ಮಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ಅವಧಿಯನ್ನು ಎಲ್ಲಾ ವರ್ಷದ, ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಗಿಯುವವರೆಗೆ ವಿಸ್ತರಿಸಬೇಕಾಗಿ, ಸಾರಿಗೆ ಸಚಿವರಾದ ಶ್ರೀಯುತ ಶ್ರೀರಾಮುಲು ಅವರಿಗೆ, ಎಬಿವಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ನೇತೃತ್ವದ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ನಂತರ ಸಾರಿಗೆ ಸಚಿವರು 1 ತಿಂಗಳುಗಳ ಕಾಲ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿ, ನೂತನ ಬಸ್ ಪಾಸ್ ಅನ್ನು ಮಾಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯಾವಕಾಶವನ್ನು ನೀಡುವುದಾಗಿ ಆದೇಶವನ್ನು ನೀಡಿದ್ದಾರೆ.
ಈ ಸಮಯದಲ್ಲಿ ವಿಭಾಗ ಸಂಚಾಲಕರಾದ ಹರ್ಷಿತ್ ಕೊಯ್ಲ, ಜಿಲ್ಲಾ ಸಂಚಾಲಕರಾದ ಶ್ರೇಯಸ್ ಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀಲಕ್ಷ್ಮೀ, ಪ್ರಮುಖರಾದ ಸ್ಕಂದ, ಶ್ರೀಪಾದ್ ತಂತ್ರಿ, ವಿನೀತ್ ಭಟ್, ವೃತ್ವಿಕ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ