ಪ್ರತಿಯೊಂದು ಊರಲ್ಲಿ ಬೀದಿ ಬೀದಿಗಳಲ್ಲಿ ಪಾನಿಪೂರಿಯ ಗಾಡಿಗಳು ಕಾಣಸಿಗುತ್ತದೆ. ಈ ಪಾನಿಪೂರಿಯ ರುಚಿಯನ್ನು ಸವಿದಿರುವವರೇ ಹೆಚ್ಚು. ಪಾನಿಪೂರಿಗೆ ಗೋಲ್ ಗೊಪ್ಪ ಹೆಸರಿನ ಮೂಲಕ ಕರೆಯಲಾಗುತ್ತದೆ.
ಪಾನಿಪೂರಿ ಹೆಸರನ್ನು ಕೇಳಿದಾಗಲೆಲ್ಲ ಬಾಯಲ್ಲಿ ನೀರೂರುತ್ತೆ. ಎಲ್ಲರ ಅಚ್ಚುಮೆಚ್ಚಿನ ಈ ಪಾನಿಪೂರಿಯನ್ನು ತಿನ್ನಲೂ ಅದೆಷ್ಟೋ ಜನ ಸಂಜೆಯವರೆಗೂ ಕಾತುರದಿಂದ ಕಾಯುತ್ತಿರುತ್ತಾರೆ. ಭಯ್ಯಾ ಏಕ್ ಪ್ಲೇಟ್ ಪಾನಿಪೂರಿ ದೇದೋ ಎಂಬ ಮಾತು ಕೇಳದವರೇ ಇಲ್ಲ. ಅಮ್ಮನ ಕೈ ತುತ್ತು ಎಷ್ಟು ತಿಂದಿದ್ದೇವೋ ನನಗಂತೂ ಗೊತ್ತಿಲ್ಲ. ಆದರೆ ಪಾನಿಪೂರಿ ಮಾರುವ ಬಯ್ಯನ ಕೈ ತುತ್ತು ತಿಂದವರೇ ಹೆಚ್ಚು.
ಕೊರೋನ ಸಮಯದಲ್ಲಿ ಎಲ್ಲೂ ಪಾನಿಪೂರಿಯ ಅಂಗಡಿ ಇಲ್ಲದ ಕಾರಣ ಮನೆಯಲ್ಲೇ ಕುಳಿತು ಯೂಟ್ಯೂಬನ್ನು ನೋಡಿ ಪಾನಿಪೂರಿಯನ್ನು ಮಾಡಿದವರೇ ಹೆಚ್ಚು. ಎಲ್ಲರ ಮೊಬೈಲ್ ಸ್ಟೇಟಸ್ ನಲ್ಲಿ ಪಾನಿಪೂರಿಯ ಚಿತ್ರಣವೇ ಎದ್ದು ಕಾಣುತ್ತಿತ್ತು. ಪಾನಿಪೂರಿಯನ್ನು ಮಾಡಲು ಗೊತ್ತಿಲ್ಲದಿದ್ದರೂ ಪ್ರಯತ್ನವನ್ನು ಬಿಡದೆ ಮಾಡಿ, ಚೆನ್ನಾಗಿ ಇಲ್ಲದಿದ್ದರೂ, ಚೆನ್ನಾಗಿದ್ರು ಚಪ್ಪರಿಸಿ ತಿಂದಿದ್ದಾರೆ. ಪಾನಿಪೂರಿಯಲ್ಲೂ ವೆರೈಟಿ-ವೆರೈಟಿ ಕೂಡ ಇದೆ ಬೇಲ್ ಪೂರಿ, ಮಸಾಲ್ ಪೂರಿ ಎಂದು ಆದ್ರೆ ನಮಗೆಲ್ಲಾ ಅಚ್ಚುಮೆಚ್ಚು ಪಾನಿಪೂರಿ ಮಾತ್ರ.
ಇನ್ನೂ ಕೆಲವರು ಹೇಗೆಂದರೆ ಪಾನಿಪೂರಿಯನ್ನು ತಿನ್ನಲು ಇಷ್ಟವಿದ್ದರೂ ಕೆಲಸದ ಅನಿವಾರ್ಯದಿಂದ ತಿನ್ನದೆ ಬೇಸರ ಕೂಡ ಮಾಡಿಕೊಂಡಿರುವವರು ಕೂಡ ಇದ್ದಾರೆ.
ಶಾಲಾ-ಕಾಲೇಜ್ ನಲ್ಲಿ ಕ್ಲಾಸ್ ಮುಗಿಸಿ ಎಲ್ಲಾ ಸ್ನೇಹಿತರ ಗುಂಪು ಗೋಲ್ ಗೊಪ್ಪ ಇರುವ ಸ್ಥಳದಲ್ಲಿ ಇರುತ್ತದೆ. ಚಪ್ಪರಿಸಿ ತಿಂದು ನನಗೆ ಖಾರ, ನನಗೆ ಸ್ವೀಟ್ ಎಂದು ಹೇಳಿಕೊಂಡು ನಾಲ್ಕೈದು ಪ್ಲೇಟ್ ಪಾನಿಪೂರಿ ತಿಂದವರ ಸಂಖ್ಯೆಯೇ ಅಧಿಕವಾಗಿದೆ.
ಅದರಲ್ಲೂ ಕೂಡ ಬಸ್ಸ್ ನಲ್ಲಿ ಇಳಿದು ನಡೆದುಕೊಂಡು ಬರುವಾಗ ಪಾನಿಪೂರಿಯ ಸುವಾಸನೆ ಮೂಗಿಗೇ ಹೊಡೆಯುತ್ತಿರುತ್ತದೆ. ಅದನ್ನು ನೋಡುವಾಗಲೇ ಆಸೆಯಾಗಿ ಬೇಡ ತಡವಾಗುತ್ತದೆ ಎಂಬ ಯೋಚನೆ ಮನಸ್ಸಿನಲ್ಲಿ ಬಂದರೂ ತಿಂದೇ ಹೊರಡುತ್ತಿದ್ದೆವು.
ಎಲ್ಲರ ಅಚ್ಚುಮೆಚ್ಚಿನ ಪಾನಿಪೂರಿ ನೋಡಲೇ ಸೊಗಸು ತಿಂದರೇ ಅದಕ್ಕಿಂತ ರುಚಿ ಬೇರೂ ಇಲ್ಲದ ಹಾಗೆ ಚಪ್ಪರಿಸಿ ತಿನ್ನುತ್ತೇವೆ.
- ರಮ್ಯ ಎಮ್ ಶ್ರೀನಿವಾಸ್
ವಿವೇಕಾನಂದ ಕಾಲೇಜ್ ಪುತ್ತೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ