'ರಿಕಾಲಿಂಗ್ ಅಮರ ಸುಳ್ಯ' ಕೃತಿ ಬಿಡುಗಡೆ

Upayuktha
0

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ "ರಿಕಾಲಿಂಗ್ ಅಮರ ಸುಳ್ಯ" ಕೃತಿಯನ್ನು 24 ಆಗಸ್ಟ್ 2022 ರಂದು ಮಂಗಳೂರಿನ ತುಳು-ಭವನದ ಸಿರಿಚಾವಡಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.


ಪುಸ್ತಕ ಲೋಕಾರ್ಪಣೆಯ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತುಳುವ ಬೊಳ್ಳಿ ಶ್ರೀ ದಯಾನಂದ ಜಿ. ಕತ್ತಲ್ ಸಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿಗಳಾದ ಕಾರ್ಗಿಲ್ ಯುದ್ದದ ಸಮಯದಲ್ಲಿ ಸೇವೆ ಸಲ್ಲಿಸಿದ ಕರ್ನಲ್ ಶರತ್ ಭಂಡಾರಿ ನಿಟ್ಟೆಗುತ್ತು ಮತ್ತು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪಾಲ್ಗೊಂಡಿದ್ದರು.ಯುವ ಲೇಖಕ ಅನಿಂದಿತ್‌ ಗೌಡ ಅವರು ಈ ಕೃತಿಯ ಸಂಪಾದಕರು.


ಖ್ಯಾತ ವಾಗ್ಮಿಗಳಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಪುಸ್ತಕದ ಸಂಕ್ಷಿಪ್ತ ಪರಿಚಯವನ್ನು ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸದಸ್ಯ ಸಂಚಾಲಕರಾದ ಯಕ್ಷರಂಗದ  ಹಾಸ್ಯ ಕಲಾವಿದರಾದ ಕಡಬ ದಿನೇಶ್ ರೈ  ಮತ್ತು ಅಕಾಡೆಮಿಯ ಸದಸ್ಯ ನಾಗೇಶ್ ಕುಲಾಲ್ ಕುಳಾಯಿ ಅವರು ಉಪಸ್ಥಿತರಿದ್ದರು.


'ಅಮರ ಸುಳ್ಯ ಸಮರ' ಸ್ವಾತಂತ್ರ್ಯ ಹೋರಾಟದ ವೀರಗಾಥೆ ಭಾರತದ ಎಲ್ಲ ಭಾಷೆಗಳಲ್ಲೂ ಮೂಡಿ ಬರಬೇಕು. ಈ ಮೂಲಕ ತುಳುನಾಡು ಹಾಗೂ ಕೊಡಗು ನಾಡುಗಳ ವೀರರ ಕೆಚ್ಚೆದೆಯ ಹೋರಾಟದ ವಿವರಗಳು ಭಾರತೀಯರೆಲ್ಲರಿಗೂ ಪರಿಚಯವಾಗಬೇಕು.

ಪ್ರಕಾಶಕರಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಲೇಖಕರಾದ ಶ್ರೀ ಅನಿಂದಿತ್ ಗೌಡರಿಗೆ ಅಭಿನಂದನೆಗಳು.

- ಡಾ.ತಲಕಾಡು ಚಿಕ್ಕರಂಗೇ ಗೌಡ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top