ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಜೀವಶಾಸ್ತ್ರ ವಿಭಾಗದ 2022-23ನೇ ಶೈಕ್ಷಣಿಕ ವರ್ಷದ “ಜೀನೋಮ್” ಘಟಕ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ. ಬಿ ಎ ಕುಮಾರ ಹೆಗ್ಡೆ ಇವರು ನೆರವೇರಿಸಿದರು.
ಈ ಕಾರ್ಯಕ್ರಮಕ್ಕೆ ಉಪಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಬಿ ಎ ಕುಮಾರ್ ಹೆಗ್ಡೆ ಇವರು “ಜೀನೋಮ್” ಜೀವಶಾಸ್ತ್ರ ವಿದ್ಯಾರ್ಥಿ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಾ, “ಜೀನೋಮ್” ಎನ್ನುವ ಪದ ಸಮಗ್ರ ಜೀವಿಗಳನ್ನು ಪ್ರತಿನಿಧಿಸುವ ವಂಶವಾಹಿ ಘಟಕಗಳ ಒಂದು ಕಣಜ. ಈ ಕುರಿತು ಸುಧೀರ್ಘ 13 ವರ್ಷಗಳ ಕಾಲ ಅಧ್ಯಯನ ನಡೆಸಿ ಮನುಷ್ಯನ ವಂಶವಾಹಿಗಳ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ “ಮಾನವ ಜೀನೋಮ್ ಯೋಜನೆ” ಈ ಶತಮಾನದ ಇಡೀ ವಿಶ್ವದಲ್ಲಿಯೇ ನಡೆಸಿದ ಅತ್ಯಪೂರ್ವ ಸಂಶೋಧನೆ. ಜೀನೋಮ್ ಕುರಿತು ನಡೆಯುವ ಯಾವುದೇ ಸಂಶೋಧನೆಗಳು ಜೀವ ಜಗತ್ತಿನ ಸಮಗ್ರ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಎಂದು ವಿವರಿಸುತ್ತ ಸಂಘಟನೆಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಸಂಯೋಜಕರಾದ ಸುನೀಲ್ ಪಿ ಜೆ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೋಮಲ್ ಪಿ.ಸಿ ಅವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಯ ಬಗ್ಗೆ ಜೀವಶಾಸ್ತ್ರ ಉಪನ್ಯಾಸಕರಾಗಿರುವ ದೀಕ್ಷಿತ್ ರೈ ಅವರು ಕಿರುಪರಿಚಯ ಮಾಡಿದರು. ಮಾನಸ ಅವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ವಂಶಿಕರವರು ಸ್ವಾಗತಿಸಿ, ಜೆರಿನ್ ಜೋಸೆಫ್ ರವರು ವಂದಿಸಿದರು. ಹಿರಿಯ ಉಪನ್ಯಾಸಕಿ ರಾಜೇಶ್ವರಿ ಕೆ. ಆರ್ ಇವರು ಅತಿಥಿಗಳಿಗೆ ಉಡುಗೊರೆ ನೀಡಿ ಗೌರವಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ