ಸಾಹಿತ್ಯವೇ ಮನುಷ್ಯನ ಜೀವನಾಡಿ: ಗುಣಾಜೆ ರಾಮಚಂದ್ರ ಭಟ್‌

Upayuktha
0

 ಕಾಸರಗೋಡು ದಸರಾ ಕವಿಗೋಷ್ಠಿ 2022



ಕಾಸರಗೋಡು: ಕಾವ್ಯಸಾಹಿತ್ಯವೇ ಮನುಷ್ಯನ ಚಟುವಟಿಕೆಯ ಜೀವನಾಡಿ. ಕಾವ್ಯದ ಪ್ರಯೋಜನಗಳು ಅಪಾರ. 'ಜೀವನಾನುಭವದಿಂದ ಕೂಡಿದ ಸಾಹಿತ್ಯವೇ ನಿಜವಾದ ಸಾಹಿತ್ಯ. ಅದು ಶಾಶ್ವತವಾಗಿ ಉಳಿಯಬಲ್ಲುದು, ಬೆಳೆಯಬಲ್ಲುದು. ಅಂತಹ ಸಾಹಿತ್ಯದ ಸೃಷ್ಟಿ ಇಂದು ನಮ್ಮ ತಿರುಳ್ಳನ್ನಡದಲ್ಲಿ ದೊಡ್ಡ ಆಗಬೇಕಾಗಿದೆ ಎಂದು ನಿವೃತ್ತ ಕನ್ನಡ ಅಧ್ಯಾಪಕ ಗುಣಾಜೆ ರಾಮಚಂದ್ರ ಭಟ್‌ ಹೇಳಿದರು.


ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ಅಂಗವಾಗಿ ಸಿರಿಗನ್ನಡ ವೇದಿಕೆಯ ಕೇರಳ ಘಟಕದ ಆಶ್ರಯದಲ್ಲಿ ವಿ.ಬಿ. ಕುಳಮರ್ವರ ನಾರಾಯಣಮಂಗಲದ ಸಾಹಿತ್ಯ ಮನೆ ಶ್ರೀನಿಧಿಯಲ್ಲಿ ಕಾಸರಗೋಡು" ದಸರಾ ಕವಿಗೋಷ್ಠಿ-2022 ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಭಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ, ಸಾಹಿತಿ ಮಲಾರ್‌ ಜಯರಾಮ ರೈ ಅವರು, ಜನಮಾನಸದಲ್ಲಿ ಚಿರಸ್ಕಾಯಿಯಾಗಿ ಉಳಿಯುವುದೇ ಉತ್ತಮ ಸಾಹಿತ್ಯ, ಅದು ಕಾವ್ಯದ ಲಕ್ಷಣ. ಕಾವ್ಯದಲ್ಲಿ ವಿವಿಧ ಪ್ರಕಾರಗಳಿವೆ, ಬಾಯಿಯಿಂದ ಬಾಯಿಗೆ ಬಳುವಳಿಯಾಗಿ ಬೆಳೆದುಬಂದ ಜನಪದ ಸಾಹಿತ್ಯವೂ ಕೂಡಾ ಶಿಷ್ಟ ಸಾಹಿತ್ಯಕ್ಕೆ ಕಡಿಮೆಯೇನಲ್ಲ ಸಾಹಿತ್ಯವೇ ಉಸಿರು, ಹೆಸರು ಎಂದರು.


ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ವಿ.ಬಿ.ಕುಳಮರ್ವ ದೀಪ ಪ್ರಜ್ನಲಿಸಿ ಚಾಲನೆ ನೀಡಿದರು. ಸೀತಮ್ಮ ಪುರುಷ ನಾಯಕ ಸ್ಮಾರಕ ಗ್ರಂಥಾಲಯ ಮತ್ತು ಕನ್ನಡ ಭವನದ ಸ್ಥಾಪಕಾಧ್ಯಕ್ಷ ವಾಮನ ರಾವ್‌ ಬೇಕಲ್‌ ಪಾಸ್ಟಾವಿಸಿದರು.

ಸಿರಿಗನ್ನಡ ವೇದಿಕೆಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ಕೇರಳ ಘಟಕದ ಅಧ್ಯಕ್ಷ ವಿ.ಬಿ.ಕುಳಮರ್ವ ಸ್ಥಾಗತಿಸಿದರು. ಸಂವೃತಾ ಭಟ್‌ ಪೇರ್ಯ ಪ್ರಾರ್ಥನೆ ಹಾಡಿದರು. ನಿವೃತ್ತ, ಪ್ರಾಂಶುಪಾಲ ಫ। ಗಣಪತಿ ಭಟ್‌ ಕುಳಮರ್ವ ನಿರ್ವಹಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮಪ್ರಸಾದ್‌ ಕುಳಮರ್ವ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top