ಉಜಿರೆ: 25ನೆ ವರ್ಷದ ಸಂಭ್ರಮದಲ್ಲಿರುವ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ನಡೆಸುತ್ತಿರುವ ಚಟುವಟಿಕೆಗಳ ಅಂಗವಾಗಿ ಯಕ್ಷಮಾರ್ಗ ಮುಕುರ ಗ್ರಂಥ ಲೋಕಾರ್ಪಣೆ ನಡೆಯಲಿದೆ.
200 ಪುಟಗಳ ಈ ಗ್ರಂಥವನ್ನು ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಅ.1ರಂದು ಅಪರಾಹ್ನ 4.30 ಗಂಟೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ, ಕರ್ಣಾಟಕ ಬ್ಯಾಂಕ್ ಸಿಇಒ ಮತ್ತು ಎಂಡಿ ಶ್ರೀ ಮಹಾಬಲೇಶ್ವರ ಎಂ.ಎಸ್. ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ.
ಅಭ್ಯಾಗತರಾಗಿ ಬೆಂಗಳೂರು ಉತ್ತರ ವಿವಿ ಕೋಲಾರದ ಕುಲಪತಿ ಡಾ. ನಿರಂಜನ ವಾನಳ್ಳಿ ಭಾಗವಹಿಸಲಿದ್ದು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಶ್ರೀ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ವಿಧಾನಪರಿಷತ್ ಸದಸ್ಯ ಶ್ರೀ ಪ್ರತಾಪಸಿಂಹ ನಾಯಕ್, ಗೌರವ ಉಪಸ್ಥಿತರಿರುತ್ತಾರೆ. ಗ್ರಂಥದ ಕುರಿತು ಪ್ರಸ್ತಾವನೆಯನ್ನು ಲೇಖಕಿ ವಿದುಷಿ ಶ್ರೀಮತಿ ಡಾ| ಮನೋರಮಾ ಬಿ.ಎನ್. ಅವರು ನಡೆಸಿಕೊಡಲಿದ್ದಾರೆ.
ಪ್ರತಿಷ್ಠಾನ ಈ ಹಿಂದೆ ಐದು ಗ್ರಂಥಗಳನ್ನು ಹೊರತಂದಿದೆ. ದಾಖಲೀಕರಣಗಳನ್ನು ನಡೆಸಿದೆ. ರಜತ ಮಹೋತ್ಸವ ಅಂಗವಾಗಿ ರಾಜ್ಯಾದ್ಯಂತ ತಾಳಮದ್ದಳೆ ನಡೆಸುತ್ತಿದೆ ಎಂದು ಕುರಿಯ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ್ ಭಟ್ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ