ಕರ್ಪೂರ: ಎಲ್ಲಿಂದ ಬರುತ್ತದೆ? ಹೇಗೆ ತಯಾರಿಸಲಾಗುತ್ತದೆ?

Upayuktha
0

ಕರ್ಪೂರ ಎಂದಾಗ 2 ಮುಖ್ಯ ವಿಧದ ಬಗ್ಗೆ ಚರ್ಚಿಸಬೇಕಾಗುತ್ತದೆ. 1. ಸ್ವಾಭಾವಿಕ ಕರ್ಪೂರ (Natural variety) 2. ಅಸ್ವಾಭಾವಿಕ ಕರ್ಪೂರ (Synthetic variety)


1. ಸ್ವಾಭಾವಿಕ ಕರ್ಪೂರವನ್ನು ನೈಸರ್ಗಿಕವಾಗಿ ಮರದ ನಿರ್ಯಾಸದಿಂದ ಪಡೆಯಲಾಗುತ್ತದೆ. ಇದನ್ನು “ಭೀಮಸೇನಿ ಕರ್ಪೂರ” / ”ಅಪಕ್ವ ಕರ್ಪೂರ” ಎಂದೂ ಕರೆಯುತ್ತಾರೆ. ಇದರ ನೈಸರ್ಗಿಕ ಬಣ್ಣ ಹಳದಿ ಮಿಶ್ರಿತವಾಗಿರುತ್ತದೆ. ಭಾರವಾಗಿದ್ದು ನೀರಿನಲ್ಲಿ ಮುಳುಗುತ್ತದೆ. ನೆಲದ ಮೇಲೆ ಇಟ್ಟು ಸುಟ್ಟಾಗ ಕಲೆ ಉಳಿಯುವುದಿಲ್ಲ. ಔಷಧಿಗೆ ಉಪಯೋಗಿಸಲ್ಪಡುತ್ತದೆ.


2. ಅಸ್ವಾಭಾವಿಕ ಕರ್ಪೂರವನ್ನು 'Cinnamonum camphora' ಎಂಬ ಮರದ ನಿರ್ಯಾಸದಿಂದ ಪಡೆಯುತ್ತಾರೆ. ಇದನ್ನು ತಯಾರಿಸುವಾಗ turpentine ನನ್ನು ಹಾಕಲಾಗುತ್ತದೆ. ಇದನ್ನು “ಪಚ್ಚೆ ಕರ್ಪೂರ”/ “ಪಕ್ವ ಕರ್ಪೂರ” ಎಂದು ಕರೆಯುತ್ತಾರೆ. ಇದರ ಬಣ್ಣ ಬಿಳಿಯಾಗಿದ್ದು, ನೀರಿನಲ್ಲಿ ತೇಲುತ್ತದೆ ಹಾಗೂ ನೆಲದ ಮೇಲೆ ಸುಟ್ಟಾಗ ಕಪ್ಪು ವರ್ತುಲ (ring) ಆಕಾರದ ಕಲೆ ಉಳಿಯುತ್ತದೆ. ಇದನ್ನು ದೇವರ ಪೂಜೆಗೆ ಉಪಯೋಗಿಸುತ್ತಾರೆ)" 


ಸ್ವಾಭಾವಿಕ ಕರ್ಪೂರ: ಕರ್ಪೂರ ನಮ್ಮಲ್ಲಿ ಬೆಳೆಯದ ಗಿಡ. ದನಕರುಗಳ ಗಾಯ, ಉದರ ಶೂಲೆ.. ಮೂಂತಾದ ಕಾಯಿಲೆ ಗಳಿಗೆ ಮೆಡಿಸಿನ್ ಆಗಿ ಉಪಯೋಗಿಸುವ ಕರ್ಪೂರ ಮಾನವನ ಅನೇಕ ಕಾಯಿಲೆಗಳಲ್ಲಿ ಉಪಯುಕ್ತ. ಶುದ್ಧ ಕರ್ಪೂರದ ಆಯ್ಕೆ ಸ್ವಲ್ಪ ಕಷ್ಟ. ಶುದ್ಧ ಸುಟ್ಟರೆ ಅತಿಯಾದ ಹೊಗೆ ಬರುವುದಿಲ್ಲ.


1) ಕರ್ಪೂರ ಮತ್ತು ಸಮಪ್ರಮಾಣದಲ್ಲಿ ಇಂಗನ್ನು ಸೇರಿಸಿ ಎರಡೂ ಸೇರಿ ಒಂದು ಅಕ್ಕಿ ಕಾಳಿನಷ್ಟು. ಇದಕ್ಕೆ ಅರ್ಧ ಚಮಚ ಜೇನು ತುಪ್ಪ, ಅರ್ಧ ಚಮಚ ಶುಂಠಿ ಪುಡಿ ಸೇರಿಸಿ ನಾಲ್ಕು ತಾಸಿಗೆ ಒಮ್ಮೆ ಕೊಡುತ್ತಿದ್ದರೆ ಶ್ವಾಸ ಕಾಸ ರೋಗಕ್ಕೆ ಒಳ್ಳೆಯದು.

2) ಕರ್ಪೂರವನ್ನು ತುಳಸಿ ರಸದಲ್ಲಿ ತೈದು ಹಣೆಗೆ ಸವರುವುದರಿಂದ ತಲೆನೋವು ಗುಣವಾಗುತ್ತದೆ. ಹೆಚ್ಚಾದರೆ ಸುಡುತ್ತದೆ.

3) ಕರ್ಪೂರ, ಜಾಯಿಕಾಯಿ, ಅರಿಶಿನ ಸೇರಿಸಿ ನುಣ್ಣಗೆ ಅರೆದು ಸ್ವಲ್ಪ ನೀರು ಸೇರಿಸಿ ಗಂಧಮಾಡಿ ಹೊಕ್ಕುಳ ಸುತ್ತಲೂ ಹಚ್ಚಿದರೆ ಉದರ ಶೂಲೆ ಗುಣವಾಗುತ್ತದೆ.

4) ಒಂದರಿಂದ ಎರಡು ಗ್ರಾಂ ಕರ್ಪೂರವನ್ನು ಬೆಲ್ಲ ಸೇರಿಸಿ ರಾತ್ರಿಯಲ್ಲಿ ತಿಂದರೆ ಉದರದ ಕ್ರಿಮಿ ನಾಶವಾಗುತ್ತದೆ.

5) ಕರ್ಪೂರ, ಸುಣ್ಣ, ಅರಿಶಿಣ ಸೇರಿಸಿ ಕೊಬ್ಬರಿ ಎಣ್ಣೆ ಹಾಕಿ ಕುದಿಸಿ ಹಚ್ಚಿದರೆ ಮೈತುರಿಕೆ ಗುಣವಾಗುತ್ತದೆ.

6) ಕರ್ಪೂರವನ್ನು ಕೊಬ್ಬರಿ ಎಣ್ಣೆ ಹಾಕಿ ಕುದಿಸಿ ಹಚ್ಚಿದರೆ ಪಿತ್ತ ಗಾದೆ ಮತ್ತು ವೃದ್ದರ ಶಯಾ ವ್ರಣ (bedsores) ಗುಣವಾಗುತ್ತದೆ.

7) ಭೀಮಸೇನಿ ಕರ್ಪೂರ (ಇದು ಮಾರುಕಟ್ಟೆಯಲ್ಲಿ ಲಭ್ಯ) ವನ್ನು ಆಲದ ಹಾಲಿನಲ್ಲಿ ತೈದು ಕಣ್ಣಿಗೆ ಅಂಜನ ಹಾಕಿದರೆ ಪ್ರಾರಂಭಿಕ ಹಂತದಲ್ಲಿ ಕಣ್ಣಿನ ಪೊರೆ ಗುಣವಾಗುತ್ತದೆ.

8) ಬಾಳೆ ನೀರಿನಲ್ಲಿ ಕರ್ಪೂರವನ್ನು ಕರಗಿಸಿಕೊಳ್ಳಿ ಕಣ್ಣಿನ ಮೇಲೆ ಹತ್ತಿ ಇಟ್ಟು ಹಾಕಿದರೆ ಉರಿ ಗುಣವಾಗುತ್ತದೆ.

9) ಕಹಿಬೇವಿನ ರಸದಲ್ಲಿ ಕರ್ಪೂರವನ್ನು ತೈದು ರೆಪ್ಪೆಗೆ ಹಚ್ಚಿದರೆ ರೆಪ್ಪೆಯ ಕೂದಲು ಉದುರುವುದು ಗುಣವಾಗುತ್ತದೆ.

10) ಗಾಯ ವ್ರಣಗಳಿಗೆ ಕರ್ಪೂರವನ್ನು ಹಾಕಿದ ನೀರಿನಲ್ಲಿ ತೊಳೆದು ಔಷಧಿ ಉಪಚಾರ ಮಾಡಿದರೆ ಬೇಗನೆ ಗುಣವಾಗುತ್ತದೆ.

11) ಸಣ್ಣ ಹತ್ತಿ ಯ ಮಧ್ಯೆ ಕರ್ಪೂರವನ್ನು ಹುದುಗಿಸಿ ನೋವು ಇರುವ ಹಲ್ಲಿನಲ್ಲಿ ಇಟ್ಟು ಕಚ್ಚಿ ಇಟ್ಟುಕೊಂಡರೆ ನೋವು ನಿವಾರಣೆ ಆಗುತ್ತದೆ.

12) ಕರ್ಪೂರ, ತುಪ್ಪ, ತೆಂಗಿನ ಮರ ಟೊಂಗೆ ಮೇಲಿನ ಬೂದಿ ಸೇರಿಸಿ ಚೆನ್ನಾಗಿ ಕಲಸಿ ಆಗತಾನೆ ಆದ ಗಾಯಕ್ಕೆ ಕಟ್ಟಿದರೆ ಗುಣವಾಗುವವರೆಗೂ ಗಾಯದಿಂದ ಬೇರ್ಪಡುವುದಿಲ್ಲ.

13) ನಾನು ತಯಾರಿಸುವ ಕರ್ಪೂರ ಒಳಗೊಂಡಿರುವ ಮಿಶ್ರಣ ತಲೆತಿರುಗು, ವರ್ಟಿಗೊ ಮತ್ತು ಜ್ವರದ ನಂತರದ ನಿಶ್ಯಕ್ತಿಗಳನ್ನು ಗುಣಪಡಿಸುತ್ತದೆ.

-ಸುಮನಾ ಮಳಲಗದ್ದೆ

9980182883.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top