ಸಮಾಜ ಸೇವೆಯಲ್ಲಿ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುತ್ತದೆ: ಡಾl ಜಯಗೌರಿ ಹಡಿಗಾಲ್

Upayuktha
0

ಮಣಿಪಾಲ: ಸಮಾಜ ಸೇವೆಯಲ್ಲಿ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುತ್ತದೆ. ಆ ಸಂದರ್ಭದಲ್ಲಿ ಕಾರ್ಯಕ್ರಮಗಳ ದಾಖಲಾತಿಯು ಅತೀ ಮುಖ್ಯ ಎಂದು ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಜಯ ಗೌರಿ ಹಡಿಗಾಲ್ ಅಭಿಪ್ರಾಯಪಟ್ಟರು. ಅವರು ಮಣಿಪಾಲದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ರೋಟರಿ ಮಣಿಪಾಲದ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಮಹಿಳಾ ಛಾಯಾಗ್ರಾಹಕಿಯಾರಾದ ವಿದ್ಯಾ ಪಿ. ಹೆಬ್ಬಾರ್, ಪೂರ್ಣಿಮಾ ಪ್ರಕಾಶ್ ಶೆಟ್ಟಿ, ವಿಮಲಾ ಕಲ್ಮಾಡಿ ಹಾಗೂ ಕ್ರೀಡಾ ಸಾಧಕಿ ಸಾನಿಕ ಬಂಗೇರ ಮತ್ತು ದ್ವಿಚಕ್ರ ವಾಹನದಲ್ಲಿ ದೇಶ ಪರ್ಯಟನೆ ಮಾಡಿದ ಸಾಕ್ಷಿ ಹೆಗಡೆಯವರನ್ನು ಗೌರವಿಸಿ ಅಭಿನಂದಿಸಲಾಯಿತು. ರಾಜವರ್ಮ ಅರಿಗ, ಪ್ರವೀಣ್ ಕೊರೆಯ,  ಉಪಸ್ಥಿತರಿದ್ದರು.


ರೋಟರಿ ಮಣಿಪಾಲದ ಅಧ್ಯಕ್ಷೆ ರೇಣು ಜಯರಾಮ ಸ್ವಾಗತಿಸಿದರು. ಎಸ್ ಕೆ ಪಿಎ ಉಡುಪಿ ವಲಯಧ್ಯಕ್ಷ ಜನಾರ್ದನ್ ಕೊಡವೂರು ಪ್ರಸ್ತಾವನೆಗೆದರು. ಪೂರ್ಣಿಮಾ ಜನಾರ್ದನ್, ಹಾಗೂ ಸಿ.ಪ್ರದೀಪ್ ಭಟ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ನಿಯೋಜಿತ ಅಧ್ಯಕ್ಷ ಶ್ರೀಪತಿ ಮಣಿಪಾಲ್ ನಿರೂಪಿಸಿದರು..

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top