ಆಳ್ವಾಸ್‍ನಲ್ಲಿ ಕಂಪೆನಿ ಸೆಕ್ರೆಟರಿ ಕೋರ್ಸಿನ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಮತ್ತು ಓರಿಯೆಂಟೇಶನ್

Chandrashekhara Kulamarva
0

ಮೂಡುಬಿದಿರೆ: ಸಮಯದ ಸದ್ಬಳಕೆ ಹಾಗೂ ಗುರಿಯೆಡೆಗಿನ ನಿರಂತರ ಪ್ರಯತ್ನ ವಿದ್ಯಾರ್ಥಿಗಳನ್ನು ಯಶಸ್ಸಿನ ರಹದಾರಿಗೆ ಕೊಂಡೊಯ್ಯಬಲ್ಲದು ಎಂದು ಸಿ.ಎಸ್. ರಾಕೇಶ್ ನಾಯಕ್ ಹೇಳಿದರು.


ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ವತಿಯಿಂದ ನಡೆದ ಕಂಪೆನಿ ಸೆಕ್ರೆಟರಿ ಕೋರ್ಸಿನ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಯಾವುದೇ ವೃತ್ತಿಪರ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಗೆಲ್ಲುವ ಛಲ ಹೊಂದಿರಬೇಕು. ಅದಕ್ಕಾಗಿ ನಾವು ಸ್ವಯಂ ಪ್ರೇರೇಪಿತರಾಗಿ ಶ್ರಮಿಸಬೇಕು ಎಂದು ಬಿಗ್-ಬ್ಯಾಗ್ ಇಂಟರ್‍ನಾಷನಲ್ ಕಂಪೆನಿಯ ಕಂಪೆನಿ ಸೆಕ್ರೆಟರಿ ಸಿ.ಎಸ್. ರಾಕೇಶ್ ನಾಯಕ್ ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.


ಕಂಪೆನಿ ಸೆಕ್ರೆಟರಿ ಕೋರ್ಸಿನ ಉಪಯುಕ್ತತೆ, ಉದ್ಯೋಗಾವಕಾಶಗಳು, ಪರೀಕ್ಷೆಗಳಿಗೆ ನೋಂದಾಯಿಸುವ ಮತ್ತು ವೃತ್ತಿಪರ ಕೋರ್ಸ್‍ನ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಇನ್ನೋರ್ವ ಮುಖ್ಯ ಅತಿಥಿ ಸಿ.ಎಸ್ ಸಂತೋಷ್ ಪ್ರಭು ತಿಳಿಸಿದರು.


ಐಸಿಎಸ್‍ಐ ಚಾಪ್ಟರ್ ಮಂಗಳೂರು, ಉಸ್ತುವಾರಿ, ಶಂಕರ, ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ.ಜಿ., ಸಿ.ಎಸ್.ಇ.ಇ.ಟಿ. ಕೋರ್ಸ್ ಸಂಯೋಜಕಿ ಲಾವಣ್ಯ ಮತ್ತು ಸಿ.ಎಸ್ ಎಕ್ಸಿಕ್ಯೂಟಿವ್ ಸಂಯೋಜಕಿ ನವ್ಯಾ ಶೆಡ್ತಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಿ.ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಲಭಿತೇಶ್ ಎನ್ ಹಾಗೂ ನಾಗ್‍ನಾಥ್‍ರನ್ನು ಅಭಿನಂದಿಸಲಾಯಿತು. ಸಿ.ಎಸ್. ಫೌಂಡೇಶನ್‍ನ 27 ಮತ್ತು ಸಿ.ಎಸ್.ಇ.ಇ.ಟಿ.ಯ ಕೋರ್ಸ್‍ನ 56 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ವಿದ್ಯಾರ್ಥಿನಿ ಶ್ರೇಯಾ ಶೆಣೈ ಕಾರ್ಯಕ್ರಮ ನಿರೂಪಿಸಿ, ಅನಘ ಸ್ವಾಗತಿಸಿ, ನಿತ್ಯಾ ಮತ್ತು ಹರ್ಷ ಕೋಟ್ಯಾನ್  ಪ್ರಾರ್ಥಿಸಿ, ಮದನ್ ವಂದನಾರ್ಪಣೆ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top