ಮಂಗಳೂರು: ಮೈಸೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ ಅವರನ್ನು ನೇಮಕ ಮಾಡಿ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು ಅವರು ಆದೇಶ ಹೊರಡಿಸಿದ್ದಾರೆ. ಸಾಮಾಜಿಕ ಕಳಕಳಿಯ ಶಿವಪ್ರಸಾದ್ ಆವರು ಲೇಖಕರಾಗಿ, ನಿರೂಪಕರಾಗಿ ಪ್ರಸಿದ್ಧರು.
2009ರ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರು ಕರಾವಳಿ ಉತ್ಸವ ಹಾಗೂ ಹಂಪೆ ವಿಜಯನಗರಕ್ಕೆ 500ನೇ ವರ್ಷದ ಸಂಭ್ರಮಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ರೂಪಕದಲ್ಲಿ ಭಾಗವಹಿಸಿದರು.
ಕರಾವಳಿಯ ಪ್ರತಿಷ್ಠಿತ ಸುದ್ದಿ ವಾಹಿನಿ ಮಂಗಳೂರಿನ ನಮ್ಮ ಟೀವಿಯಲ್ಲಿ ನಿರೂಪಕರಾಗಿ, 2009ರಲ್ಲಿ ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರಿನ ಶ್ರೀ ಶಾರದಾಂಬಾ ಸೇವಾ ಸಮಾಜ ಸುಧಾರಣಾ ಸಂಘದ ನಿರ್ದೇಶಕರಾಗಿ, ಶ್ರೀ ಶಾರದಾಂಬ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿ, ಗವಣೆಗಾರ್ ಕುಟುಂಬದ ಧಾರ್ಮಿಕ ಅನುಷ್ಠಾನ ಅಭಿವೃದ್ಧಿ ಸಾಧನ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಸಂಘಟಿತ ಕಾರ್ಮಿಕರ ಒಕ್ಕೂಟದ ಕರ್ನಾಟಕ ರಾಜ್ಯದ ಜೊತೆ ಕಾರ್ಯದರ್ಶಿ ಆಗಿದ್ದು, ಕರ್ನಾಟಕ ಜನಪದ ಪರಿಷತ್ ಇದರ ಮಂಗಳೂರು ತಾಲೂಕಿನ ಜೊತೆ ಕಾರ್ಯದರ್ಶಿಯಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.