ಪುತ್ತೂರು: ಸಾಧನೆಯ ಹಾದಿಯಲ್ಲಿರುವ ವಿದ್ಯಾರ್ಥಿಗಳು ಸಣ್ಣಪುಟ್ಟ ಸಮಸ್ಯೆ ಹಾಗೂ ಗೊಂದಲಗಳಿಗೆ ಬಲಿಯಾಗಿ ಜೀವನವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಸೋಲು, ಸವಾಲುಗಳು ಎದುರಾದಾಗ ಮಾನಸಿಕವಾಗಿ ಕುಗ್ಗದೆ ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಧೈರ್ಯ ತೋರಲು ಶ್ರೀಕೃಷ್ಣ ಸಂದೇಶ ಸಹಕಾರಿ. ಬದುಕಿನ ಪ್ರತಿ ಹಂತದ ಪ್ರಶ್ನೆಗಳಿಗೂ ಉತ್ತರಿಸುವ ಕೃಷ್ಣಚಿಂತನೆಯು ಆಲ್ಬರ್ಟ್ ಐನ್ ಸ್ಟೈನ್, ಡಾ. ರಾಬರ್ಟ್ ಮೊದಲಾದ ವಿಜ್ಞಾನಿಗಳಿಗೆ ಪ್ರೇರಣೆಯಾಗಿರುವುದು ಭಾರತೀಯರಿಗೆ ಹೆಮ್ಮೆ ಎಂದು ಉಪನ್ಯಾಸಕ ಆದರ್ಶ ಗೋಖಲೆ ಹೇಳಿದ್ದಾರೆ.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ಅರ್ಜುನನನ್ನು ನಿಮಿತ್ತವಾಗಿಸಿ ಜಗದ ಜನರಿಗೆ ಜೀವನಮೌಲ್ಯದ ಪಾಠವನ್ನು ಬೋಧಿಸಿದ ಕೃಷ್ಣನ ಬದುಕು ಅಧ್ಯಯನ ಯೋಗ್ಯ. ಅಚಲ ವಿಶ್ವಾಸವಿದ್ದರೆ ಕಷ್ಟಗಳು ಧುತ್ತನೆ ಪ್ರತ್ಯಕ್ಷವಾದಾಗ ಭಗವಂತ ವಿವಿಧ ರೂಪಗಳಲ್ಲಿ ಬೆಂಗಾವಲಾಗಿ ನಿಲ್ಲುತ್ತಾನೆಂಬ ಶ್ರದ್ಧೆ ನಮ್ಮಲ್ಲಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಭಾರತೀಯತೆಯನ್ನು ರೂಢಿಸುವ ಮೂಲಕ ದೇಸೀ ಸಂಸ್ಕøತಿಯನ್ನು ಉಳಿಸುವ ಕಾರ್ಯ ವಿದ್ಯಾರ್ಥಿಗಳಿಂದಾಗಬೇಕು. ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ ಎಂಬ ತತ್ವವನ್ನು ಅರ್ಥೈಸಿದ ಮರುಕ್ಷಣವೇ ಸಿದ್ಧಿ ಸಾಧ್ಯವಾಗುವುದು. ಧಾರ್ಮಿಕತೆಯ ಭದ್ರ ಬುನಾದಿಯ ಮೇಲೆ ವ್ಯಕ್ತಿತ್ವವನ್ನು ರೂಪಿಸಬೇಕು ಎಂದರು.
ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು. ವೈಷ್ಣವಿ ಮತ್ತು ಬಳಗದವರಿಂದ ಪ್ರಾರ್ಥನೆ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಹಿತಾ ಕಜೆ ಶ್ರೀಮದ್ಭಗವದ್ಗೀತಾ ಪಾರಾಯಣ ನಡೆಸಿದರು. ಉಪನ್ಯಾಸಕಿ ಸುಕನ್ಯಾ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಕಾಶ್ ರಾವ್ ಸ್ವಾಗತಿಸಿ, ಉಪಾಧ್ಯಕ್ಷೆ ಮಾನ್ಯಾ ವಂದಿಸಿದರು. ಅಭಿರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ