ವಡೋದರಾದಲ್ಲಿ ವಿಮಾನ ತಯಾರಿಕಾ ಘಟಕ

Upayuktha Writers
0

ಮೆಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿರುವಂತೆ ಗುಜರಾತ್ ನ ವಡೋದರಾದಲ್ಲಿ ಭಾರತೀಯ ವಾಯುಪಡೆಗೆ ಸೇರಲಿರುವ ಸಿ - 295 ವಿಮಾನದ ಸರಕುಗಳನ್ನು ತಯಾರಿಸುವ ಘಟಕದ ಶಂಕು ಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಭಾರತದಲ್ಲಿ ವಿಮಾನಯಾನ ಕ್ಷೇತ್ರವೂ ದಿನೇ ದಿನೇ ಹೆಚ್ಚುತ್ತಿದ್ದು ಮುಂಬರುವ ವರ್ಷಗಳಲ್ಲಿ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವಿಮಾನಗಳ ಅವಶ್ಯಕತೆ ಹೆಚ್ಚಲಿದೆ. ಅಂದಾಜಿನ ಪ್ರಕಾರ 2000ವಿಮಾನಗಳ ಅವಶ್ಯಕತೆ ಬರಬಹುದು ಎಂದು ತಿಳಿಸಿದರು.

   ಇದು ಮೆಕ್ ಇನ್ ಇಂಡಿಯಾ ಯೋಜನೆಗೆ ಮಾದರಿಯಾಗಿದ್ದು, ಮುಂದಿನ ದಿನಗಳಲ್ಲಿ ಕೇವಲ ವಾಯುಪಡೆಗೆ ಮಾತ್ರವಲ್ಲದೆ ಪ್ರಯಾಣಿಕ ವಿಮಾನವನ್ನು ಈ ಸಂಸ್ಥೆ ತಯಾರಿಸುತ್ತದೆ ಎಂದರು.

      ಈ ಘಟಕ ನಿರ್ಮಣಕ್ಕಾಗಿ ಕಳೆದ ಸೆಪ್ಟಂಬರ್ ನಲ್ಲಿ ಏರ್ ಬಸ್ ಸಂಸ್ಥೆಯೊಂದಿಗೆ 21,
935 ಕೋಟಿ ಮೊತ್ತದ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಇದರಡಿಯಲ್ಲಿ 56 ವಿಮಾನಗಳನ್ನು ತಯಾರಿಸಲಾಗುತ್ತದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top