ಖ್ಯಾತ ವಿದ್ವಾಂಸ ಶತಾವಧಾನಿ ಡಾ.ಆರ್. ಗಣೇಶ್ ಅವರಿಗೆ ‘ಪಾಂಚಜನ್ಯ ಪುರಸ್ಕಾರ’ ಪ್ರದಾನ

Upayuktha
0

ಶ್ರೀ ಜಯರಾಮ ಸೇವಾಮಂಡಳಿಯ ಮಹತ್ವಾಕಾಂಕ್ಷಿ ಯೋಜನೆ ತೇರಾಕೋಟಿ ಶ್ರೀ ರಾಮ ನಾಮ ಲೇಖನ ಮಹಾ ಯಜ್ಞ ಉದ್ಘಾಟನೆ




ಬೆಂಗಳೂರು: ಜಯನಗರ 8ನೇ ಬ್ಲಾಕ್‍ನ ಶ್ರೀ ಜಯರಾಮ ಸೇವಾ ಮಂಡಳಿಯ ಪ್ರೊ.ಜಿ. ವೆಂಕಟಸುಬ್ಬಯ್ಯ ಶತಾಬ್ದಿ ಕಲಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಪೂಜ್ಯ ಸ್ವಾಮಿ ಜಪಾನಂದಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ  ಅಧ್ಯಾತ್ಮ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವ ಖ್ಯಾತ ವಾಗ್ಮಿ, ಚಿಂತಕ, ಹಿರಿಯ ವಿದ್ವಾಂಸರಾದ ಶತಾವಧಾನಿ ಡಾ.ಆರ್. ಗಣೇಶ ಅವರಿಗೆ ಪ್ರಸ್ತುತ ವರ್ಷದ ಪಾಂಚಜನ್ಯ ಪುರಸ್ಕಾರವನ್ನು ನೀಡಿ ಪುರಸ್ಕರಿಸಲಾಯಿತು. 


ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ “ನನಗಾಗಿ ಏನು ಪಡೆದೆ ಎನ್ನುವುದಕ್ಕಿಂತ ಇತರರಿಗಾಗಿ ನಾನೇನು ನೀಡಿದೆ” ಎಂಬುದು ಜೀವನದ ಸಾರ್ಥಕತೆ. ಅಂತೆಯೇ ಸಮಾಜಕ್ಕೆ ಏನಾದರೊಂದು ಅಳಿಲು ಸೇವೆ ಸಲ್ಲಿಸಬೇಕೆಂಬ ಮಹದಾಸೆಯ ಸಮಾನ ಮನಸ್ಕರಿಂದ “ಅಕ್ಷರ, ಆರೋಗ್ಯ, ಅಧ್ಯಾತ್ಮವೆಂಬ” ತತ್ವಗಳ ಆಧಾರವ ಮೇಲೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಸ್ಥಾಪಿತವಾಗಿರುವ “ಪಾಂಚಜನ್ಯ ಪ್ರತಿಷ್ಠಾನವು” ತನ್ನದೇ ಆದ ಹಾದಿಯಲ್ಲಿ ನಿಸ್ವಾರ್ಥ ಸೇವೆಯನ್ನು ವಿವಿಧ ಕ್ಷೇತ್ರಗಳಲ್ಲಿ ನೀಡುತ್ತಿದೆ. ಇಂತಹ ಸಂಸ್ಥೆಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಇತರ ಸಮಾಜಸೇವಾ ಧುರೀಣರಿಗೆ ಮಾದರಿಯಾಗಿದೆ.


ವಿದ್ಯಾಭ್ಯಾಸದೊಂದಿಗೆ ಆರೋಗ್ಯದಾಯಕವಾದ ಜೀವನ ಮಾಡಿದಾಗ ಮಾನಸಿಕ ಪರಿಪಕ್ವತೆ ಬಂದು ಸ್ವಸ್ಥ ಸಮಾಜ ರಚನೆ ಆಧ್ಯಾತ್ಮದೆಡೆಗೆ ಕರೆದೊಯ್ಯಬಲ್ಲದು. ವ್ಯಕ್ತಿಯ ಆಂತರಿಕ ಮೌಲ್ಯಗಳ ವಿಕಸನಕ್ಕೆ ಆಧ್ಯಾತ್ಮವೇ ಬುನಾದಿ, ಆದರೆ ಕ್ಷಣಿಕವಾದ ಭೋಗ ಲಾಲಸೆಗಳಿಗೆ ಆರ್ಥಿಕ ಅಭಿವೃದ್ಧಿಯೇ ಸೋಪಾನ, ಇವೆರಡರ ನಡುವಿನ ಅಂತರವನ್ನು ತೋರುವುದೇ ಸತ್ಯದ ಬೆಳಕು ಆ ಕಾರ್ಯವನ್ನು ಪಾಂಚಜನ್ಯ ಪ್ರತಿಷ್ಠಾನವು ರೂಪಿಸಿರುವ ಯೋಜನೆಗಳೇ ಸಾಕ್ಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಇದೇ ಸಂದರ್ಭದಲ್ಲಿ ದಕ್ಷಿಣ ಬೆಂಗಳೂರಿನ ಪ್ರಮುಖ ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಕೇಂದ್ರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖರಾಗಿರುವ ಸುವರ್ಣ ಮಹೋತ್ಸವ ಆಚರಿಸಿಕೊಂಡಿರುವ ಶ್ರೀ ಜಯರಾಮ ಸೇವಾ ಮಂಡಳಿಯ ಮಹತ್ವಾಕಾಂಕ್ಷಿ ಯೋಜನೆ ತೇರಾಕೋಟಿ ಶ್ರೀ ರಾಮ ನಾಮ ಲೇಖನ ಮಹಾ ಯಜ್ಞವನ್ನು ಉದ್ಘಾಟಿಸಲಾಯಿತು.


ಕೆ ಆರ್ ನಗರದ ಎಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತೀ ಮಹಾ ಸ್ವಾಮಿಗಳು ಈ ಲೇಖನ ಯಜ್ಞದ ಮಹಾ ಸಂರಕ್ಷಕರಾಗಿರುತ್ತಾರೆ. ಈ ಮಹಾಯಜ್ಞದ  ಶುಭಾರಂಭದ ಪೂರ್ವಭಾವಿಯಾಗಿ ಶ್ರೀ ಜಯರಾಮ ಸೇವಾ ಮಂಡಳಿಯ ಪ್ರೊ. ಜಿ ವೆಂಕಟಸುಬ್ಬಯ್ಯ ಜನ್ಮಶತಾಬ್ಧಿ ಕಲಾಭವನದಲ್ಲಿ ಇದೇ ಸೆಪ್ಟಂಬರ್ 05 ರಿಂದ 09ರವರಗೆ ಶತಾವಧಾನಿ ಡಾ|| ಆರ್ ಗಣೇಶ್ ಅವರಿಂದ ಕ್ಷೇಮೇಂದ್ರ ವಿರಚಿತ ಶ್ರೀ ರಾಮಾಯಣ ಕಥಾಮಂಜರಿ ಉಪನ್ಯಾಸ ಮಾಲೆಯನ್ನು ಏರ್ಪಡಿಸಲಾಗಿತ್ತು. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಕಾರ್ಯದ ಯಶಸ್ಸಿಗೆ 50000 ಭಕ್ತರ ಸಂಪರ್ಕ ಹಾಗೂ ತೇರಾಕೋಟಿ ಶ್ರೀ ರಾಮ ನಾಮ ಲೇಖನ ಮಹಾ ಯಜ್ಞವನ್ನು ಆಯೋಜಿಸಿದೆ. ಶ್ರೀ ಜಯರಾಮ ಸೇವಾ ಮಂಡಲಿಯ ಅಧ್ಯಕ್ಷ ಆರ್.ಎನ್. ಸ್ವಾಮಿ ಮತ್ತು ಕಾರ್ಯದರ್ಶಿ ಎಸ್.ಕೆ. ಗೋಪಾಲಕೃಷ್ಣ, ಪಾಂಚಜನ್ಯ ಪ್ರತಿಷ್ಠಾನದ ಸಂಸ್ಥಾಪಕ ಗೌ|| ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ,ಪ್ರತಿಷ್ಠಾನದ ಸಂಸ್ಥಾಪಕ ಟ್ರಸ್ಟೀ ಎಸ್.ವಿ. ಸುಬ್ರಹ್ಮಣ್ಯ, ಅನಂತವೇದಗರ್ಭಂ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.                                

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top