ಸ್ವೀಡನ್ ನಲ್ಲಿ ಮೃತಪಟ್ಟ ಭಾರತೀಯ ಯುವಕನ ಮೃತದೇಹ ಹಸ್ತಾಂತರ: ಪೇಜಾವರ ಶ್ರೀಗಳ ಮನವಿಗೆ ಕೇಂದ್ರ ಸರ್ಕಾರದ ತ್ವರಿತ ಸ್ಪಂದನೆ

Upayuktha
0

ಉಡುಪಿ: ಸ್ವೀಡನ್ ನಲ್ಲಿ ಕಳೆದ ಭಾನುವಾರ ಹೃದಯಾಘಾತಕ್ಕೊಳಗಾಗಿ ಅಕಾಲ ಮರಣಹೊಂದಿದ 26 ರ ಹರೆಯದ ತರುಣ ಇಂಜಿನಿಯರ್ ಮನೋಜ್ ರಾಮಧ್ಯಾನಿ ಯವರ ಮೃತದೇಹವನ್ನು ಭಾರತದಲ್ಲಿರುವ ಅವರ ಹೆತ್ತವರಿಗೆ ಶೀಘ್ರ ತಲುಪಿಸುವ ಮತ್ತು ಆತ ಉದ್ಯೋಗ ನಡೆಸುತ್ತಿರುವ ಕಂಪೆನಿಯಿಂದ ಒದಗಬಹುದಾದ ಇನ್ಶುರೆನ್ಸ್ ಹಾಗೂ ಇತೆರೆ ನೆರವುಗಳನ್ನು ವ್ಯವಸ್ಥೆಗೊಳಿಸುವಂತೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆಯವರಲ್ಲಿ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು.


ಈ ಕುರಿತು ಶೀಘ್ರ ಕಾರ್ಯಪ್ರವೃತ್ತರಾಗಿ ವಿದೇಶಾಂಗ ಮಂತ್ರಿ ಶ್ರೀ ಜೈಶಂಕರ್ ಅವರೊಂದಿಗೆ ಜೋಶಿಜೀ ಮತ್ತು ಶೋಭಕ್ಕ ಮಾತುಕತೆ ನಡೆಸಿದ ಫಲವಾಗಿ ಕೇಂದ್ರ ವಿದೇಶಾಂಗ ಸಚಿವಾಲಯವು ಪೂಜ್ಯ ಶ್ರೀಗಳಿಗೆ ಮತ್ತು ಸ್ವೀಡನ್ ರಾಯಭಾರ ಕಚೇರಿಯೊಂದಿಗೆ ಪೂರ್ಣ ಮಾತುಕತೆ ನಡೆಸಿ ಮುಂದಿನ ಎಲ್ಲ ವ್ಯವಸ್ಥೆಗಳನ್ನು ಮಾಡಲು ಅನುಕೂಲ ಕಲ್ಪಿಸಿದ್ದು ಅದರ ಪೂರ್ಣ ಮಾಹಿತಿಯನ್ನು ಪೂಜ್ಯ ಶ್ರೀಗಳಿಗೆ ಮತ್ತು ಮೃತ ಮನೋಜ್  ಹೆತ್ತವರಿಗೆ ಕಳುಹಿಸಿದ್ದಾರೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರದ ವಿದೇಶಾಂಗ ಮಂತ್ರಿ ಜೈಶಂಕರ್ ಹಾಗೂ ಪ್ರಹ್ಲಾದ್ ಜೋಶಿ ಶೋಭಾ ಕರಂದ್ಲಾಜೆ ಮತ್ತು ವಿದೇಶಾಂಗ ಸಚಿವಾಲಯದ ಎಲ್ಲ ಅಧುಕಾರಿಗಳು ಮತ್ತು ಭಾರತ -  ಸ್ವೀಡನ್ ದೇಶದ ರಾಯಭಾರ ಕಚೇರಿಯ ಎಲ್ಲ ಅಧಿಕಾರಿಗಳು ಈ ವಿಚಾರದಲ್ಲಿ ನೀಡಿದ ತ್ವರಿತ ಸ್ಪಂದನೆಗಾಗಿ ಶ್ರೀ ಪೇಜಾವರ ಮಠವು ಕೃತಜ್ಞತೆ ವ್ಯಕ್ತಪಡಿಸಿದೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top