ಬೆಂಗಳೂರು: ದರ್ಶನ್ ಕೆ ಟಿ ರವರ ಭರತನಾಟ್ಯ ರಂಗಪ್ರವೇಶ

Upayuktha
0

ಬೆಂಗಳೂರು: ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಆಯೋಜಿಸಿರುವ ಯುವ ಕಲಾವಿದ ದರ್ಶನ್ ಕೆ ಟಿ ರವರ ಭರತನಾಟ್ಯ ರಂಗಪ್ರವೇಶ ಶನಿವಾರ ಆಗಸ್ಟ್ 20 ಸಂಜೆ ಐದು ಮೂವತ್ತಕ್ಕೆ ನಗರದ ವೈಯಾಲಿಕಾವಲ್ ಚೌಡಯ್ಯ ಮೆಮೋರಿಯಲ್ ಹಾಲ್ ಹಿಂಬದಿಯ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಹಿರಿಯ ಪ್ರಾದೇಶಿಕ ನಿರ್ದೇಶಕ ಸುನಿಲ್ ಕುಮಾರ್ ಸಿಂಗ್, ಸುರತ್ಕಲ್ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಚಂದ್ರಶೇಖರ ನಾವಡ, ಸುಬ್ರಹ್ಮಣ್ಯನಗರದ ಮಾಜಿ ಕಾರ್ಪೊರೇಟರ್ ಹೆಚ್.ಮಂಜುನಾಥ್ ಆಗಮಿಸಿದರು.


ಗುರು ವಿದುಷಿ ಡಾ. ಸುಪರ್ಣ ವೆಂಕಟೇಶ್ ರವರ ಶಿಷ್ಯನಾಗಿ ಸಣ್ಣ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಆರಂಭಿಸಿ ಇದೀಗ ರಂಗಪ್ರವೇಶ ಮಾಡಿರುವ ದರ್ಶನ್ ಬಿಸಿಎ ವಿದ್ಯಾರ್ಥಿ ಹಾಗೂ ಶ್ರೀಮತಿ ಲಕ್ಷ್ಮಿ ಮತ್ತು ಕೆ. ತಾರಕ ರಾಮುಡು ರವರ ಪುತ್ರ. ಅವರ ತಂದೆ ದೃಷ್ಠಿಹೀನರಾಗಿದ್ದರು ಕೂಡ ಭರತನಾಟ್ಯ ಕಲಾವಿದರು. ದರ್ಶನ್ ಕೇವಲ ಭರತನಾಟ್ಯ ಅಲ್ಲದೆ ಶಾಸ್ತ್ರೀಯ ಸಂಗೀತ ಮತ್ತು ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭಾವಂತ ಈ ಕಲಾವಿದ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ, ಕಥಕ್ ನಲ್ಲೂ ಆಸಕ್ತಿ ಹೊಂದಿದ್ದಾರೆ. 


ನಟುವಾಂಗದಲ್ಲಿ ಕರ್ನಾಟಕ ಕಲಾಶ್ರೀ ಡಾ. ಸುಪರ್ಣ ವೆಂಕಟೇಶ್, ಗಾಯನದಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪೂರ್, ಮೃದಂಗದಲ್ಲಿ ವಿದ್ವಾನ್ ಹರ್ಷ ಸಾಮಗ, ಕೊಳಲು ವಿದ್ವಾನ್ ಜಯರಾಮ್ ಕಿಕ್ಕೇರಿ, ವಯೋಲಿನ್ ವಿದ್ವಾನ್ ಪ್ರಾದೇಶ ಆಚಾರ್ಯ, ಖಂಜಿರದಲ್ಲಿ ವಿದ್ವಾನ್ ಪ್ರಸನ್ನಕುಮಾರ್ ಸಹಕಾರ ನೀಡಿ ಕಲಾ ರಸಿಕರ ಮನತಣಿಸಲಿದ್ದಾರೆ. 

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top