ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಮೂಹ ಸಂವಹನ ವಿಷಯದ ಪಿಹೆಚ್.ಡಿ ಕಾರ್ಯಕ್ರಮಕ್ಕೆ ಸಂಯೋಜನೆ ಪಡೆದಿರುವ ಕಾಲೇಜುಗಳಲ್ಲಿ ಪಿ.ಹೆಚ್.ಡಿ ಕಾರ್ಯಕ್ರಮಕ್ಕೆ ನೋಂದಾಯಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ವಿವರವಾದ ಅಧಿಸೂಚನೆಯೊಂದಿಗೆ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ - 574199, ಇವರಿಂದ ರೂ. 1,100 ನ್ನು (ಎಸ್‌ಸಿ/ ಎಸ್‌ಟಿ/ ಪ್ರವರ್ಗ - I ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ರೂ.550/-) ಚಲನ್/ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ ಇವರ ಹೆಸರಿನಲ್ಲಿ ಪಡೆದ ಡಿ. ಡಿ. ಮುಖಾಂತರ ಪಾವತಿಸಿ ಪಡೆಯ ಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರು/ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರದ ಮುಖ್ಯಸ್ಥರಿಗೆ ದಿನಾಂಕ 30. 08. 2022 ಒಳಗೆ ಸಲ್ಲಿಸತಕ್ಕದ್ದು.
ಖಾಲಿ ಇರುವ ಸೀಟುಗಳು/ ಮೀಸಲಾತಿ ವಿವರ ಮತ್ತು ಪಿಹೆಚ್.ಡಿ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಯಮಾವಳಿ ಹಾಗೂ ಮಾರ್ಗಸೂಚಿಯ ವಿವರಗಳ ಮತ್ತು ಅರ್ಜಿ ನಮೂನೆಗಳಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯದ ವೆಬ್ ಸೈಟ್ www.mangaloreuniversity.ac.in ನ್ನು ಸಂಪರ್ಕಿಸಬಹುದು.