಆಗಿದೆ. "ನಾನು ಈ ಸಂದಭ೯ವನ್ನು ಬಹು ಕಾಲದಿಂದ ಕಾಯುತ್ತಿದ್ದೆ" ಅಂದರೆ ಈ ಮಾತಿನ ಅರ್ಥವೇನು? ಗಾಂಧಿ ಕುಟುಂಬ ಕಾಂಗ್ರೆಸ್ ಕಟ್ಟಿ ಬೆಳೆಸುವುದರಲ್ಲಿ ಸೇೂತಿದೆ ಅನ್ನುವುದರ ಅರ್ಥವಾ? ಅಥವಾ ಪಕ್ಷವನ್ನು ಬೇರೆಯವರ ಮಡಿಲಿಗೆ ಕೊಟ್ಟು ರಾಜಕೀಯದಿಂದ ವಿರಮಿಸುವುದು ಅನ್ನುವುದರ ಅರ್ಥವಾ? ಈ ಮಧ್ಯದಲ್ಲಿ ಗಾಂಧಿ ಕುಟುಂಬದ ಪರಮಾಪ್ತರಾದ ಚಿದಂಬರಂ ಹೇಳಿಕೆ ವಾಸ್ತವಿಕತೆಗೆ ಹಿಡಿದ ಕನ್ನಡಿಯಂತಿದೆ. "ಯಾರೇ ಅಧ್ಯಕ್ಷರಾಗಲಿ ಗಾಂಧಿ ಕುಟುಂಬದ ಅಣತಿಯಂತೆ ನಡೆಯ ಬೇಕು" ಅನ್ನುವ ಸಂದೇಶವನ್ನು ಹೊರಡಿಸಿ ಬಿಟ್ಟಿದ್ದಾರೆ.


ಗಾಂಧಿ ಕುಟುಂಬದ ಬೇರಿನ ಕಾಂಗ್ರೆಸ್ ನ ಮುಂದಿನ ಅಧ್ಯಕ್ಷ ಆಯ್ಕೆಯ ಆರ್ಹತೆಗಳು ಹೇಗಿರುತ್ತದೆ..ಅಂದರೆ ಖರ್ಗೆಯವರನ್ನೆ ನೇೂಡಿ ಸ್ವಷ್ಟವಾಗಿ ತಿಳಿಯುತ್ತದೆ. ಅಧ್ಯಕ್ಷರಾಗುವರು ಯಾರೇ ಆಗಲಿ 75- 80 ವರುಷ ದಾಟಿರಬೇಕು. ಮಾತ್ರವಲ್ಲ ಲೇೂಕ ಸಭಾ ಚುನಾವಣೆಯಲ್ಲಿ ಸೇೂತಿರಬೇಕು ಇಲ್ಲವಾದರೆ ಅವರೇ ನಮಗೆ ಪ್ರತಿ ಸ್ಪರ್ಧಿಗಳಾಗಬಹುದು. ಈ ದೃಷ್ಟಿಯಿಂದ ನೇೂಡಿದರೆ ತರೂರ್ ಹೆಚ್ಚು ಅಪಾಯಕಾರಿ. ಯಾಕೆಂದರೆ ತರೂರು ರಾಜಕೀಯವಾಗಿ ಇನ್ನೂ 65ರ ಗಡಿಯಲ್ಲಿ ಇದ್ದಾರೆ. ಮಾತ್ರವಲ್ಲ ಕೇರಳದಿಂದ ನಿರಂತರವಾಗಿ ಗೆದ್ದು ಬರುತ್ತಿದ್ದಾರೆ. ಈ ಆರ್ಹತೆ ಹೆಚ್ಚು ಅಪಾಯಕಾರಿ. ಹಾಗಾಗಿ ಖರ್ಗೆಯವರೇ ಹೆಚ್ಚು ಸೂಕ್ತ. ರಾಜೀವ್ ಗಾಂಧಿ ಕಾಲದ ಅನಂತರ ಇದೇ ಪಿ.ವಿ. ನರಸಿಂಹರಾವ್ ರವರನ್ನು ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷ ಹುದ್ದೆಗೆ ಏರಿಸಿ ನರಸಿಂಹ ರಾಯರಿಂದ ಕಲಿತ ಪಾಠ ಇನ್ನೂ ಮಾಸಿಲ್ಲ.  ಹಾಗಾಗಿ ಮುಂದೆ ಮನಮೇೂಹನರನ್ನು ಪ್ರಧಾನಿ  ಮಾಡುವಾಗ ಕೂಡಾ ತುಂಬಾ ಜಾಗೃತಿ ವಹಿಸಿ ಅವರ ಆರ್ಹತೆ ಏನ್ನಿದ್ದರೂ ರಾಜ್ಯ ಸಭೆಗೆ ಸೀಮಿತ ಯಾವ ಸಂದರ್ಭದಲ್ಲಿಯೂ ನಮ್ಮನ್ನೇ ಪ್ರಶ್ನೆ ಮಾಡುವಷ್ಟು ಬೆಳೆಯಲು ಸಾಧ್ಯವಿಲ್ಲ ಅನ್ನುವ ಕಾರಣಕ್ಕಾಗಿಯೇ ಪ್ರಧಾನಿ ಪಟ್ಟ ಸುಲಭವಾಗಿ ಮನಮೋಹನ್‌ರಿಗೆ ಪ್ರಾಪ್ತವಾಯಿತು. ಅಲ್ಲಿಯೂ ಸಮರ್ಥ ನಾಯಕ ಪ್ರಣಬ್‌ ಮುಖರ್ಜಿಯವರನ್ನು ಬದಿಗೆ ಸರಿಸಲಾಯಿತು.


ಅಂತೂ ಕನಾ೯ಟಕದವರೇ ರಾಷ್ಟ್ರೀಯ ಕಾಂಗ್ರೆಸ್ ಉನ್ನತವಾದ ಪೀಠವನ್ನು ಆಲಂಕರಿಸಲಿರುವ ಕನ್ನಡ ನಾಡಿನ    ಎರಡನೇಯ ವ್ಯಕ್ತಿಯಾಗಿ ಮಲ್ಲಿಕಾರ್ಜುನ ಖಗೆ೯ ಅನ್ನುವುದು ನಮ್ಮೆಲ್ಲರಿಗೂ ಶುಭ ಸಮಾಚಾರದ ಸುದ್ದಿ. ಮಲ್ಲಿಕಾರ್ಜುನ ಖರ್ಗೆಯವರು ಈ ಎಲ್ಲಾ ಇತಿ ಮಿತಿಗಳನ್ನು ದಾಟಿ ಕಾಂಗ್ರೆಸ್ ಪಕ್ಷಕ್ಕೆ ಮರು ಹುಟ್ಟು ನೀಡುವಲ್ಲಿ ಯಶಸ್ವಿಯಾಗಲಿ ಅನ್ನುವುದು ನಮ್ಮೆಲ್ಲರ ಹಾರೈಕೆಯೂ ಹೌದು.

ಪ್ರೊ. ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top